ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
……………………………………
ಹೊಸದಿಗಂತ ಆನ್ ಲೈನ್ ಡೆಸ್ಕ್:
ಅತಿದೊಡ್ಡ ಪಾದರಕ್ಷೆಗಳ ತಯಾರಕ ಹಾಗೂ ಮಾರಾಟಗಾರ ಬಾಟಾ ಇಂಡಿಯಾ ಲಿಮಿಟೆಡ್ನ ಹೊಸ ಸಿಇಒ ಆಗಿ ಗುಂಜನ್ ಷಾ ನೇಮಕಗೊಂಡಿದ್ದಾರೆ ಎಂದು ಬಾಟಾ ಇಂಡಿಯಾ ಘೋಷಿಸಿದೆ.
ಕಳೆದ ವರ್ಷವಷ್ಟೇ ಬಾಟಾ ಬ್ರ್ಯಾಂಡ್ಸ್ನ ಜಾಗತಿಕ ಸಿಇಒ ಆಗಿ ಸಂದೀಪ್ ಕಟಾರಿಯಾ ಆಯ್ಕೆಗೊಂಡ ಬಳಿಕ ಇದೀಗ ಬ್ರಿಟಾನಿಯಾ ಇಂಡಸ್ಟ್ರೀಸ್ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಗುಂಜನ್ ಷಾ ಸಿಇಒ ಆಗಿ ನೇಮಕವಾಗಿದ್ದಾರೆ.
ಹೊಸ ಸಿಇಒ ಆಗಿ ಆಯ್ಕೆಗೊಂಡಿರು ಗುಂಜನ್ ಷಾ ಜೂನ್ 21ರಂದು ಕಂಪನಿಗೆ ಸೇರಲು ಸಿದ್ದರಾಗಿದ್ದು, 2021ರ ಜೂನ್ 21ರಿಂದ ಜಾರಿಗೆ ಬರುವಂತೆ ಐದು ವರ್ಷಗಳ ಅವಧಿಗೆ ಕಂಪನಿಯ ಸಿಇಒ ಆಗಿ ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ಕಂಪನಿಯು ಸ್ಟಾಕ್ ಎಕ್ಸ್ಚೇಂಜ್ ಫೈಲಿಂಗ್ನಲ್ಲಿ ತಿಳಿಸಿದೆ.