ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………
ಹೊಸದಿಗಂತ ವರದಿ, ಬೀದರ್
ಕೋವಿಡ್ ಸೋಂಕಿನ ಕಾರಣದಿಂದಾಗಿ ಬೀದರ್ – ಕಲಬುರಗಿ ಸ್ಥಗಿತಗೊಂಡಿದ್ದ ಡೆಮು ಪ್ಯಾಸೆಂಜರ್ ರೈಲು ನಾಳೆಯಿಂದ
ಜು.19ರಿಂದ ಆರಂಭವಾಗಲಿದೆ ಎಂದು ಕೇಂದ್ರ ಸಚಿವ ಭಗವಂತ ಖುಬಾ ಅವರು ತಿಳಿಸಿದ್ದಾರೆ.
ನಾಳೆಯಿಂದ ಬೀದರದಿಂದ ಕಲಬುರಗಿಗೆ 2 ಬಾರಿ ಹೊಗಿ ಬರಲಿದೆ. ಈ ರೈಲು ವಾರದ 6 ದಿನಗಳು ಚಲಿಸಲಿದ್ದು, ಭಾನುವಾರ ರೈಲು ಸೇವೆ ಇರುವುದಿಲ್ಲ ಎಂದು ಅವರು ವಿವರಿಸಿದ್ದಾರೆ.
ಜಿಲ್ಲೆಯ ಜನರ ದಶಕಗಳ ಕನಸಾಗಿದ್ದ ಬೀದರ್- ಕಲಬುರಗಿ ರೈಲ್ವೆಯನ್ನು ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಜಯವರು ಉದ್ಭಾಟಿಸಿ, ಜನತೆಯ ಬಹುಬೇಡಿಕೆಯ ಕನಸನ್ನು ನನಸು ಮಾಡಿದ್ದರು. ಆದರೆ ಕೋವಿಡ್ ಮಹಾಮಾರಿ ಕಾರಣದಿಂದ ಬೀದರ – ಕಲಬುರಗಿ ಡೆಮೊ ರೈಲು ಸ್ಥಗಿತಗೊಂಡಿತ್ತು ಜೊತೆಗೆ ಹೈದ್ರಾಬಾದ-ಪೂರ್ಣ ಜಂಕ್ಷನ್ ಪ್ಯಾಸೆಂಜರ್ ರೈಲು ಸಹ ಸ್ಥಗಿತಗೊಂಡಿತ್ತು.
ಈ ರೈಲುಗಳಲ್ಲ, ಹೆಚ್ಚಾಗಿ ಬಡವರು. ವಿದ್ಯಾರ್ಥಿಗಳು, ಸಣ್ಣಪುಟ್ಟ ವ್ಯಾಪಾರಿಗಳು ಪ್ರಯಾಣಿಸುತ್ತಿದ್ದರು. ಈ ರೈಲುಗಳ ಸ್ಥಗಿತದಿಂದ ಜೀದರ ಲೋಕಸಭಾ ಕ್ಷೇತ್ರದ ಜನರಿಗೆ ತುಂಬಾ ಅನಾನುಕೂಲವಾಗುತ್ತಿತ್ತು. ಮೇಲಿಂದ ಮೇಲೆ ರೈಲ್ವೆ ಅಧಿಕಾರಿಗಳ ಮೇಲೆ ಒತ್ತಡ ತಂದು, ಈ ಎರಡು ರೈಲುಗಳು ನಾಳೆ ದಿನಾಂಕ: 19-07-2021 ರಿ0ದ ಪುನರ್ ಪ್ರಾರಂಭಗೊಳ್ಳಲಿವೆ.