Saturday, August 13, 2022

Latest Posts

ಕೊಡಗು| ಸೆ.22ರಿಂದ ಗುಡ್ಡೆಹೊಸೂರು-ಕಬ್ಬಿನಗದ್ದೆ ರಸ್ತೆ ಬಂದ್

ಹೊಸದಿಗಂತ ವರದಿ, ಕೊಡಗು:

ಗುಡ್ಡೆಹೊಸೂರಿನಿಂದ ಕಬ್ಬಿನಗದ್ದೆವರೆಗಿನ ರಸ್ತೆಯನ್ನು ರಾಜ್ಯ ಹೆದ್ದಾರಿ ಅಭಿವೃದ್ದಿ ಯೋಜನೆ ಅಡಿಯಲ್ಲಿ ಕಾಂಕ್ರೀಟ್ ರಸ್ತೆಯನ್ನಾಗಿ ಮಾರ್ಪಡಿಸಲು ಅನುಕೂಲವಾಗುವಂತೆ ಈ ರಸ್ತೆಯನ್ನು ಸೆ.22ರಿಂದ ನವೆಂಬರ್ 2ರ ವರೆಗೆ ಸಂಪೂರ್ಣ ಬಂದ್ ಮಾಡಿ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಆದೇಶಿಸಿದ್ದಾರೆ.
ರಾಜ್ಯ ಹೆದ್ದಾರಿ-91ರ ಕೊಣನೂರು-ಮಾಕುಟ್ಟ ರಸ್ತೆಯ ಗುಡ್ಡೆಹೊಸೂರುವಿನಿಂದ ಕಬ್ಬಿನಗದ್ದೆವರೆಗಿನ 27.40 ಕಿ.ಮೀ.ನಿಂದ 38 ಕಿ.ಮೀ.ವರೆಗೆ ಆಯ್ದ ಭಾಗಗಳಲ್ಲಿ ಲೋಕೋಪಯೋಗಿ ಇಲಾಖೆ ಕಾಂಕ್ರೀಟ್ ರಸ್ತೆ ನಿರ್ಮಿಸಲು ಮುಂದಾಗಿದೆ. 7 ಮೀಟರ್ ಅಗಲದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣವಾಗಲಿದ್ದು, ಕಾಮಗಾರಿ ಸಂದರ್ಭ ವಾಹನ ಸಂಚಾರ ನಿಷೇಧಿಸುವಂತೆ ಲೋಕೋಪಯೋಗಿ ಇಲಾಖೆ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದೆ.
ಈ ಹಿನ್ನೆಲೆಯಲ್ಲಿ ಈ ರಸ್ತೆಯಲ್ಲಿ ಸಂಚಾರ ನಿಷೇಧಿಸಿರುವ ಜಿಲ್ಲಾಧಿಕಾರಿಗಳು, ಪರ್ಯಾಯವಾಗಿ ಕುಶಾಲನಗರ-ಕೊಡಗರಹಳ್ಳಿ-ಕಂಬಿಬಾಣೆ-ಚಿಕ್ಲಿಹೊಳೆ-ರಂಗಸಮುದ್ರ ಅಥವಾ ಕುಶಾಲನಗರ-ಸುಂಟಿಕೊಪ್ಪ-ಚೆಟ್ಟಳ್ಳಿ-ಒಂಟಿಅಂಗಡಿ ಮಾರ್ಗವನ್ನು ಸಾರ್ವಜನಿಕರು ಬಳಸುವಂತೆ ಸೂಚಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss