Hair Care | ಅರ್ಧ ಹೋಳು ನಿಂಬೆ ಇದ್ರೆ ಸಾಕು ತಲೆಯಲ್ಲಿರೋ Dandruff ಮಂಗಮಾಯ!

ತಲೆಹೊಟ್ಟು ಸಮಸ್ಯೆ ಇಂದಿನ ದಿನಗಳಲ್ಲಿ ಬಹುತೇಕ ಎಲ್ಲರನ್ನೂ ಕಾಡುತ್ತಿದೆ. ಹವಾಮಾನ ಬದಲಾವಣೆ, ಒತ್ತಡ, ಆಹಾರ ಪದ್ಧತಿ ಮತ್ತು ರಾಸಾಯನಿಕ ಉತ್ಪನ್ನಗಳ ಬಳಕೆ ಇದಕ್ಕೆ ಪ್ರಮುಖ ಕಾರಣಗಳು. ತಲೆಹೊಟ್ಟು ಹೋಗಲಾಡಿಸಲು ದುಬಾರಿ ಶಾಂಪೂಗಳು ಅಥವಾ ಟ್ರೀಟ್ಮೆಂಟ್‌ಗಳ ಅವಶ್ಯಕತೆ ಇಲ್ಲ. ನಮ್ಮ ಅಡುಗೆಮನೆಯಲ್ಲೇ ಸಿಗುವ ನಿಂಬೆಹಣ್ಣು ಈ ಸಮಸ್ಯೆಗೆ ಪರಿಣಾಮಕಾರಿ, ಸುರಕ್ಷಿತ ಹಾಗೂ ಕಡಿಮೆ ವೆಚ್ಚದ ಪರಿಹಾರ ನೀಡುತ್ತದೆ. ನಿಂಬೆಹಣ್ಣಿನಲ್ಲಿರುವ ಆಂಟಿಬ್ಯಾಕ್ಟೀರಿಯಲ್ ಗುಣಗಳು ತಲೆಚರ್ಮವನ್ನು ಶುದ್ಧಗೊಳಿಸಿ ತಲೆಹೊಟ್ಟನ್ನು ಕಡಿಮೆ ಮಾಡುತ್ತವೆ.