ಮಾನವರಿಗೆ ಎಚ್5ಎನ್1 ಸೋಂಕು ಹರಡಿಲ್ಲ: ಹೆಸರಘಟ್ಟದಲ್ಲಿ ಹಕ್ಕಿಜ್ವರ ನಿಯಂತ್ರಣ ಯಶಸ್ವಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಬೆಂಗಳೂರು ಹೊರವಲಯದ ಹೆಸರಘಟ್ಟದಲ್ಲಿ ಪತ್ತೆಯಾಗಿದ್ದ ಎಚ್5ಎನ್1 ಹಕ್ಕಿಜ್ವರ ಪ್ರಕರಣದ ಬಳಿಕ ಕೈಗೊಳ್ಳಲಾದ ಕಟ್ಟುನಿಟ್ಟಿನ ನಿಗಾವಳಿ ಮತ್ತು ನಿಯಂತ್ರಣ ಕ್ರಮಗಳು ಫಲಕಾರಿಯಾಗಿವೆ ಎನ್ನಲಾಗಿದೆ. ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೀಡಿರುವ ಮಾಹಿತಿಯಂತೆ, ಇದುವರೆಗೆ ಈ ಸೋಂಕು ಮಾನವರಿಗೆ ಹರಡಿರುವ ಯಾವುದೇ ಪ್ರಕರಣ ದಾಖಲಾಗಿಲ್ಲ. ಕೋಳಿ ಸಾಕಣೆ ತರಬೇತಿ ಕೇಂದ್ರದಲ್ಲಿದ್ದ ಕೋಳಿಗಳಲ್ಲಿ ಏಪ್ರಿಲ್ 14ರಂದು ಸೋಂಕು ದೃಢಪಟ್ಟ ಬಳಿಕ ಆರೋಗ್ಯ ಮತ್ತು ಪಶುಸಂಗೋಪನಾ ಇಲಾಖೆಗಳು ತುರ್ತು ಕ್ರಮಕ್ಕೆ ಮುಂದಾಗಿದ್ದವು. ಸೋಂಕು ಕಂಡುಬಂದ ಪ್ರದೇಶದ … Continue reading ಮಾನವರಿಗೆ ಎಚ್5ಎನ್1 ಸೋಂಕು ಹರಡಿಲ್ಲ: ಹೆಸರಘಟ್ಟದಲ್ಲಿ ಹಕ್ಕಿಜ್ವರ ನಿಯಂತ್ರಣ ಯಶಸ್ವಿ