Thursday, February 9, 2023

Latest Posts

ಕರ್ನಾಟಕದಲ್ಲಿ ಕೊರೋನಾ ನಿರ್ವಹಣೆಗೆ ಮಾರ್ಗಸೂಚಿ? ಇಂದು ಮಹತ್ವದ ಸಭೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಚೀನಾ ಸೇರಿದಂತೆ ಸಾಕಷ್ಟು ದೇಶಗಳಲ್ಲಿ ಕೊರೋನಾ ಅಬ್ಬರಿಸಿದ್ದು, ನಿಯಂತ್ರಿಸಲಾಗದ ಪರಿಸ್ಥಿತಿಗೆ ಬರುತ್ತಿವೆ.
ಬೇರೆ ದೇಶಗಳಲ್ಲಿ ಕೊರೋನಾ ವೇಗವಾಗಿ ಏರುತ್ತಿರುವ ರೀತಿಯಿಂದ ರಾಜಧಾನಿ ಬೆಂಗಳೂರಿನಲ್ಲಿಯೂ ಭೀತಿ ಹೆಚ್ಚಾಗಿದೆ. ಕೋವಿಡ್ ಹರಡುವಿಕೆ, ತಡೆಗಟ್ಟುವಿಕೆ ಹಾಗೂ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡುವ ಬಗ್ಗೆ ಇಂದು ಮಹತ್ವದ ಸಭೆ ನಡೆಯಲಿದೆ.

ವರ್ಷಾಂತ್ಯವಾದ ಕಾರಣ ಸಾಕಷ್ಟು ಸಿಬ್ಬಂದಿ ರಜೆಯಲ್ಲಿದ್ದಾರೆ. ಇನ್ನು ಹಲವರು ಬೆಳಗಾವಿಯಲ್ಲಿದ್ದಾರೆ. ಹೀಗಾಗಿ ಇಂದು ಸಭೆ ನಡೆಯುವ ಸಾಧ್ಯತೆ ಹೆಚ್ಚಿದೆ. ವಿಪತ್ತು ನಿರ್ವಹಣಾ ಇಲಾಖೆಯ ಸಚಿವರಾದ ಆರ್. ಅಶೋಕ್ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಲಿದೆ. ಹೆಚ್ಚು ಜನಸಂದಣಿ ಇರುವ ಬೆಂಗಳೂರಿಗೆ ಬೇರೆ ಹಾಗೂ ಸಮಗ್ರ ಕರ್ನಾಟಕಕ್ಕೆ ಬೇರೆ ಬೇರೆ ಮಾರ್ಗಸೂಚಿ ಪ್ರಕಟಿಸುವ ಸಾಧ್ಯತೆ ಇದೆ.

ಮಾಸ್ಕ್ ಕಡ್ಡಾಯಗೊಳಿಸುವುದರಿಂದ ಕೋವಿಡ್ ಹರಡುವಿಕೆ ಶೇ.90ರಷ್ಟು ತಡೆಯುವ ಸಾಧ್ಯತೆ ಹೆಚ್ಚು ಎಂದು ವೈದ್ಯರು ಸೂಚಿಸಿದ್ದು, ಅಂತೆಯೇ ಮಾಸ್ಕ್ ಕಡ್ಡಾಯವಾಗಲಿದೆ. ಡಿಸೆಂಬರ್ ಕೊನೆ ಸಾಲು ಸಾಲು ರಜೆ ಇರುವ ಕಾರಣ ಸಂಭ್ರಮಾಚರಣೆಗಳಲ್ಲಿ ಜನ ತೊಡಗಿದ್ದು, ಹೊಸ ವರ್ಷಾಚರಣೆ ವೇಳೆ ಜನದಟ್ಟಣೆ ಹೆಚ್ಚುವ ಸಾಧ್ಯತೆ ಇದೆ. ಹಾಗಾಗಿ ಅದಕ್ಕೂ ಮುನ್ನವೇ ಕೋವಿಡ್ ಮಾರ್ಗಸೂಚಿ ಬರುವ ಸಾಧ್ಯತೆ ಇದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!