ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಇಂದು ಸ್ಯಾಂಡಲ್ವುಡ್ನ ಮೋಹಕ ತಾರೆ (39) ರಮ್ಯಾ ಅವರ ಜನ್ಮ ದಿನ. ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಅಭಿಮಾನಿಗಳು, ಸೆಲಿಬ್ರಿಟಿಗಳು ರಮ್ಯಾಗೆ ವಿಶ್ ಮಾಡಿದ್ದಾರೆ.
ಕನ್ನಡ ಸೇರಿದಂತೆ ತೆಲಗು,ತಮಿಳಿನಲ್ಲೂ ನಟಿಸಿರುವ ರಮ್ಯಾ ದಕ್ಷಿಣ ಭಾರತದಲ್ಲಿ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. ಸಿನಿಮಾ ಮಾತ್ರವಲ್ಲದೇ, ರಾಜಕೀಯ ರಂಗದಲ್ಲಿಯೂ ರಮ್ಯಾ ಸಕ್ರಿಯರಾಗಿದ್ದಾರೆ.
ರಮ್ಯಾ 2003ರಲ್ಲಿ ನಟ ಪುನೀತ್ ರಾಜಕುಮಾರ್ ನಟನೆಯ ಅಭಿ ಚಿತ್ರದ ಮೂಲಕ ಸಿನಿಮಾರಂಗಕ್ಕೆ ಪ್ರವೇಶಿಸಿದ್ದರು. 2016ರಲ್ಲಿ ಬಿಡುಗಡೆಯಾದ ನಾಗರಹಾವು ಸಿನಿಮಾ ರಮ್ಯಾ ಅವರ ಕಡೆಯ ಚಿತ್ರ.
ಆದಷ್ಟು ಬೇಗ ರಮ್ಯಾ ಕಮ್ಬ್ಯಾಕ್ ಮಾಡಲಿ ಎಂಬುದು ಅಭಿಮಾನಿಗಳ ಆಶಯವಾಗಿದೆ. ಕ್ ಮಾಡಲಿ ಎಂದು ಎಲ್ಲರೂ ಬಯಸುತ್ತಿದ್ದಾರೆ. ಇಂದು ಕೂಡ ಸಾಕಷ್ಟು ಅಭಿಮಾನಿಗಳು ಬರ್ತ್ಡೇ ವಿಶ್ ಮಾಡಿ ಮತ್ತೆ ಸಿನಿಮಾರಂಗಕ್ಕೆ ಬನ್ನಿ ಎಂಬ ಆಶಯ ಹೊರಹಾಕಿದ್ದಾರೆ.