ಪಾಂಡ್ಯ ಬ್ರದರ್ಸ್ ಮನೆಯಲ್ಲಿ ಮತ್ತೆ ಸಂತಸ: ಗಂಡು ಮಗುವಿಗೆ ತಂದೆಯಾದ ಕೃನಾಲ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 

ಪಾಂಡ್ಯ ಬ್ರದರ್ಸ್ ಮನೆಯಲ್ಲಿ ಮತ್ತೆ ಸಂತಸ ಮನೆ ಮಾಡಿದ್ದು, ಈ ಬಾರಿ ಕೃನಾಲ್ ಪಾಂಡ್ಯ ತಂದೆಯಾಗಿ ಬಡ್ತಿ ಪಡೆದಿದ್ದಾರೆ.
ಹಾರ್ದಿಕ್ಪಾಂಡ್ಯ ಈಗ ಚಿಕ್ಕಪ್ಪನೂ ಆಗಿದ್ದಾರೆ.
ಕೃನಾಲ್ ಪಾಂಡ್ಯ ತಾವು ತಂದೆಯಾದ ಖುಷಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅವರು ತಮ್ಮ ಪತ್ನಿಯೊಂದಿಗೆ ತಮ್ಮ ಮಗ ಇರುವ ಎರಡು ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಪಾಂಡ್ಯ ಬ್ರದರ್ಸ್ ಅಭಿಮಾನಿಗಳು ಮತ್ತು ಕೆಲವು ಕ್ರಿಕೆಟಿಗರು ಶುಭಾಷಯಗಳ ಮಳೆಗರೆದಿದ್ದಾರೆ. ಜಹೀರ್ ಖಾನ್ ಅವರ ಪತ್ನಿ, ಕೃನಾಲ್ ಮತ್ತು ಅವರ ಪತ್ನಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಮಗ ಮತ್ತು ಪತ್ನಿ ಜೊತೆಗಿರುವ ಚಿತ್ರವನ್ನು ಪೋಸ್ಟ್ ಮಾಡಿರುವ ಕೃನಾಲ್ ಪಾಂಡ್ಯ ಮನೆಗೆ ಬಂದ ಪುಟ್ಟ ಅತಿಥಿಯ ಹೆಸರನ್ನೂ ಹೇಳಿದ್ದಾರೆ. ಅವರು ತಮ್ಮ ಮಗನಿಗೆ ಕವೀರ್ ಕೃನಾಲ್ ಪಾಂಡ್ಯ ಎಂಬ ಹೆಸರಿಟ್ಟಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!