ಏಷ್ಯನ್‌ ಗೇಮ್ಸ್‌ಗೆ ಕೊರೊನಾ ಕರಿನೆರಳು: ಸಪ್ಟೆಂಬರ್‌ನಲ್ಲಿ ನಡೆಯಬೇಕಿದ್ದ ಕ್ರೀಡಾಕೂಟ ಮುಂದೂಡಿಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

2022 ಸೆಪ್ಟೆಂಬರ್‌ನಲ್ಲಿ ನಡೆಯಬೇಕಿದ್ದ ಏಷ್ಯನ್ ಕ್ರೀಡಾಕೂಟವನ್ನು ಕೋವಿಡ್‌ ತೀವ್ರತೆಯಿಂದಾಗಿ ಮುಂದೂಡಲಾಗಿದೆ. ಏಷ್ಯನ್ ಕ್ರೀಡಾಕೂಟದ ಅತಿಥೇಯ ರಾಷ್ಟ್ರವಾದ ಚೀನಾ, ಏಷ್ಯನ್ ಗೇಮ್ಸ್ ಮುಂದೂಡುತ್ತಿರುವುದಾಗಿ ಘೋಷಿಸಿದೆ. ಕ್ರೀಡಾಕೂಟದ ಮುಂದಿನ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.

ಏಷ್ಯನ್ ಕ್ರೀಡಾಕೂಟವನ್ನು ಮುಂದೂಡಿರುವುದು ಕ್ರೀಡಾಭಿಮಾನಿಗಳಿಗೆ ಬೇಸರ ತಂದಿದೆ. ಏಷ್ಯನ್ ಗೇಮ್ಸ್ ಸೆಪ್ಟೆಂಬರ್ 10ರಿಂದ25 ರವರೆಗೆ ಶಾಂಘೈ ಬಳಿಯಿರುವ ಹ್ಯಾಂಗ್‌ಝೌನಲ್ಲಿ ನಿಗದಿಯಾಗಿತ್ತು. ಈ ಪಟ್ಟಣವು ಇದೀಗ ಕರೋನಾ ಕೇಂದ್ರವಾಗಿದೆ. ಇದರಿಂದಾಗಿ ನಿಗದಿತ ಸಮಯಕ್ಕೆ ಕ್ರೀಡಾಕೂಟದ ನಿರ್ವಹಣೆ ಸಾಧ್ಯವಾಗುವುದಿಲ್ಲ ಎಂದು ಭಾವಿಸಿದ ಚೀನಾ ಏಷ್ಯನ್ ಕ್ರೀಡಾಕೂಟವನ್ನು ಮುಂದೂಡಿದೆ.

ಕಳೆದ ತಿಂಗಳು ಏಷ್ಯನ್ ಕ್ರೀಡಾಕೂಟವನ್ನು ಆಯೋಜಿಸಲು ಹ್ಯಾಂಗ್‌ಝೌ ಸಿದ್ಧವಾಗಿದೆ ಎಂದು ಬಹಿರಂಗಪಡಿಸಿತ್ತು. ಅದಕ್ಕಾಗಿ 56 ಕ್ರೀಡಾಂಗಣಗಳನ್ನು ಕೂಡ ಸಿದ್ದ ಮಾಡಲಾಗಿತ್ತು. ಆದರೆ ಪ್ರಸ್ತುತ ಕೋವಿಡ್ ತೀವ್ರವಾಗಿರುವ ಕಾರಣ ಕ್ರೀಡಾ ನಿರ್ವಹಣೆ ಸಾಧ್ಯವಿಲ್ಲ ಎಂದು ಸರ್ಕಾರ ತಿಳಿಸಿದೆ. ಶಾಂಘೈ ಸೇರಿದಂತೆ ಬಹುತೇಕ ಎಲ್ಲಾ ನಗರಗಳ ಮೇಲೆ ಸರ್ಕಾರವು ಕಠಿಣ ನಿರ್ಬಂಧಗಳನ್ನು ವಿಧಿಸಿರುವ ಈ ಹಿನ್ನೆಲೆಯಲ್ಲಿ ಕ್ರೀಡೆಯನ್ನು ಮುಂದೂಡಿರುವುದಾಗಿ ಸರ್ಕಾರ ಘೋಷಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!