Wednesday, July 6, 2022

Latest Posts

ಹಜ್ ಯಾತ್ರೆಯ ಎಲ್ಲಾ ಅರ್ಜಿಗಳನ್ನು ರದ್ದುಗೊಳಿಸಿದ ಭಾರತದ ಹಜ್ ಸಮಿತಿ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………

ಹೊಸದಿಗಂತ ಆನ್ ಲೈನ್ ಡೆಸ್ಕ್:

ಕೊರೋನಾ ಹಿನ್ನೆಲೆ ಹಜ್ 2021ಕ್ಕೆ ನಿಗದಿಪಡಿಸಿದ್ದ ಎಲ್ಲಾ ಅರ್ಜಿಗಳನ್ನು ಭಾರತದ ಹಜ್ ಸಮಿತಿ ಮಂಗಳವಾರ .
ಈ ಕುರಿತಂತೆ ಸ್ಪಷ್ಟನೆ ನೀಡಿರುವ ಹಜ್ ಸಮಿತಿ, ಸೌದಿ ಸರ್ಕಾರ ಕೊರೋನಾ ಸಾಂಕ್ರಾಮಿಕದಿಂದಾಗಿ ವಿದೇಶಿಗರಿಗೆ ಹಜ್ ಯಾತ್ರೆಗೆ ಅವಕಾಶ ನೀಡಿಲ್ಲ. ಸ್ಥಳೀಯರು, ತನ್ನ ದೇಶದ ಹಿರಿಯ ನಾಗರಿಕರಿಗೆ ಸೀಮಿತ ಸಂಖ್ಯೆಯಲ್ಲಿ ಹಜ್ ಯಾತ್ರೆ ಕೈಗೊಳ್ಳಲು ಮಾತ್ರ ಅವಕಾಶ ನೀಡಿದೆ. ಹೀಗಾಗಿ ಹಾಲಿ ವರ್ಷದ ಹಜ್ ಅರ್ಜಿಗಳನ್ನು ರದ್ದು ಮಾಡಲಾಗಿದೆ ಎಂದು ಹೇಳಿದೆ.
ಈ ಹಿಂದೆ ಕೊರೋನಾ ಕಾರಣಕ್ಕೆ ಈ ವರ್ಷದ ಹಜ್ ಯಾತ್ರೆಯನ್ನು ತನ್ನ ದೇಶದ 60 ಸಾವಿರ ಯಾತ್ರಿಕರಿಗೆ ಮಾತ್ರ ಸೀಮಿತಗೊಳಿಸಿರುವುದಾಗಿ ಸೌದಿ ಅರೇಬಿಯಾ ಸರ್ಕಾರ ಶನಿವಾರ ಪ್ರಕಟಿಸಿತ್ತು. ಅಂತೆಯೇ ವಿದೇಶದವರಿಗೆ ಹಜ್‌ ಯಾತ್ರೆಯನ್ನು ನಿಷೇಧಿಸಿದೆ.
ಸೌದಿ ಸರ್ಕಾರದ ಹಜ್ ಮತ್ತು ಉಮ್ರಾ ಸಚಿವಾಲಯದ ಹೇಳಿಕೆಯನ್ನು ಸೌದಿ ಸರ್ಕಾರದ ಪ್ರೆಸ್ ಏಜೆನ್ಸಿ ಪ್ರಕಟಿಸಿದ್ದು, ಜುಲೈ ಮಧ್ಯದಲ್ಲಿ ಪ್ರಾರಂಭವಾಗಲಿರುವ ಈ ವರ್ಷದ ಹಜ್ 18ರಿಂದ 65 ವಯಸ್ಸಿನ ಯಾತ್ರಿಕರಿಗೆ ಮಾತ್ರ ಸೀಮಿತವಾಗಿರುತ್ತದೆ. ಅಲ್ಲದೆ, ಯಾತ್ರೆಯಲ್ಲಿ ಭಾಗವಹಿಸುವವರು ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಂಡಿರಬೇಕು ಎಂದು ಸಚಿವಾಲಯ ತಿಳಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss