ಕಾರಿನಡಿ ಸಿಲುಕಿದ್ದ ಬೈಕ್‌ ಸವಾರನನ್ನು 12 ಕಿ.ಮೀ. ಎಳೆದೊಯ್ದಿದ್ದವ ಈಗ ಪೊಲೀಸರ ಅತಿಥಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಸೂರತ್‌ನಲ್ಲಿ ಅಪಘಾತಕ್ಕೀಡಾಗಿ ಕಾರಿನಡಿ ಸಿಲುಕಿದ್ದ ಬೈಕ್ ಸವಾರನನ್ನು 12 ಕಿಲೋಮೀಟರ್ ಎಳೆದೊಯ್ದು ಕೊಂದ ಚಾಲಕನನ್ನು ಗುಜರಾತ್ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಬೈರೇನ್ ಲಾಡುಮೋರ್ ಆಹಿರ್ ಎಂದು ಗುರುತಿಸಲಾಗಿದೆ.

ಸೂರತ್ ನ ಹೊರವಲಯದ ಪಾಲ್ಸಾನಾ ಎಂಬಲ್ಲಿ ಡಿ. 18ರಂದು ಈ ಘಟನೆ ನಡೆದಿತ್ತು. ಪತಿಯೊಂದಿಗೆ ಪತ್ನಿ ಚಲಿಸುತ್ತಿದ್ದ ವೇಳೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಬೈಕ್‌ ಸವಾರನು ಕಾರಿನಡಿ ಸಿಲುಕಿದ್ದ ಪರಿಣಾಮ ಆತನನ್ನು 12 ಕಿ.ಮೀ ಎಳೆದೊಯ್ದಿದ್ದು, ಬೈಕ್‌ ಚಾಲಕ ಮೃತ ಪಟ್ಟಿರುತ್ತಾನೆ.

ಅಪಘಾತದ ನಂತರ ಆರೋಪಿಯು ಮುಂಬೈ ಮತ್ತು ರಾಜಸ್ಥಾನದಲ್ಲಿ ತಲೆಮರೆಸಿಕೊಂಡಿದ್ದನು. ಗುರುವಾರ ಕಾಮ್ರೇಜ್ ಟೋಲ್ ಪ್ಲಾಜಾದಲ್ಲಿ ಸೂರತ್‌ಗೆ ಪ್ರವೇಶಿಸುತ್ತಿದ್ದ ಆರೋಪಿಯನ್ನು ಬಂಧಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!