ಸ್ವಚ್ಛತೆಯ ಅರಿವು ಮೂಡಿಸಿದ ಹಾಲಕ್ಕಿ ಮಹಿಳೆಗೆ ಸನ್ಮಾನ

ಹೊಸದಿಗಂತ ವರದಿ ಅಂಕೋಲಾ:

ಅಂಕೋಲಾ ತಾಲೂಕಿನ ಬಸ್ ನಿಲ್ದಾಣದಲ್ಲಿ ಸ್ವಚ್ಛತೆಯ ರೂವಾರಿಯಾಗಿ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡು ತಾಲೂಕಿನ ಹೆಮ್ಮೆ ಎನಿಸಿಕೊಂಡ ಬೆಳಸೆ ತೆಂಕನಾಡಿನ ಬಡ ಹಾಲಕ್ಕಿ ಮಹಿಳೆ ಮೋಹಿನಿ ಗೌಡ ಅವರನ್ನು ಅಂಕೋಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ತಾ.ಪಂ ಕಾರ್ಯನಿರ್ವಹಣ ಅಧಿಕಾರಿ ಪಿ ವೈ ಸಾವಂತ್, ಪುರಸಭೆ ಮುಖ್ಯಾಧಿಕಾರಿ ಎಂ.ಆರ್. ಸ್ವಾಮಿ, ಪಿ.ಎಸ್. ಐ ಕುಮಾರ ಕಾಂಬಳೆ, ಪುರಸಭೆ ಅಧಿಕಾರಿ ರಾಥೋಡ್, ವಕೀಲ ಸುಭಾಷ ನಾರ್ವೇಕರ್, ಸಾರಿಗೆ ಸಂಸ್ಥೆಯ ಘಟಕ ವ್ಯವಸ್ಥಾಪಕಿ ಚೈತನ್ಯ, ಬಸ್ ನಿಲ್ದಾಣ ನಿಯಂತ್ರಕ ಅಶೋಕ ನಾಯ್ಕ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೃಷ್ಣ ಅಣ್ಣಯ್ಯ ಗೌಡ, ಪತ್ರಕರ್ತರ ಸಂಘದ ಅಧ್ಯಕ್ಷ ಅರುಣ ಶೆಟ್ಟಿ,ಹಿರಿಯ ಪತ್ರಕರ್ತ ವಿಠ್ಠಲದಾಸ ಕಾಮತ್, ಪತ್ರಕರ್ತರ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.

ಅಂಕೋಲಾ ಬಸ್ ನಿಲ್ದಾಣದಲ್ಲಿ ಕಾಡು ಹಣ್ಣುಗಳನ್ನು ಮಾರಾಟ ಮಾಡುವ ಜೊತೆಗೆ ಬಸ್ ನಿಲ್ದಾಣದಲ್ಲಿ ಬಿದ್ದ ಕಸ ಆರಿಸಿ ಕಸದ ಬುಟ್ಟಿಗೆ ಹಾಕುವ ಮಹಿಳೆಯ ಪರಿಸರ ಸ್ವಚ್ಛತೆಯ ವಿಡಿಯೋ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್‌ ಆಗಿತ್ತು. ಇದಕ್ಕೆ ಸಂಬಂಧಿಸಿದಂತೆ ಖ್ಯಾತ ಉದ್ಯಮಿ ಆನಂದ ಮಹಿಂದ್ರ ಅವರು ಕೂಡ ಟ್ವೀಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!