Tuesday, August 16, 2022

Latest Posts

ಹಾನಗಲ್ ಉಪ ಚುನಾವಣೆ: ಈವರೆಗೂ ಶೇ. 44.59 ರಷ್ಟು ಮತದಾನ

ಹೊಸದಿಗಂತ ವರದಿ, ಹಾವೇರಿ:

ಹಾನಗಲ್ ವಿಧಾನಸಭಾ ಉಪ ಚುನಾವಣೆಯ ಮತದಾನ ಮಧ್ಯಾಹ್ನ 1 ಗಂಟೆ ಸಮಯದಲ್ಲಿ ಶೇ. 44.59 ರಷ್ಟು ಮತದಾನವಾಗಿದೆ.
ಕ್ಷೇತ್ರದ ಹನುಮನಕೊಪ್ಪ, ಸಮ್ಮಸಗಿ ಹಾಗೂ ಹಾನಗಲ್ ಪಟ್ಟಣದಲ್ಲಿಯೂ ಸಹ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಮತದಾರರು ಮತ ಚಲಾಯಿಸುತ್ತಿರುವದು ಕಂಡುಬಂದಿತು.
ಹಾನಗಲ್ ಪಟ್ಟಣದ ಸಖಿ ಮತಗಟ್ಟೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಮತದಾರರುತ್ತ ಮತ ಚಲಾಯಿಸಿದರು.
ಶನಿವಾರ ಬೆಳಗಿನಿಂದಲೂ ಹಾನಗಲ್ ವಿಧಾನಸಭಾ ಕ್ಷೇತ್ರದಲ್ಲಿ ಸೂರ್ಯ ತನ್ನ ಇರುವೆಕೆಯನ್ನು ತೋರಿಸದೇ ಮೋಡದರೆಯಲ್ಲಿ ಇದ್ದು ವಾತಾವರಣವನ್ನು ತಂಪಾಗಿಸಿದ್ದರಿದ್ದ ಹೆಚ್ಚಿ ಸಂಖ್ಯೆಯಲ್ಲಿ ಮಹಿಳಾ ಮತದಾರರು ಮನೆಯಿಂದ ಹೊರಬಂದು ಮತಗಟ್ಟೆಗಳತ್ತ ಹೆಜ್ಜೆ ಹಾಕುತ್ತಿರುವದು ಕಾಣಬಹುದಾಗಿತ್ತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss