ಹೊಸದಿಗಂತ ವರದಿ, ಹಾವೇರಿ
ಹಾನಗಲ್ ವಿಧಾನಸಭಾ ಉಪ ಚುನಾವಣೆಯ ಆರನೇ ಸುತ್ತಿನ ಮತ ಎಣಿಕೆ ಮುಗಿದಿದ್ದು ಆರನೇ ಸುತ್ತಿನಲ್ಲಿಯೂ ಕಾಂಗ್ರೆಸ್ ಅಭ್ಯರ್ಥಿ ಮುನ್ನಡೆಯನ್ನು ಸಾಧಿಸಿದ್ದಾರೆ. ಆರನೇ ಸುತ್ತಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ 3900, ಬಿಜೆಪಿ ಅಭ್ಯರ್ಥಿ ಶಿವರಾಜ ಸಜ್ಜನರ 3722 ಹಾಗೂ ಜೆಡಿಎಸ್ ಅಭ್ಯರ್ಥಿ ೪೦ ಮತಗಳನ್ನು ಪಡೆದಿರುವರು.
ಆರನೇ ಸುತ್ತಿನ ಮತ ಎಣಿಕೆಯ ನಂತರ ಬಿಜೆಪಿ 25746 ಕಾಂಗ್ರೆಸ್ 27244 ಜೆಡಿಎಸ್ 244 ಮತಗಳನ್ನು ಪಡೆದಿರುವರು.
ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ ಇವರು 1498ಮತಗಳ ಮುನ್ನಡೆಯನ್ನು ಸಾಧಿಸಿರುವರು.
* ಮೊದಲ ಸುತ್ತಿನಿಂದಲೂ ಮುನ್ನಡೆ ಸಾಧಿಸುತ್ತಿರುವ ಶ್ರೀನಿವಾಸ ಮಾನೆ.
* ಒಂದು ಸುತ್ತನಿಂದ ಮತ್ತೊಂದು ಸುತ್ತಿಗೆ ಮತಗಳ ಅಂತರ ಹೆಚ್ಚಾಗುತ್ತಲೇ ಮುನ್ನಡೆಯನ್ನು ಸಾಧಿಸುತ್ತಿರುವರು.