ಮೋದಿ ಪ್ರಧಾನಿ ಆಗದಿದ್ದರೇ ನನಗೆ ಪ್ರಶಸ್ತಿ ಬರ್ತಿರಲಿಲ್ಲ: ಪದ್ಮಭೂಷಣ ಗೌರವಕ್ಕೆ ಎಸ್.ಎಲ್.ಭೈರಪ್ಪ ಖುಷಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಹಿರಿಯ ಸಾಹಿತಿ, ಸರಸ್ವತಿ ಸಮ್ಮಾನ್ ಎಸ್.ಎಲ್.ಭೈರಪ್ಪ(S L Byrappa) ಅವರಿಗೆ ಪದ್ಮಭೂಷಣ ಗೌರವ ಲಭಿಸಿದೆ. ಈ ಕುರಿತು ಅವರು ಖುಷಿಯನ್ನು ಹಂಚಿಕೊಂಡಿದ್ದಾರೆ.

ಮೋದಿ ಪ್ರಧಾನಿ(PM Narendra Modi) ಆದ ಕಾರಣದಿಂದಲೇ ನನಗೆ ಪ್ರಶಸ್ತಿ ಬಂತು.ಮೋದಿ ಪ್ರಧಾನಿ ಆಗದಿದ್ದರೇ ನನಗೆ ಪ್ರಶಸ್ತಿ ಬರ್ತಿರಲಿಲ್ಲ.ಲೇಖಕ ಸತ್ತೇ ಸಾಯುತ್ತಾನೆ, ಆದ್ರೆ, ಅವನ ಪುಸ್ತಕ ಎಂದೂ ಜೀವಂತ ಅಂತ, ಮೋದಿಯವರಂತಹ ಪ್ರಧಾನ ಮಂತ್ರಿಗಳನ್ನು ನಾನು ಹಿಂದೆಂದೂ ನೋಡಿರಲಿಲ್ಲ, 2029ರವರೆಗೂ ಅವರೇ ಪ್ರಧಾನಿಯಾಗಿರಲಿ ಎಂದು ಹೊಗಳಿದ್ದಾರೆ.

ಎಷ್ಟು ದಿನ ಪುಸ್ತಕ ಇರುತ್ತೋ ಅಲ್ಲಿವರೆಗೆ ಲೇಖಕ ಜೀವಂತ. ನನ್ನ ಬರೆದ ಕೃತಿಗಳಿಗೆ ಅಂತಹ ಶಕ್ತಿ ಇದ್ದರೆ ನನಗೆ ಸಂತೋಷ. ಗಣರಾಜ್ಯ ಮೊದಲಿಂದಲೂ ಇತ್ತು, ಈ ಸಂಸ್ಕೃತಿ ಏಕರೂಪದಲ್ಲಿ ಬೆಳೆದಿದೆ.ಎಷ್ಟೋ ದೇಶದಲ್ಲಿ ಸ್ವಾತಂತ್ರ್ಯ ಬಂದಿದೆ. ಆದರೆ ಸ್ವಾತಂತ್ರ್ಯ ಉಳಿದುಕೊಂಡಿಲ್ಲ. ನಮ್ಮಲ್ಲಿ ಸಂವಿಧಾನ ಇದೆ, ಈ ದೇಶವನ್ನು ಸಂವಿಧಾನ ಕಾಪಾಡುತ್ತದೆ ಎಂದು ತಿಳಿಸಿದರು.

12 ವರ್ಷ ನಾನು ಉತ್ತರ ಭಾರತದಲ್ಲಿದ್ದು ಬಂದೆ. ನನ್ನ ಅನೇಕ ಕಾದಂಬರಿಗಳು ಹುಟ್ಟಿದ್ದು ಇಲ್ಲೆ. ಎಷ್ಟೋ ಬರವಣಿಗೆಗಳಿಗೆ ಮೈಸೂರು ಸ್ಪೂರ್ತಿಯಾಗಿದೆ . ಮೈಸೂರು ಜನ ತುಂಬಾ ಪ್ರೀತಿ ಕೊಟ್ಟಿದ್ದಾರೆ. ಸದಾ ಮೈಸೂರು ಜನರಿಗೆ ಋಣಿ ಅಂತ ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!