Friday, March 5, 2021

Latest Posts

ಎಸಿಬಿ ಬಲೆಗೆ ಬಿದ್ದ ಗುರುಮಠಕಲ್ ತಹಸೀಲ್ದಾರ್ ಜಿಡಗೆ

ಹೊಸದಿಗಂತ ವರದಿ, ಯಾದಗಿರಿ:

ಜಿಲ್ಲೆಯ ಗುರುಮಠಕಲ್ ತಾಲೂಕಿನ ತಹಸೀಲ್ದಾರ್ ಸಂಗಮೇಶ್ ಜಿಡಗೆ ತಮ್ಮ ಕಚೇರಿಯಲ್ಲಿ ರೂ. 5 ಸಾವಿರ ಲಂಚ ಪಡೆಯುತ್ತಿರುವಾಗ ಎಸಿಬಿ ಬಲೆಗೆ ಬಿದ್ದಿದ್ದಾರೆ.
ದೂರುದಾರ ದೊಡ್ಡ ಬನ್ನಪ್ಪ ಅವರ ತಂದೆಯ ಹೆಸರಿನಲ್ಲಿದ್ದ ಹೊಲವನ್ನು ಮಗನ ಹೆಸರಿಗೆ ರ್ಗಾವಣೆ ಮಾಡಲು ತಹಸೀಲ್ದಾರ್ ರೂ. 15 ಸಾವಿರ ರೂಗಳು ಬೇಡಿಕೆ ಇಟ್ಟಿದ್ದರು. ಬೇಡಿಕೆಯ ಮೊದಲ ಕಂತಿನ ಹಣ 5 ಸಾವಿರ ರೂ ಪಡೆಯುವಾಗ ಎಸಿಬಿ ಬಲೆಗೆ ಬಿದ್ದಿದ್ದಾರೆ ಎಂದು ಎಸಿಬಿ ಪೋಲಿಸ್‌ರು ಮಾಹಿತಿ ನೀಡಿದ್ದಾರೆ. ಎಸಿಬಿ ಎಸ್‌ಪಿ ಮಹೇಶ ಮೇಘಣ್ಣನವರ್, ಡಿವೈಎಸ್ಪಿ ಉಮಾಶಂಕರ್ ಗುರುಪಾದ ಬಿರಾದಾರ, ಸಿಬ್ಬಂದಿ ಶರಣ ಬಸವ, ಗುತ್ತಪ್ಪಗೌಡ, ಮರೆಪ್ಪ, ಇಜಯಕುಮಾರ್, ಅಮರನಾಥ್, ರವಿ, ಈರನ್ಣ ದಾಳಿ ಸಮಯದಲ್ಲಿ ಇದ್ದರು.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

Don't Miss