ದೆಹಲಿ ಏಮ್ಸ್ ಮೇಲೆ ಹ್ಯಾಕರ್ಸ್ ಕಣ್ಣು: ರೋಗಿಗಳ ವೈಯಕ್ತಿಕ ಡೇಟಾ ಹ್ಯಾಕ್?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ದೆಹಲಿಯ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (AIIMS) ಮೇಲೆ ನಡೆದ ಸೈಬರ್ ದಾಳಿಯಿಂದ ಲಕ್ಷಾಂತರ ರೋಗಿಗಳ ವೈಯಕ್ತಿಕ ಡೇಟಾ ಮೇಲೆ ಕನ್ನ ಬಿದಿದ್ದು, ಕದ್ದಿದ್ದಾರೆ ಎನ್ನಲಾಗುತ್ತಿದೆ.
ಚೀನಾದ ಹ್ಯಾಕರ್‌ಗಳು ನಡೆಸಿದಸೈಬರ್ ದಾಳಿಯು ಒಟ್ಟು ಐದು ಮುಖ್ಯ ಸರ್ವರ್‌ಗಳನ್ನು ಗುರಿಯಾಗಿದ್ದು, . ಕದ್ದ ಡೇಟಾವನ್ನು ಇಂಟರ್ನೆಟ್‌ನ ಗುಪ್ತ ಭಾಗವಾದ ಡಾರ್ಕ್ ವೆಬ್‌ನಲ್ಲಿ ಮಾರಾಟ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಏಮ್ಸ್ (AIIMS) ಡೇಟಾಕ್ಕಾಗಿ ಡಾರ್ಕ್ ವೆಬ್‌ನಲ್ಲಿ 1,600 ಕ್ಕೂ ಹೆಚ್ಚು ಹುಡುಕಾಟಗಳನ್ನು ತೋರಿಸಿದೆ. ಕದ್ದ ಡೇಟಾದಲ್ಲಿ ರಾಜಕಾರಣಿಗಳು ಮತ್ತು ಸೆಲೆಬ್ರಿಟಿಗಳು ಸೇರಿದಂತೆ ವಿವಿಐಪಿಗಳ ವಿವರಗಳಿವೆ.ಒಟ್ಟು ಐದು ಸರ್ವರ್‌ಗಳು ಹ್ಯಾಕ್ ಆಗಿವೆ ಎಂದು ಐಎಫ್‌ಎಸ್‌ಒ ಮೂಲಗಳು ಬಹಿರಂಗಪಡಿಸಿವೆ. ಎಫ್‌ಎಸ್‌ಎಲ್ ತಂಡವು ಈಗ ಡೇಟಾ ಸೋರಿಕೆಯನ್ನು ಪರಿಶೀಲಿಸುತ್ತಿದೆ.
ಇದರಿಂದ ಯಾವುದೇ ಮಾಹಿತಿ ಕಳೆದು ಹೋಗಿಲ್ಲ ಎಂದು ಐಎಫ್‌ಎಸ್‌ಒ ಅಧಿಕಾರಿಗಳು ಹೇಳುತ್ತಿದ್ದಾರೆ.ಹ್ಯಾಕರ್‌ಗಳ ಮುಖ್ಯ ಉದ್ದೇಶ ಹಣ ಸುಲಿಗೆಯಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.
ಏಮ್ಸ್ (AIIMS) ನಿಂದ ಅಂದಾಜು 200 ಕೋಟಿ ರೂಪಾಯಿ ಕ್ರಿಪ್ಟೋಕರೆನ್ಸಿಗೆ ಹ್ಯಾಕರ್‌ಗಳು ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!