Tuesday, July 5, 2022

Latest Posts

ಆಂಜನೇಯ ಹುಟ್ಟಿದ್ದು ನಮ್ಮ ಗಂಗಾವತಿಯಲ್ಲಿ ಎಂಬುದಕ್ಕೆ ಎರಡು ಮಾತಿಲ್ಲ: ಸಚಿವ ಬಿ.ಸಿ.ಪಾಟೀಲ್

ಹೊಸದಿಗಂತ ವರದಿ, ಕೊಪ್ಪಳ:

ಆಂಜನೇಯ ಹುಟ್ಟಿದ್ದು ನಮ್ಮಲ್ಲಿ ಗಂಗಾವತಿಯ ಅಂಜನಾದ್ರಿಯಲ್ಲಿ ಎಂಬುದು ಎಲ್ಲರಿಗೂ ಗೊತ್ತಿದೆ ಎರಡು ಮಾತಿಲ್ಲ ಅದಕ್ಕೆ ನಾವು ದಾಖಲೆ ನೀಡುತ್ತೇವೆ ಎಂದು ಕೃಷಿ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ್ ಹೇಳಿದರು.

ತಾಲೂಕಿನ ಕಾಸನಕಂಡಿ, ಗಿಣಿಗೇರಿ ಗ್ರಾಮಗಳ ಕೆರೆಗೆ ಭೇಟಿ ನೀಡಿ ಶುಕ್ರವಾರ ಮಾತನಾಡಿದರು.
ತೆಲಗು ಟಿಟಿಡಿಯವರು ಈಗ ದಾಖಲೆ ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ. ಅವರ ಹೇಳಿಕೆ ಅವರು ನೀಡಲಿ. ನಾವು ನಮ್ಮ ಬಳಿಯ ದಾಖಲೆಗಳನ್ನು ನೀಡುತ್ತೇವೆ. ಅಂಜನಾದ್ರಿ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ. ಇಂದು ಸಚಿವರಾದ ಈಶ್ವರಪ್ಪ, ಕೋಟ ಶ್ರೀನಿವಾಸ ಪೂಜಾರಿ ಸೇರಿ ಇತರರೊಂದಿಗೆ ಸಭೆ ಮಾಡಬೇಕಿತ್ತು. ಆದರೆ, ಪೂಜಾರಿಯವರಿಗೆ ಕೊರೋನಾ ಪಾಸಿಟಿವ್ ಬಂದಿದ್ದು, ಸಭೆ ಮುಂದೂಡಲಾಗಿದೆ ಎಂದರು.

ಮದ್ದಾನೆಗಳಿಗೆ ಗುಬ್ಬಿ ಬುದ್ಧಿ ಹೇಳಲಾಗದು: ಈಶ್ವರಪ್ಪ ಕುರಿತ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹೇಳಿಕೆಗೆ ಉತ್ತರಿಸಿದ ಅವರು, ಈಶ್ವರಪ್ಪ ಸಿದ್ದು ಮದ್ದಾನೆಗಳಿದ್ದಂತೆ. ಮದ್ದಾನೆಗಳು ಗುದ್ದಾಡುವಾಗ ಗುಬ್ಬಿ ಬಂದು ಬುದ್ಧಿ ಹೇಳಲು ಸಾಧ್ಯವೆ ಎಂದು ಸಿದ್ದು, ಈಶ್ವರಪ್ಪ ಅವರವರ ಟೀಕೆಗಳಿಗೆ ಅವರೇ ಉತ್ತರಿಸುತ್ತಾರೆ ನಾನು ಪ್ರತಿಕ್ರಿಯಿಸುವುದಿಲ್ಲವೆಂದು ಎಂದು ಹೇಳಿದರು.

ರಾಜ್ಯದಲ್ಲಿ ಕೊರೋನಾ ನಿಯಂತ್ರಣದ ಬಗ್ಗೆ ವಿರೋಧ ಪಕ್ಷದವರ ಹೇಳಿಕೆಗೆ ಉತ್ತರಿಸಿದ ಅವರು, ಸಿಎಂ ಲಾಕ್ ಡೌನ್ ಇಲ್ಲ ಎಂದಿದ್ದಾರೆ. ಏ.18ಕ್ಕೆ ಸರ್ವಪಕ್ಷ ಸಭೆ ಇದೆ. ಕೋವಿಡ್ ನಿಯಂತ್ರಣ ಬಗ್ಗೆ ನಿರ್ಧಾರ ಆಗಲಿದೆ. ಸದ್ಯಕ್ಕೆ ಲಾಕ್ಡೌನ್ ಜಾರಿ ಸರಿಯಲ್ಲ. ಸೋಂಕು ನಿಯಂತ್ರಣಕ್ಕೆ ಜನರೂ ಸಹಕರಿಸಬೇಕು. ಚುನಾವಣೆ ಮಾಡಬೇಕು. ಅದು ಪ್ರಜಾತಾಂತ್ರ ವ್ಯವಸ್ಥೆ. ಕೋವಿಡ್ ಇದ್ದರೂ ಮಾಡಬೇಕಾಗಿದೆ. ಚುನಾವಣೆ ನಡೆದಿರುವ ಮೂರು ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನೀರಾವರಿ ಕಾಮಗಾರಿ ಶೀಘ್ರ ಅನುಷ್ಠಾನ: ಬಹದ್ದೂರ ಬಂಡಿ ಏತ ನೀರಾವರಿ ಹಾಗೂ ಮುಂಡರಗಿ ಹಾಗೂ ಇತರ 80ಗ್ರಾಮಗಳಿಗೆ ಕುಡಿವ ನೀರು ಪೂರೈಸುವ ಯೋಜನೆಗಳು ನನೆಗುದಿಗೆ ಬಿದ್ದಿದ್ದು, ಶೀಘ್ರ ಅನುಷ್ಠಾನ ಮಾಡಲಾಗುವುದು ಎಂದರು. ಕೆಡಿಪಿ ಸಭೆಯಲ್ಲಿ ಚರ್ಚಿಸಿದಂತೆ ಬಹದ್ದೂರಬಂಡಿ ಏತ ನೀರಾವರಿ, ಕಾಸನಕಂಡಿ ಕುಡಿವ ನೀರು ಕಾಮಗಾರಿ ನಿಧಾನವಾಗಿವೆ. ಮಂದಗತಿ ಬಗ್ಗೆ ಮಾಹಿತಿ ಪಡೆಯುತ್ತಿರುವೆ. ಗಿಣಿಗೇರಿ ಕೆರೆ ಅಭಿವೃದ್ಧಿ ಮಾಡಲಾಗುತ್ತಿದೆ. ಗವಿಶ್ರೀಗಳು ಜನರ ಸಹಕಾರದೊಂದಿಗೆ ಅಭಿವೃದ್ಧಿ ಮಾಡುತ್ತಿದ್ದಾರೆ. ಧಾರ್ಮಿಕ ಗುರುಗಳು ಮನಸ್ಸು ಮಾಡಿದರೆ ಏನೂ ಬೇಕಾದರು ಮಾಡಬಹುದು ಎಂಬುದಕ್ಕೆ ಇದು ಉದಾಹರಣೆಯಾಗಿದೆ. ಹೊಸ ಟೆಂಡರ್ ಕರೆದು ಕುಡಿವ ನೀರು ಕಾಮಗಾರಿ ಕೆಲಸ ಆರಂಭಿಸಲಾಗುವುದು ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss