ಹನುಮಾನ್‌ ಚಾಲೀಸಾ ವಿಚಾರವಾಗಿ ಬಿಜೆಪಿ ನಾಯಕನ ಮೇಲೆ ಮಾರಕ ದಾಳಿ ನಡೆಸಿದ ಶಿವಸೇನಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಮಹಾರಾಷ್ಟ್ರದಲ್ಲಿ ಹನುಮಾನ್‌ ಚಾಲೀಸ ವಿವಾದವು ಮತ್ತಷ್ಟು ತೀವ್ರತೆ ಪಡೆಯುತ್ತಿದೆ. ಒಂದೆಡೆ ಮಸೀದಿಗಳಲ್ಲಿ ಅಜಾಜ್‌ ವಿರೋಧಿಸಿ ಪ್ರತಿಭಟನೆಗಳು ತೀವ್ರವಾಗುತ್ತಿದೆ. ಮತ್ತೊಂದೆಡೆ ಇದೇ ವಿಚಾರವಾಗಿ ಬಿಜೆಪಿ ಮಾಜಿ ಸಂಸದ ಕಿರೀಟ್ ಸೋಮಯ್ಯ ಅವರ ಎಸ್‌ಯುವಿ ಕಾರಿನ ಮೇಲೆ ಶಿವಸೇನೆ ಕಾರ್ಯಕರ್ತರು ಶನಿವಾರ ರಾತ್ರಿ ಚಪ್ಪಲಿ ಮತ್ತು ನೀರಿನ ಬಾಟಲಿಗಳನ್ನು ಎಸೆಯುವ ಮೂಲಕ ದೊಡ್ಡಮಟ್ಟದಲ್ಲಿ ದಾಳಿ ನಡೆಸಿ ಉದ್ಧಟತನ ಮೆರೆದಿದ್ದಾರೆ.
ಮಹಾರಾಷ್ಟ್ರ ಮುಖ್ಯಮಂತ್ರಿ ಮತ್ತು ಶಿವಸೇನಾ ಅಧ್ಯಕ್ಷ ಉದ್ಧವ್ ಠಾಕ್ರೆ ಅವರ ನಿವಾಸ ‘ಮಾತೋಶ್ರೀ’ ಹೊರಗೆ ಹನುಮಾನ್ ಚಾಲೀಸಾ ಪಠಣಕ್ಕೆ ಯತ್ನಿಸಿ ಬಂಧನಕ್ಕೊಳಗಾದ ಪಕ್ಷೇತರ ಶಾಸಕ ರವಿ ರಾಣಾ ಹಾಗೂ ಅವರ ಪತ್ನಿ, ಸಂಸದೆ ನವನೀತ್ ರಾಣಾ ಅವರನ್ನು ಭೇಟಿಯಾಗಲು ಕಿರೀಟ್ ಸೋಮಯ್ಯ ಖಾರ್ ಜೈಲಿಗೆ ಭೇಟಿ ನೀಡಿದ್ದರು.

ಸರ್ಕಾರ ಹಿಂದೂ ತುಷ್ಟೀಕರಣ ನೀತಿಗಳ ವಿರುದ್ಧದ ಸಿಡಿದೆದ್ದು ಹನುಮಾನ್‌ ಚಾಲಿಸಾ ಪಠಿಸುವುದಾಗಿ ಘೋಷಿಸಿದ್ದ ದಂಪತಿಯನ್ನು ಕಿರೀಟ್‌ ಸೋಮಯ್ಯ ಬೆಂಬಲಿಸಿದ್ದು ಶಿವಸೇನೆ ಕಾರ್ಯಕರ್ತರನ್ನು ಕೆರಳಿಸಿತು.  ಲೀಸ್ ಠಾಣೆಯ ಹೊರಗೆ ಜಮಾಯಿಸಿದ ಶಿವಸೇನೆ ಬೆಂಬಲಿಗರು ಸೋಮಯ್ಯ ಭೇಟಿಯನ್ನು ವಿರೋಧಿಸಿ ಘೋಷಣೆಗಳನ್ನು ಕೂಗಿ ಪ್ರತಿಭಟನೆ ನಡೆಸಿದರು.
ಅವರು ಠಾಣೆಯಿಂದ ಹೊರಡುತ್ತಿದ್ದಾಗ, ಪ್ರತಿಭಟನಾಕಾರರ ಗುಂಪು ಅವರ ಮೇಲೆ ದಾಳಿ ನಡೆಸಿದೆ. ನಂತರ ಸೋಮಯ್ಯ ಸೇನಾ ಬೆಂಬಲಿಗರ ವಿರುದ್ಧ ದೂರು ನೀಡಲು ಬಾಂದ್ರಾ ಪೊಲೀಸ್ ಠಾಣೆಗೆ ತೆರಳಿದರು.

ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಸೋಮಯ್ಯ, ಶಿವಸೇನೆ ಗುಂಡಾಗಳು ನನ್ನನ್ನು ಗುರಿಯಾಗಿಸಿಕೊಂಡು ಭಾರೀ ಕಲ್ಲು ತೂರಾಟ ನಡೆಸಿದರು. ಘಟನೆಯಲ್ಲಿ ನನ್ನ ಕಾರಿನ ಕಿಟಕಿ ಗಾಜು ಒಡೆಹೋಗಿ ನಾನು ಗಾಯಗೊಂಡಿದ್ದೇನೆ. ದುಷ್ಕರ್ಮಿಗಳ ವಿರುದ್ಧ ಕ್ರಮವಹಿಸದ ಸ್ಥಳದಲ್ಲಿದ್ದ ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಬೇಕು ಮತ್ತು ಶಿವಸೇನೆ ಬೆಂಬಲಿಗರ ಮೇಲೆ ಕೊಲೆ ಯತ್ನದ ಆರೋಪದ ಮೇಲೆ ಪ್ರಕರಣ ದಾಖಲಿಸಬೇಕು. ಮುಂಬೈ ಪೊಲೀಸ್ ಕಮಿಷನರ್ ಸ್ಥಳಕ್ಕೆ ಭೇಟಿ ನೀಡದ ಹೊರತು ನಾನು ನನ್ನ ಕಾರಿನಿಂದ ಇಳಿದು ಹೊರಬರುವುದಿಲ್ಲ ಎಂದು ಶಪಥ ಮಾಡಿದ್ದಾರೆ. ಬಾಂದ್ರಾ ಪೊಲೀಸರು ನನ್ನ ದೂರು ದಾಖಲಿಸಿಕೊಳ್ಳಲು ನಿರಾಕರಿಸಿದೆ ಎಂದು ಆರೋಪಿಸಿದ್ದಾರೆ. ದಾಳಿ ಪ್ರಕರಣದ ಕುರಿತು ಪ್ರತಿಕ್ರಿಯಿಸಿರುವ ಮಹಾರಾಷ್ಟ್ರ ಮಾಜಿ ಸಿಎಂ ದೇವೇಂದ್ರ ಫಡ್ನಾವೀಸ್‌, ಮುಂಬೈನಲ್ಲಿ ಶಾಂತಿ ಸುವ್ಯವಸ್ಥೆ ಕುಸಿದುಹೋಗಿದ್ದು, ಗೂಂಡಾಗಳು ಅಟ್ಟಹಾಸ ಮೆರೆಯುತ್ತಿದ್ದಾರೆ. ಈ ತಕ್ಷಣವೇ ಆರೋಪಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!