ಹನುಮ ಜಯಂತಿ ಪ್ರಯುಕ್ತ ಲೋಕಕಲ್ಯಾಣಾಥ೯ ಪವಮಾನ ಹೋಮ ಕಾರ್ಯಕ್ರಮ

ಹೊಸದಿಗಂತ ವರದಿ ಕಲಬುರಗಿ:

ಹನುಮ ಜಯಂತಿ ಪ್ರಯುಕ್ತ ಹಿಂದೂ ರಾಷ್ಟ್ರ ನಿಮಾ೯ಣದ ಸಂಕಲ್ಪದಿಂದಾಗಿ ಲೋಕಕಲ್ಯಾಣಾಥ೯ ಪವಮಾನ ಹೋಮ ಕಾಯ೯ಕ್ರಮ ಜರುಗಿತು. ಹೋಮದ ನಿಯಮದಂತೆ ಒಂದು ವಿವಾಹಿತ ಜೋಡಿ ಸೇರಿದಂತೆ ಹಲವು ಹನುಮ ಭಕ್ತರ ಸಮ್ಮುಖದಲ್ಲಿ ಹೋಮ ನೆರವೇರಿದೆ.

ಕಲಬುರಗಿ ನಗರದ ಆಳಂದ ರಸ್ತೆಯ ರಾಮತೀಥ೯ ಮಂದಿರದಲ್ಲಿ ಅಂತರಾಷ್ಟ್ರೀಯ ಹಿಂದೂ ಪರಿಷತ್-ರಾಷ್ಟ್ರೀಯ ಬಜರಂಗದಳ ನೇತೃತ್ವ ಹಾಗೂ ಕೇಸರಿ ನಂದನ್ ಯುವ ಬ್ರಿಗೇಡ್ ವತಿಯಿಂದ ಪವಮಾನ ಹೋಮ ಪೂಜಾ ಕಾರ್ಯಕ್ರಮವನ್ನು ಪಂಡಿತ ಶ್ರೀ ಶ್ರೀಧರ ಜೋಶಿ, ಪಂಡಿತ ವಿದ್ಯಾಸಾಗರ ಡಣ್ಣೂರ, ಪಂಡಿತ ಶ್ರೀ ಲಕ್ಷ್ಮಿಕಾಂತ ಕೋರವಿ, ಪಂಡಿತ್ ಶ್ರೀ ಅನಯ್ ಅವರ ನೇತೃತ್ವದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ರಾಷ್ಟ್ರೀಯ ಭಜರಂಗ ದಳದ ರಾಜ್ಯ ಪ್ರಧಾನ ಕಾರ್ಯದರ್ಶಿ ಗಂಗಾಧರ್ ವಿಶ್ವಕರ್ಮ, ಮಹೇಶ್ ಕೆಂಭಾವಿ, ನಾಗೇಶ್, ಸುದರ್ಶನ, ಸಂಗಮೇಶ, ಸಚಿನ್ ಶರಣಬಸಪ್ಪ, ಮಹಾಂತೇಶ್, ಬಿರಜು ರವಿಕುಮಾರ್, ಸಂತೋಷ, ನಾಗರಾಜ, ಸುನಿಲ್, ಜೈಪ್ರಕಾಶ, ಸಿದ್ದರಾಮ, ಪ್ರದೀಪ್, ಸುನಿಲ್, ಶ್ರೀಕಾಂತ್, ಪ್ರಕಾಶ್, ರವಿಕುಮಾರ್, ಗುರುಶಾಂತ್ ಸೇರಿದಂತೆ ಹಲವು ಯುವಕರು ಹೋಮದಲ್ಲಿ ಪಾಲ್ಗೊಂಡಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!