ದೇಶದಲ್ಲಿ ಮತ್ತೆ ದರ ಏರಿಕೆ ಬಿಸಿ..? 143 ವಸ್ತುಗಳ ದರ ಹೆಚ್ಚಿಸಲು ಜಿಎಸ್‌ಟಿ ಕೌನ್ಸಿಲ್ ಅಭಿಪ್ರಾಯ ಸಂಗ್ರಹ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ದೇಶದ ಆದಾಯವನ್ನು ಹೆಚ್ಚಿಸಲು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಅಡಿಯಲ್ಲಿ, ಪ್ರಸ್ತಾವಿತ ದರದ ತರ್ಕಬದ್ಧತೆಯ ಭಾಗವಾಗಿ, ಜಿಎಸ್‌ಟಿ ಕೌನ್ಸಿಲ್ 143 ವಸ್ತುಗಳ ಮೇಲಿನ ದರ ಹೆಚ್ಚಳ ಮಾಡಲು ರಾಜ್ಯ ಸರ್ಕಾರಗಳ ಅಭಿಪ್ರಾಯವನ್ನು ಕೇಳಿದೆ.

ಹಪ್ಪಳ, ಬೆಲ್ಲ, ಪವರ್ ಬ್ಯಾಂಕ್‌ಗಳು, ಕೈಗಡಿಯಾರಗಳು, ಸೂಟ್‌ಕೇಸ್‌ಗಳು, ಕೈಚೀಲಗಳು, ಸುಗಂಧ ದ್ರವ್ಯಗಳು/ಡಿಯೋಡರೆಂಟ್‌ಗಳು, ಕಲರ್ ಟಿವಿ ಸೆಟ್‌ಗಳು (32 ಇಂಚುಗಳಿಗಿಂತ ಕಡಿಮೆ), ಚಾಕೊಲೇಟ್, ಚೂಯಿಂಗ್ ಗಮ್‌, ವಾಲ್‌ನಟ್ಸ್, ಕಸ್ಟರ್ಡ್ ಪೌಡರ್, ಆಲ್ಕೊಹಾಲ್ ಮುಕ್ತ ಪಾನೀಯಗಳು, ಸೆರಾಮಿಕ್ ಸಿಂಕ್‌, ವಾಶ್ ಬೇಸಿನ್‌, ಕನ್ನಡಕ, ಫ್ರೇಮ್ಸ್, ಚರ್ಮದ ಉಡುಪು ಮತ್ತು ಬಟ್ಟೆಯ ಬಿಡಿಭಾಗಗಳ ದರ ಹೆಚ್ಚಿಸಲು ಸರ್ಕಾರ ಚಿಂತನೆ ನಡೆಸಿದೆ.

ಈ 143 ವಸ್ತುಗಳ ಪೈಕಿ, ಶೇ 92ರಷ್ಟು ತೆರಿಗೆಯನ್ನು ಶೇ.18ರಷ್ಟು ತೆರಿಗೆ ಸ್ಲ್ಯಾಬ್‌ನಿಂದ ಶೇ.28ರಷ್ಟು ಏರಿಕೆ ಮಾಡಲು ಪ್ರಸ್ತಾಪಿಸಲಾಗಿದೆ. ಈ ಪ್ರಸ್ತಾವಿತ ದರ ಬದಲಾವಣೆಗಳಲ್ಲಿ ಹೆಚ್ಚಿನವು 2019 ರ ಸಾರ್ವತ್ರಿಕ ಚುನಾವಣೆಯ ಪೂರ್ವದಲ್ಲಿ, ನವೆಂಬರ್ 2017 ಮತ್ತು ಡಿಸೆಂಬರ್ 2018 ರಲ್ಲಿ ಕೌನ್ಸಿಲ್ ತೆಗೆದುಕೊಂಡ ದರ ಕಡಿತದ ನಿರ್ಧಾರಗಳ ಬಗ್ಗೆ ಸೂಚಿಸುತ್ತವೆ.

ನವೆಂಬರ್ 2017 ರ ಗೌಹಾಟಿಯಲ್ಲಿ ನಡೆದ ಸಭೆಯಲ್ಲಿ ಸುಗಂಧ ದ್ರವ್ಯ, ಚರ್ಮದ ಉಡುಪು ಮತ್ತು ಪರಿಕರ, ಚಾಕೊಲೇಟ್‌, ಕೋಕೋ ಪೌಡರ್, ಸೌಂದರ್ಯ ಅಥವಾ ಮೇಕಪ್ ಕಿಟ್, ಪಟಾಕಿ, ಪ್ಲಾಸ್ಟಿಕ್‌ ನೆಲದ ಹೊದಿಕೆ, ದೀಪಗಳು, ಧ್ವನಿ ರೆಕಾರ್ಡಿಂಗ್ ಉಪಕರಣ ಮತ್ತು ಶಸ್ತ್ರಸಜ್ಜಿತ ಟ್ಯಾಂಕ್‌ಗಳಂತಹ ವಸ್ತುಗಳ ದರಗಳನ್ನು ಕಡಿಮೆ ಮಾಡಲಾಗಿತ್ತು. ಇದೀಗ ಮತ್ತೊಮ್ಮೆ ದರ ಹೆಚ್ಚಳ ಮಾಡಲು ಪ್ರಸ್ತಾಪಿಸಲಾಗಿದೆ. ಕಲರ್ ಟಿವಿ ಸೆಟ್‌ ಮತ್ತು ಮಾನಿಟರ್‌ (32 ಇಂಚುಗಳಿಗಿಂತ ಕಡಿಮೆ), ಡಿಜಿಟಲ್ ಮತ್ತು ವೀಡಿಯೋ ಕ್ಯಾಮೆರಾ ರೆಕಾರ್ಡರ್‌, ಪವರ್ ಬ್ಯಾಂಕ್‌ಗಳಂತಹ ವಸ್ತುಗಳ GST ದರಗಳನ್ನು ಡಿಸೆಂಬರ್ 2018 ರ ಸಭೆಯಲ್ಲಿ ಕಡಿಮೆ ಮಾಡಲಾಗಿತ್ತು ಇದೀಗ ಇವುಗಳ ದರವೂ ಹೆಚ್ಚಳವಾಗುವ ಸಾಧ್ಯತೆಯಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!