‘ಹರ್ ಘರ್ ತಿರಂಗಾ’ ಅಭಿಯಾನ: ಸಿಎಸ್‌ಆರ್‌ ಹಣ ಬಳಕೆಗೆ ಅನುಮತಿ ನೀಡಿದೆ ಕಾರ್ಪೋರೇಟ್‌ ಸಚಿವಾಲಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಕಾರ್ಪೋರೇಟ್‌ ಕಂಪನಿಗಳು ತಮ್ಮ ಸಿಎಸ್‌ಆರ್‌ ಹಣವನ್ನು ‘ಹರ್ ಘರ್ ತಿರಂಗಾ’ ಅಭಿಯಾನಕ್ಕೆ ಸಂಬಂಧಿಸಿದ ಚಟುವಟಿಕೆಗಳಿಗೆ ಖರ್ಚುಮಾಡಲು ಕಾರ್ಪೋರೇಟ್‌ ಸಚಿವಾಲಯ ಅನುಮತಿ ನೀಡಿದ್ದು ಈ ಕುರಿತು ಸುತ್ತೋಲೆಯನ್ನು ಹೊರಡಿಸಿದೆ.

‘ಹರ್ ಘರ್ ತಿರಂಗಾ’ ಅಭಿಯಾನವನ್ನು ಆಜಾದಿ ಕಾ ಅಮೃತ್ ಮಹೋತ್ಸವದ ಭಾಗವಾಗಿ ಆಚರಿಸಲು ಮನೆ ಮನೆಗಳಲ್ಲಿ ರಾಷ್ಟ್ರಧ್ವಜವನ್ನು ಹಾರಿಸಲು ಜನರನ್ನು ಉತ್ತೇಜಿಸಲು ಆಯೋಜಿಸಲಾಗಿದೆ.

ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ ಹೊರಡಿಸಿದ ಸುತ್ತೋಲೆ ಪ್ರಕಾರ, ಹರ್ ಘರ್ ತಿರಂಗಾ ಅಭಿಯಾನವು ಜನರ ಹೃದಯದಲ್ಲಿ ದೇಶಭಕ್ತಿಯ ಭಾವನೆಯನ್ನು ಪ್ರಚೋದಿಸಲು ಮತ್ತು ಭಾರತೀಯ ರಾಷ್ಟ್ರಧ್ವಜದ ಬಗ್ಗೆ ಜಾಗೃತಿಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ಈ ಅಭಿಯಾನಕ್ಕೆ ಸಂಬಂಧಿಸಿದ ಚಟುವಟಿಕೆಗಳಿಗೆ ಉದಾಹರಣೆಗೆ ಸಾಮೂಹಿಕ ಉತ್ಪಾದನೆ ಮತ್ತು ರಾಷ್ಟ್ರಧ್ವಜದ ಪೂರೈಕೆ, ಔಟ್‌ರೀಚ್ ಪ್ರಯತ್ನಗಳು ಮತ್ತು ಇತರ ಸಂಬಂಧಿತ ಚಟುವಟಿಕೆಗಳಿಗೆ ಸಿಎಸ್‌ಆರ್ ನಿಧಿಯ ಖರ್ಚು ಮಾಡಬಹುದು ಎಂದಿದೆ.

ಏನಿದು ಸಿಎಸ್‌ಆರ್‌ ನಿಧಿ ?
ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (CSR) ಎಂಬುದು ಕೆಲವು ವರ್ಗದ ಲಾಭದಾಯಕ ಕಂಪನಿಗಳು ತಮ್ಮ ಮೂರು ವರ್ಷಗಳ ವಾರ್ಷಿಕ ಸರಾಸರಿ ನಿವ್ವಳ ಲಾಭದ ಕನಿಷ್ಠ ಎರಡು ಪ್ರತಿಶತವನ್ನು ಸಾಮಾಜಿಕ ಮತ್ತು ಇತರ ಉಪಯುಕ್ತ ಕಾಳಜಿ ಕಾರ್ಯಗಳಿಗೆ ಬಳಸುವ ಹಣವಾಗಿದೆ. ಇದು 2013 ರ ಕಂಪನಿಗಳ ಕಾಯಿದೆ ಅಡಿಯಲ್ಲಿ ಬರುತ್ತದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!