SHOCKING | ಕೇರಳ ಸಿಎಂ‌ ಪಿಣರಾಯಿ ಮನೆ ‘ಕ್ಲಿಫ್ ಹೌಸ್’ನಲ್ಲಿ ಗುಂಡಿನ ಸದ್ದು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಅಧಿಕೃತ ನಿವಾಸ ಕ್ಲಿಫ್ ಹೌಸ್ ನಲ್ಲಿ ಗುಂಡಿನ ಸದ್ದು ಕೇಳಿಸಿದೆ. ಈ ಗುಂಡು ಭದ್ರತಾ ಸಿಬ್ಬಂದಿ ಕೈನಲ್ಲಿದ್ದ ಬಂದೂಕಿನಿಂದ ಸಿಡಿದಿದೆ.

ಮಂಗಳವಾರ ಬೆಳಗ್ಗೆ9:30 ರ ಸುಮಾರಿಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ವಿಧಾನಸಭೆ ಅಧಿವೇಶನದಲ್ಲಿ ಪಾಲ್ಗೊಳ್ಳಲು ಕ್ಲಿಫ್ ಹೌಸ್‌ನಿಂದ ನಿರ್ಗಮಿಸಿದ್ದರು. ಇದಾದ ಕೆಲವೇ ಸಮಯದಲ್ಲಿ ಈ ಘಟನೆ ನಡೆದಿದೆ.


ಭದ್ರತಾ ಸಿಬ್ಬಂದಿ ಹೊರ ಠಾಣೆಯಲ್ಲಿ ಶಸ್ತ್ರಾಸ್ತ್ರಗಳನ್ನು ಸ್ವಚ್ಛಗೊಳಿಸುತ್ತಿದ್ದಾಗ ಆಕಸ್ಮಿಕವಾಗಿ ಬಂದೂಕಿನಿಂದ ಗುಂಡು ಹಾರಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಘಟನೆಯಿಂದಾಗಿ ಯಾರಿಗೂ ಹಾನಿಯಾಗಿಲ್ಲ. ಆದರೆ ಕ್ಲಿಫ್ ಹೌಸ್ ಹೈ ಸೆಕ್ಯುರಿಟಿ ಝೋನ್ ಆಗಿರುವುದರಿಂದ ಘಟನೆಯನ್ನು ಗಂಭೀರವಾಗಿ ಪರಿಗಣಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!