Saturday, August 13, 2022

Latest Posts

ಗುರುಮಠಕಲ್ ಪುರಸಭೆ: 12.6 ಲಕ್ಷ ಉಳಿತಾಯ ಬಜೆಟ್ ಮಂಡನೆ

ಹೊಸ ದಿಗಂತ ವರದಿ, ಗುರುಮಠಕಲ್ (ಯಾದಗಿರಿ) :

2021-22 ನೇ ಸಾಲಿನ ಗುರುಮಠಕಲ ಪುರಸಭೆ 12.06 ಲಕ್ಷ ಉಳಿತಯ ಬಜೆಟ ಮಂಡಿಸಿದ್ದು, 4.33 ಕೋಟಿ ರೂ.ಗಳ ಆದಾಯ ನಿರೀಕ್ಷಿ ಹೊಂದಲಾಗಿದೆ ಎಂದು ಪುರಸಭೆ ಲೆಕ್ಕಾಧಿಕಾರಿ ಅನೀಲ್ ಯರಗಾಳ ತಿಳಿಸಿದರು.
ಅಧ್ಯಕ್ಷ ಪಾಪಣ್ಣ ಮನ್ನೆ ಅವರ ಅಧ್ಯಕ್ಷತೆಯಲ್ಲಿ ನಡೆದ ಬಜೆಟ ಸಭೆಯಲ್ಲಿ ಮುಖ್ಯಾಧಿಕಾರಿ ಶರಣಪ್ಪ ಮಡಿವಾಳ ಅವರು ಪುರಸಭೆ ಆಯ- ವ್ಯಯ ಲೆಕ್ಕ ಮಂಡನೆಯಲ್ಲಿ ರಾಜಸ್ವ ಸ್ವೀಕೃತಿ ಖಾತೆಯಿಂದ 88609200.00 ಹಾಗೂ ರಾಜಸ್ವ ಪಾವತಿಯಿಂದ 87905000.00 ನಿರೀಕ್ಷಿಸಲಾಗಿದೆ. ಬಂಡವಾಳ ಖಾತೆಯ ಸ್ವೀಕೃತಿಯಿಂದ 3,30,62,500.00 ಹಾಗೂ ಬಂಡವಾಳ ಪಾವತಿಯಿಂದ 33,03,25,000.00 ಮತ್ತು ಅಸಾಧಾರಣ ಖಾತೆಯ ಸ್ವೀಕೃತಿಯಿಂದ 1,40,57,100.00 ಅಸಾಧಾರಣ ಖಾತೆಯ ಪಾವತಿಯ 1,37,93,600.00 ಗಳ ಹೆಚ್ಚುವರಿ ಕೊರತೆಯನ್ನು ನೀಗಿಸಿ 12,67,700.00 ಲಕ್ಷ ರೂಪಾಯಿಗಳ ಉಳಿತಯ ಬಜೆಟನ್ನು ಮಂಡಿಸಿದರು.
ಮುಖ್ಯಾಧಿಕಾರಿ ಶರಣಪ್ಪ ಮಡಿವಾಳ ಮಾತನಾಡಿ, ಪ್ರಸಕ್ತ ಸಾಲಿನ ಎಸ್.ಎಫ್.ಸಿ ಮತ್ತು 15 ನೇ ಹಣಕಾಸು ಯೋಜನೆಯಿಂದ ಸುಮಾರು 4.34 ಕೋಟಿ ರೂಗಳ ಅನುದಾನಗಳ ನಿರೀಕ್ಷೆಯನ್ನು ಹೊಂದಿದ್ದೇವೆ. ಈ ಹಣದಲ್ಲಿ ಪಟ್ಟಣದಲ್ಲಿ ಉತ್ತಮ ಚರಂಡಿ, ರಸ್ತೆ, ಆರೋಗ್ಯ, ಕಸ ವಿಲೇವಾರಿ ಹಾಗೂ ಕುಡಿಯುವ ನೀರಿನ ವ್ಯವಸ್ಥೆಗೆ ಆದ್ಯತೆ ನೀಡಲಾಗುವುದು.
ಗುರುಮಠಕಲ್ ಪಟ್ಟಣವು ತಾಲೂಕಾ ಕೇಂದ್ರವಾಗಿದ್ದರಿAದ ವೇಗವಾಗಿ ಬೆಳೆಯುತ್ತಿದ್ದು, ಮೂಲಭೂತ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಹಲವಾರು ಯೋಜನೆಗಳು ಪ್ರಗತಿಯಲ್ಲಿವೆ. ಕಳೆದ ವರ್ಷ ಹಲವಾರು ಅನುದಾನಗಳು ತಡವಾಗಿ ಬಂದ ಕಾರಣ ಯೋಜನೆಗಳು ತಡವಾಗಿ ಪ್ರಾರಂಭವಾಗಿವೆ ಎಂಬ ಮಾಹಿತಿಯನ್ನು ಸಭೆಗೆ ನೀಡಿದರು.
ಸಾರ್ವಜನಿಕರಿಗೆ ಅನುಕೂಲವಾಗುವಂತೆ ಪುರಸಭೆಗ ತೆರಿಗೆ ಮತ್ತು ಕರಪಾವತಿಯ ಸಲುವಾಗಿ ಶೀಘ್ರದಲ್ಲಿಯೇ ಡಿಜಿಟಲ್ ಪಾವತಿ ವ್ಯವಸ್ಥೆ ಮಾಡಲಾಗುವುದು ಎಂದರು.
ಪರಿಶಿಷ್ಟ ಜಾತಿ ಮತ್ತು ಪಂಗಡ, ವಿಕಲಚೇತನರಿಗೆ ವಿಶೇಷ ಯೋಜನೆಗಳಲ್ಲಿ ಸೌಲಭ್ಯ ಸಿಗಲಿದೆ ಎಂದು ತಿಳಿಸಿದರು.
ಪುರಸಭೆಗೆ ನಾಮನಿರ್ದೇಶಿತ ಸದಸ್ಯ ಹಾಗೂ ಆಶ್ರಯ ಯೋಜನಾ ಸಮೀತಿಗೆ ಆಯ್ಕೆಯಾದ ಸದಸ್ಯರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಸಭೆಯಲ್ಲಿ ಪುರಸಭೆ ಉಪಾಧ್ಯಕ್ಷೆ ಭೀಮಮ್ಮ ಸೇರಿದಂತೆ ಸದಸ್ಯರು, ರವೀಂದ್ರರೆಡ್ಡಿ ಶೇರಿ, ಖಾಜಾಮೈನೋದ್ದೀನ್, ಅನ್ವರ್, ಸಿರಾಜ ಚಿಂತಕುAಟಿ, ಬಾಲು ದಾಸರಿ, ಕೃಷ್ಣಾ ಮೇದಾರ, ಪಾಪಾರೆಡ್ಡಿ, ಆಶಣ್ಣ ಬುದ್ಧ, ನರಸಪ್ಪ ಗಡ್ಡಲ್, ನವಾಜ್ ರೆಡ್ಡಿ ಪೋಲಿಸ್ ಪಾಟೀಲ್, ನರ್ಮದಾ ನವಿತಾ ಕಂದೂರ್, ಲಕ್ಷ್ಮೀಬಾಯಿ ಚೌದ್ರಿ, ಜಯಶ್ರೀ, ಪ್ರೀತಿ ಬಾಯಿ ಜೀತ್ರೀ, ಹಾಗೂ ಸಿಬ್ಬಂದಿ ಹಾಜರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss