RECIPE| ಹಲಸಿನ ಸೀಸನ್‌ನಲ್ಲಿ ಹೀಗೆ ಮಾಡಿ ʻಗುಜ್ಜೆʼ ಹುಳಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಇದೀಗ ಹಲಸಿನ ಸೀಸನ್…‌ ಹಲಸು ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಎಳೆಯ ಹಲಸಿನಿಂದ ಹಿಡಿದು ಹಣ್ಣಿನ ತನಕವೂ ಪ್ರತೀ ಹಂತದಲ್ಲೂ ಒಂದಲ್ಲಾ ಒಂದು ರೀತಿಯಲ್ಲಿ ಅಡುಗೆ ತಯಾರಿಸಲು ಹಲಸು ಬಳಕೆ ಮಾಡಲಾಗುತ್ತದೆ. ಎಳೆ ಹಲಸು(ಗುಜ್ಜೆ) ಹುಳಿ ಒಂದು ರುಚಿಕರ ಪದಾರ್ಥ. ಇದರ ತಯಾರಿ ಇಂದಿನ ಮೆನು.

ಬೇಕಾಗುವ ಸಾಮಾಗ್ರಿ:

ಎಳೆ ಹಲಸು, ಅರಶಿನ ಹುಡಿ ಚಿಟಿಕಿ, ಉಪ್ಪು, ಬೆಲ್ಲ, ಹುಣಸೆಹುಳಿ ರಸ, ಮಸಾಲೆ ಸಮಾಗ್ರಿ. ತೆಂಗಿನೆಣ್ಣೆ, ತೆಂಗಿನ ಕಾಯಿ, ಕರಿಬೇವು.

ಮಾಡುವ ವಿಧಾನ:

ಹಲಸಿನ ಸಿಪ್ಪೆ ತೆಗೆದು ಸಣ್ಣದಾಗಿ ಹೆಚ್ಚಿಟ್ಟುಕೊಳ್ಳಿ. ಹೆಚ್ಚಿದ ಹೋಳುಗಳನ್ನು ನೀರಿನೊಂದಿಗೆ ಹುಣಸೆಹುಳಿ ರಸ, ಬೆಲ್ಲ, ಉಪ್ಪು ಹಾಕಿ ಬೇಯಲು ಇಡಿ. ತೆಂಗಿನಕಾಯಿ ತುರಿದಿಟ್ಟುಕೊಳ್ಳಿ. ಬಾಣಲೆಯಲನ್ನು ಬಿಸಿಗಿಟ್ಟುಕೊಳ್ಳಿ. ನಾಲ್ಕು ಒಣಮೆಣಸು, ಉದ್ದಿನಬೇಳೆ,ಕೊತ್ತಂಬರಿ,ಎರಡೆಸಳು ಬೆಳ್ಳುಳ್ಳಿ ಹಾಕಿ ಪರಿಮಳ ಬರುವ ತನಕ ಹುರಿಯಿರಿ. ಹುರಿದ ಪದಾರ್ಥಗಳನ್ನು ಕಾಯಿಯೊಂದಿಗೆ ಸೇರಿಸಿ ಮಿಕ್ಸಿಯಲ್ಲಿ ನುಣುಪಾಗಿ ಕಡೆದುಕೊಳ್ಳಿ. ಒಲೆಯಲ್ಲಿ ಬೇಯಲಿಟ್ಟ ಹೋಳುಗಳಿಗೆ ಸೇರಿಸಿ. ಕುದಿಬಂದ ನಂತರ ಒಗ್ಗರಣೆ ನೀಡಿ. ರುಚಿಕರವಾದ ಗುಜ್ಜೆ ಹುಳಿ ಮಧ್ಯಾಹ್ನದ ಊಟಕ್ಕೆ ಸೂಪರ್‌ ಆಗಿರುತ್ತೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!