ಗುರೂಜಿ ಒಳ್ಳೆಯವರು, ಅವರನ್ನ ಕೊಂದು ತಪ್ಪು ಮಾಡಿದ್ರು ನನ್ನ ಗಂಡ…

ಹೊಸದಿಗಂತ ವರದಿ, ಹುಬ್ಬಳ್ಳಿ:
ಚಂದ್ರಶೇಖರ ಗುರೂಜಿಯನ್ನು ನನ್ನ ಗಂಡ ಕೊಲೆ‌ ಮಾಡಲು ಕಾರಣವೇನು ಎಂದು ಗೋತ್ತಿಲ್ಲ. ಗುರೂಜಿ ಬಹಳ‌ ಒಳ್ಳೆಯವರು. ಅವರನ್ನು ಕೊಲೆ ಮಾಡುವಾಗ ಮೂಲಕ ನನ್ನ ಗಂಡ ತಪ್ಪು ಮಾಡಿದ್ದಾರೆ…
ಹೀಗೆಂದು ಕಣ್ಣೀರಾದರು ಚಂದ್ರಶೇಖರ ಗುರೂಜಿ ಹತ್ಯೆ ಆರೋಪಿ ಮಹಾಂತೇಶ ಶಿರೂರ ಅವರ ಪತ್ನಿ ವನಜಾಕ್ಷಿ…
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು 2005 ರಲ್ಲಿ ಸರಳ ಜೀವನ ಸಂಸ್ಥೆ ಸೇರಿಕೊಂಡಿದ್ದೆ. 2019ರಲ್ಲಿ ಮುಂಬೈಗೆ ವರ್ಗಾವಣೆ ಮಾಡಿದ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಿದ್ದೆ. ನನ್ನ ಪತಿ ಕೂಡಾ 2016ರಲ್ಲಿ ಕೆಲಸ ಬಿಟ್ಟಿದ್ದರು. ಯಾಕೆ ಬಿಟ್ಟಿದ್ದರು ಎಂಬುದ ಗೊತ್ತಿಲ್ಲ. ಪತಿ ಹೆಸರಿನಲ್ಲಿ ಗುರೂಜಿ ಆಸ್ತಿ ಮಾಡಿರುವ ಬಗ್ಗೆ ನನಗೆ ಗೊತ್ತಿಲ್ಲ ಎಂದು ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!