ಸಮಂತಾ @ 35; ಅಭಿಮಾನಿಗಳಿಂದ ನಟಿಗೆ ಶುಭಾಶಯಗಳ ಮಹಾಪೂರ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಪ್ರಖ್ಯಾತ ನಟಿ ಸಮಂತಾ ಇಂದು (ಗುರುವಾರ) ತಮ್ಮ 35 ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಈ ವಿಶೇಷ ದಿನದಂದು ಚಿತ್ರರಂಗದ ಗಣ್ಯರು, ಅಭಿಮಾನಿಗಳಿಂದ ನಟಿಗೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. 2010 ರಲ್ಲಿ ಗೌತಮ್ ವಾಸುದೇವ್ ಮೆನನ್ ನಿರ್ದೇಶನದಲ್ಲಿ ಸಮಂತಾ ಹಾಗೂ ಮಾಜಿ ಪತಿ ನಾಗ ಚೈತನ್ಯ ನಟಿಸಿದ್ದ ಸೂಪರ್‌ ಹಿಟ್‌ ತೆಲುಗು ಚಿತ್ರ ಯೇ ಮಾಯಾ ಚೇಸಾವೆಯೊಂದಿಗೆ ಸಮಂತಾ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.
ಇದುವರೆಗೆ 45 ಸಿನಿಮಾಗಳಲ್ಲಿ ನಟಿಸಿರುವ ಸಮಂತದ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಸದ್ಯ ಅತ್ಯಂತ ಬೇಡಿಕೆಯ ನಟಿ. ದೂಕುಡು, ಈಗ, ಮಹಾನಟಿ, ಮನಂ, ಮಜಲಿ, ಸನ್‌ ಆಫ್‌ ಸತ್ಯಮೂರ್ತಿ, ಅತ್ತಾರೆಂಟಿಕಿ ದಾರೇದಿ, ಓ ಬೇಬಿ ಮೊದಲಾದ ಸಮಂತಾ ನಟನೆಯ ಚಿತ್ರಗಳು ಭರ್ಜರಿ ಹಿಟ್‌ ಎನಿಸಿಕೊಂಡಿವೆ.
2021 ಸಮಂತಾ ಪಾಲಿಗೆ ಲಕ್ಕಿಯಾಗಿತ್ತು. ಪ್ಯಾನ್-ಇಂಡಿಯಾ ಬ್ಲಾಕ್‌ಬಸ್ಟರ್ ‘ಪುಷ್ಪಾ: ದಿ ರೈಸ್’ (2021) ನಲ್ಲಿ ಸೊಂಟ ಬಳುಕಿಸಿದ ‘ಊ ಅಂಟಾವ ಮಾವ.. ಊ ಊ ಅಂಟಾವ’ ಸ್ಪೆಷಲ್‌ ಸಾಂಗ್‌ ದೇಶಾದ್ಯಂತ ಕ್ರೇಜ್‌ ಹುಟ್ಟುಹಾಕಿತು. ಆಬಳಿಕ ಮನೋಜ್ ಬಾಜಪೇಯಿ ಜೊತೆಗೆ ಅಭಿನಯಿಸಿದ ವೆಬ್ ಸರಣಿ ‘ದಿ ಫ್ಯಾಮಿಲಿ ಮ್ಯಾನ್ 2’ ಭಾರೀ ಯಶಸ್ಸುಕಂಡಿತು. ಮೂಲಗಳ ಪ್ರಕಾರ ಸಮಂತಾ ಸದ್ಯದಲ್ಲೇ ಬಾಲಿವುಡ್ ಪ್ರವೇಶಿಸಲಿದ್ದಾರೆ. ನಟಿ ತಾಪ್ಸಿ ಪನ್ನು ನಿರ್ಮಾಣ ಸಂಸ್ಥೆ ‘ಔಟ್‌ಸೈಡರ್ಸ್ ಫಿಲ್ಮ್ಸ್’ ಬ್ಯಾನರ್‌ ನಡಿ ತಮ್ಮ ಮೊದಲ ಹಿಂದಿ ಚಿತ್ರಕ್ಕೆ ಸಹಿ ಹಾಕಿದ್ದಾರೆ.
ವಿಘ್ನೇಶ್ ಶಿವನ್ ನಿರ್ದೇಶನದಲ್ಲಿ ಸಮಂತಾ, ವಿಜಯ್ ಸೇತುಪತಿ ಮತ್ತು ನಯನತಾರಾ ಪ್ರಮುಖ ಪಾತ್ರಗಳಲ್ಲಿರುವ ‘ಕಾತುವಾಕಲ ಎರಡು ಕಾದಲ್’ ಚಿತ್ರವು ಸಮಂತಾ ಜನ್ಮದಿನವಾದ ಇಂದು ದೇಶಾದ್ಯಂತ ಬಿಡುಗಡೆಯಾಗಿದೆ.
ಚಿತ್ರೀಕರಣ ಹಂತದಲ್ಲಿರುವ ಗುಣಶೇಖರ್ ನಿರ್ದೇಶನದ ಪೌರಾಣಿಕ ಚಿತ್ರ ‘ಶಾಕುಂತಲಂ’ನಲ್ಲಿ ಪೌರಾಣಿಕ ರಾಜಕುಮಾರಿ ಶಕುಂತಲಾ ಪಾತ್ರದಲ್ಲಿಸಮಂತಾ ಕಾಣಿಸಿಕೊಳ್ಳಲಿದ್ದಾರೆ. ಅರೆಂಜ್‌ ಮೆಂಟ್ಸ್‌ ಆಫ್‌ ಲವ್ ಎಂಬ ಹಾಲಿವುಡ್‌ ಚಿತ್ರದಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!