ಹಲಾಲ್ ವಿವಾದ: ಹಿಂದುಗಳ ಅಂಗಡಿಗಳಲ್ಲಿ ಮಾಂಸ ಖರೀದಿಸಲು ಮುಗಿ ಬಿದ್ದ ಜನರು

ಹೊಸದಿಗಂತ ವರದಿ,ಮೈಸೂರು:

ಹಲಾಲ್ ವಿವಾದ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಬಹುತೇಕ ಹಿಂದುಗಳು ಮುಸ್ಲಿಮರು ನಡೆಸುತ್ತಿರುವ ಮಾಂಸದ ಅಂಗಡಿಗಳತ್ತ ತಿರುಗಿಯೂ ನೋಡಲಿಲ್ಲ. ಹಿಂದು ಸಂಘಟನೆಗಳ ಕರೆಗೆ ಓಗೊಟ್ಟ ಹಲವಾರು ಮಂದಿ ಹಿಂದುಗಳು, ಹಿಂದುಗಳೇ ನಡೆಸುತ್ತಿರುವ ಮಾಂಸದ ಅಂಗಡಿಗಳಲ್ಲಿ ಮಾಂಸವನ್ನು ಖರೀದಿಸಲು ಮುಗಿ ಬಿದ್ದರು.
ಮೈಸೂರಿನ ಕೆ.ಜಿ.ಕೊಪ್ಪಲ್, ಕುಂಬಾರ ಕೊಪ್ಪಲ್, ಹೆಬ್ಬಾಳ್ ಸೇರಿದಂತೆ ಇತರೆಡೆ ಹಿಂದೂಗಳು ಮುಸ್ಲಿಂರ ಹಲಾಲ್ ಮಾಂಸ ಖರೀದಿಯತ್ತ ತಿರುಗಿಯೂ ನೋಡಲಿಲ್ಲ. ಇದರಿಂದ ಮುಸ್ಲಿಂರ ವ್ಯಾಪಾರಕ್ಕೆ ಇದೇ ಮೊದಲ ಬಾರಿ ದೊಡ್ಡ ನಷ್ಟ ಉಂಟಾದರೆ, ಹಿಂದುಗಳ ಅಂಗಡಿಗಳಿಗೆ ದೊಡ್ಡ ಲಾಭವೇ ಆಯಿತು.
ಕೇವಲ ಪ್ರಗತಿಪರರು ಮಾತ್ರ ಮುಸ್ಲಿಮರ ಅಂಗಡಿಗಳಲ್ಲಿ ಮಾಂಸವನ್ನು ಖರೀದಿಸಿದರು. ಹಿಂದುಗಳ ಮಟನ್ ಅಂಗಡಿ ಇಲ್ಲ ಪ್ರದೇಶಗಳಲ್ಲಿ ಮಾತ್ರ ಕೆಲವು ಹಿಂದುಗಳು ಅನಿವಾರ್ಯವಾಗಿ ಮುಸ್ಲಿಮರ ಅಂಗಡಿಗಳಲ್ಲಿ ಮಾಂಸ ಖರೀದಿ ಮಾಡಿದರು. ಆದರೆ ಈ ಹಿಂದಿನ ವರ್ಷಗಳಿಗೆ ಹೋಲಿಸಿದರೆ, ಈ ಬಾರಿ ಮುಸ್ಲಿಮರಿಗೆ ಮಾಂಸದ ವ್ಯಾಪಾರದಲ್ಲಿ ದೊಡ್ಡ ಹೊಡೆತವೇ ಬಿದ್ದಿದೆ.
ಶಾಂತಿನಗರದ ಪ್ರಮುಖ ರಸ್ತೆಯಲ್ಲಿರುವ ಮಾಂಸದ ಅಂಗಡಿಗೆ ತೆರಳಿದ ಪದ್ಮಶ್ರೀ ಪುರಸ್ಕöÈತರಾದ ಹಿರಿಯ ಸಾಹಿತಿ ದೇವನೂರ ಮಹಾದೇವ, ಪ್ರಗತಿಪರ ಚಿಂತಕರಾದ ಪಿ. ಮಲ್ಲೇಶ್, ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಸೇರಿದಂತೆ ಇತರರು ಹಲಾಲ್‌ಕಟ್ ಮಾಡಿದ್ದ ಕುರಿ ಮಾಂಸವನ್ನೇ ಖರೀದಿಸಿದರು.
ಈ ಸಂದರ್ಭದಲ್ಲಿ ಪದ್ಮಶ್ರೀ ಪುರಸ್ಕöÈತರಾದ ದೇವನೂರ ಮಹಾದೇವ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ಧರ್ಮದ ಹೆಸರಿನಲ್ಲಿ ಅಧರ್ಮ ಕುಣಿದು ಕುಪ್ಪಳಿಸುತ್ತಿದೆ. ಎಲ್ಲ ಧರ್ಮದಲ್ಲೂ ಸಾಮರಸ್ಯ ಇದೆ. ಆದರೆ, ಬಿಜೆಪಿಯವರು ಸಾಮರಸ್ಯವನ್ನು ಕದಡುತ್ತಿದ್ದಾರೆ. ಧರ್ಮ ಒಡೆಯುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು. ಸಮಾಜದಲ್ಲಿ ಹಿಂದೂ-ಮುಸ್ಲಿA ಯಾವುದೇ ಧರ್ಮದ ಬೇಧ- ಭಾವ ಮಾಡದೇ ನಾವೆಲ್ಲ ಒಂದು ಎಂದು ಬದುಕಬೇಕು. ಆದರೆ, ಕೆಲವು ಪಟ್ಟಭದ್ರ ಹಿತಾಶಕ್ತಿಗಳು, ಸಮಾಜದ ಸ್ವಾಸ್ಥ÷್ಯವನ್ನು ಹಾಳು ಮಾಡುತ್ತಿವೆ ಎಂದರು.
ಧರ್ಮದ ಹೆಸರಿನಲ್ಲಿ ಆಯ್ಕೊಂಡು ತಿನ್ನುವ ಕೋಳಿ ಕಾಲು ಮುರಿದಂತಾಗಿದೆ. ಧರ್ಮದ ಹೆಸರಿನಲ್ಲಿ ಸಮಾಜದ ಸ್ವಾಸ್ಥ÷್ಯ ಹಾಳು ಮಾಡಬಾರದು ಎಂದರು. ಪ್ರಗತಿಪರ ಚಿಂತಕ ಪ. ಮಲ್ಲೇಶ್ ಮಾತನಾಡಿ, ಬಿಜೆಪಿ ಅವರಿಗೆ ಸಮಾಜದಲ್ಲಿ ಶಾಂತಿ ನೆಮ್ಮದಿ ಬೇಕಿಲ್ಲ. ಶಾಂತಿ ಕದಡವುದೇ ಗುರಿಯಾಗಿದೆ. ಆದರೆ ಜನ ಇಂಥ ವಿಷಯಗಳಿಗೆ ಕಿವಿಗೊಡದೇ ಸಾಮರಸ್ಯದಿಂದ ಬದುಕಬೇಕು ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!