spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, October 16, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಸ್ವಿಗ್ಗಿ, ಜೊಮಾಟೊಗಳೆಲ್ಲದರ ಮೇಲೆ ಜಿಎಸ್ಟಿ ಹಿಡಿತ, ಹಾಗಂತ ಗ್ರಾಹಕನ ಜೇಬಿಗಿಲ್ಲ ಹೆಚ್ಚು’ವರಿ’

- Advertisement -Nitte

ಹೊಸದಿಗಂತ ಆನ್ಲೈನ್ ಡೆಸ್ಕ್:

20 ತಿಂಗಳ ನಂತರ ಸಭೆ ಸೇರಿದ ಜಿಎಸ್ಟಿ ಸಮಿತಿ ತೆಗೆದುಕೊಂಡ ಪ್ರಮುಖ ನಿರ್ಣಯಗಳ ಪೈಕಿ ಸ್ವಿಗ್ಗಿ, ಜೊಮಾಟೊ ಥರದ ಆನ್ಲೈನ್ ಆಹಾರ ವಿತರಕ ಜಾಲವನ್ನು ಶೇ. 5ರ ಜಿಎಸ್ಟಿ ಕೆಳಗೆ ತಂದಿರುವುದೂ ಒಂದಾಗಿದೆ.

ಹಾಗಾದರೆ ಇಂಥ ಆನ್ಲೈನ್ ವೇದಿಕೆಗಳಿಂದ ಆಹಾರ ತರಿಸಿಕೊಳ್ಳುತ್ತಿದ್ದ ಗ್ರಾಹಕ ಹೆಚ್ಚಿನ ಬೆಲೆ ತೆರಬೇಕಾಗಿ ಬರುತ್ತದೆಯೇ ಎಂಬುದು ಸಹಜವಾಗಿ ಹುಟ್ಟುವ ಪ್ರಶ್ನೆ. ಆದರೆ ಉತ್ತರ ನಿರಾಳ- ಹಾಗೇನೂ ಇಲ್ಲ.

ಏಕೆಂದರೆ, ಇದು ಹೊಸ ತೆರಿಗೆಯೇನೂ ಅಲ್ಲ. ತೆರಿಗೆ ನೀಡಬೇಕಾದವರಲ್ಲಿ ಪಾತ್ರದ ಬದಲಾವಣೆ. ಅಂದರೆ, ಈವರೆಗೆ ಯಾವ ರೆಸ್ಟೊರೆಂಟಿನಿಂದ ಈ ಆಹಾರವನ್ನು ಸರಬರಾಜು ಮಾಡಲಾಗುತ್ತಿತ್ತೋ ಅವರು ಜಿಎಸ್ಟಿ ಭರಿಸುತ್ತಿದ್ದರು. ಈಗ ಅವರನ್ನು ಆ ಜವಾಬ್ದಾರಿಯಿಂದ ಮುಕ್ತಮಾಡಿ, ಇವರಿಂದ ಆಹಾರ ಸಂಗ್ರಹಿಸಿ ಗ್ರಾಹಕನಿಗೆ ತಲುಪಿಸುವ ಆನ್ಲೈನ್ ವಹಿವಾಟುದಾರರಿಗೆ ಆ ತೆರಿಗೆ ಕರ್ತವ್ಯವನ್ನು ವಿಧಿಸಲಾಗಿದೆ. 

ಜನವರಿ 1ರಿಂದ ಈ ಹೊಸ ನಿಯಮ ಅನುಷ್ಠಾನವಾಗುತ್ತದೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss