Friday, March 5, 2021

Latest Posts

ಗುಜರಾತ್ ಚುನಾವಣಾ ಗೆಲುವು ಹಲವು ತಪ್ಪು ಗ್ರಹಿಕೆಗಳಿಗೆ ಸ್ಪಷ್ಟತೆ: ಅಮಿತ್ ಶಾ

ಹೊಸದಿಗಂತ ಆನ್ ಲೈನ್ ಡೆಸ್ಕ್:

ಗುಜರಾತ್​ನ ಆರು ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿ ದಾಖಲೆಯ ಗೆಲುವು ಸಾಧಿಸಿದೆ.
ಇನ್ನು ಬಿಜೆಪಿ ಭರ್ಜರಿ ಜಯಭೇರಿಗೆಕೇಂದ್ರ ಗೃಹ ಸಚಿವ ಅಮಿತ್ ಶಾ ಹರ್ಷ ವ್ಯಕ್ತಪಡಿಸಿದ್ದು, ಈ ಗೆಲುವು ರೈತರ ಪ್ರತಿಭಟನೆ, ಕೋವಿಡ್​​-19 ವಿಚಾರವಾಗಿ ಬಿಜೆಪಿ ಮೇಲೆ ಇರುವ ತಪ್ಪು ಗ್ರಹಿಕೆ ಕೆಡವಿಹಾಕಿದೆ.
ಲೇಹ್​-ಲಡಾಖ್​ನಿಂದ ಹೈದರಾಬಾದ್ ಮತ್ತು ಗುಜರಾತ್​ವರೆಗೆ ಹಲವಾರು ತಪ್ಪು ಕಲ್ಪನೆ ಬಿತ್ತಲು ಪ್ರತಿಪಕ್ಷಗಳು ಪ್ರಯತ್ನಿಸಿದ್ದವು. ಆದರೆ ಈ ಚುನಾವಣೆ ಫಲಿತಾಂಶ ಇದಕ್ಕೆ ಉತ್ತರವಾಗಿದ್ದು, ಪಶ್ಚಿಮ ಬಂಗಾಳ ಚುನಾವಣೆಯಲ್ಲೂ ಇದೇ ರೀತಿಯ ಫಲಿತಾಂಶ ಬರಲಿದೆ ಎಂದಿದ್ದಾರೆ.
ಇಂದಿನ ಫಲಿತಾಂಶ ಗುಜರಾತ್​ನ ಅತ್ಯುತ್ತಮ ಫಲಿತಾಂಶಗಳಲ್ಲಿ ಒಂದಾಗಿದೆ ಎಂದಿದ್ದಾರೆ. ಬಿಜೆಪಿ ತಾನು ಸ್ಪರ್ಧೆ ಮಾಡಿದ್ದ ಸುಮಾರು 85 ಪ್ರತಿಶತ ಸ್ಥಾನಗಳಲ್ಲಿ ಗೆಲುವು ದಾಖಲು ಮಾಡಿದ್ದು, ಕಾಂಗ್ರೆಸ್​ ನೆಲಕಚ್ಚಿದೆ ಎಂದಿದ್ದಾರೆ.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

Don't Miss