Thursday, June 30, 2022

Latest Posts

ಭರ್ತಿಯಾಗಿರುವ ಹಾರಂಗಿ ಅಣೆಕಟ್ಟು: ಬೇಸಿಗೆ ಬೆಳೆಗೆ ನೀರು ಹರಿಸಲು ರೈತರ ಒತ್ತಾಯ

ಹೊಸದಿಗಂತ ವರದಿ, ಕುಶಾಲನಗರ:

ಅಕಾಲಿಕ ಮಳೆಯಿಂದಾಗಿ ಜಿಲ್ಲೆಯ ಪ್ರಮುಖ ಅಣೆಕಟ್ಟೆಯಾದ ಹಾರಂಗಿ ಅಣೆಕಟ್ಟು ಡಿಸೆಂಬರ್ ತಿಂಗಳುಗಳಲ್ಲಿಯೂ ಭರ್ತಿಯಾಗಿಯೇ ಇರುವುದರಿಂದ‌ ಈ ಬಾರಿ ಕೊಡಗಿನ ಗಡಿ ಭಾಗದವರೆಗಿನ ರೈತರ ಬೇಸಿಗೆ ಬೆಳೆಗೆ ನೋರು ಹರಿಸಬೇಕು ಎಂದು ರೈತರು ಒತ್ತಾಯಿಸೊದ್ದಾರೆ.
ಕಳೆದ ಆರು ತಿಂಗಳುಗಳಿಂದ ಜಿಲ್ಲೆ ಸೇರಿದಂತೆ ಮೈಸೂರು ಭಾಗದ ಎರಡೂ ತಾಲೂಕು ಮತ್ತು ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಹಾರಂಗಿ ಅಚ್ಚುಕಟ್ಟು ಪ್ರದೇಶಕ್ಕೆ ಭತ್ತ ಬೇಸಾಯಕ್ಕೆ ನೀರನ್ನು ಒದಗಿಸಲಾಗಿದೆ. ಈ ಸಾಲಿನಲ್ಲಿ ಹೈಬ್ರಿಡ್ ತಳಿಯ ಬೆಳೆಗಳಾಗಿರುವುದರಿಂದಾಗಿ ಎಲ್ಲಾ ತಳಿಯ ಭತ್ತ ಬೆಳೆಯು ಕಟಾವಿಗೆ ಬಂದಿರುವುದರಿಂದ ಹಾರಂಗಿ ಅಣೆಕಟ್ಟೆಯಿಂದ ನಾಲೆಯ ಮೂಲಕ ಹರಿಸುವ ನೀರನ್ನು ಸ್ಥಗಿತಗೊಳಿಸಲಾಗಿದೆ.
ಅಲ್ಲದೆ ಈ ಬಾರಿ ಆಯಾ ಪ್ರದೇಶದ ರೈತರು ಅಕಾಲಿಕ ಮಳೆಯ ನಡುವೆಯೂ ಕಟಾವು ಅರಂಭಿಸಿದ್ದು, ಭತ್ತದ ಗದ್ದೆಗಳಲ್ಲಿ ಇನ್ನೂ ತೇವಾಂಶವಿದೆ.ಇದರೊಂದಿಗೆ ಹಾರಂಗಿ ಅಣೆಕಟ್ಟೆಯಲ್ಲಿ ಮಳೆಗಾಲದ ರೀತಿಯಲ್ಲೇ ಈಗಲೂ ನೀರು ಸಂಗ್ರಹವಾಗಿರುವುದರಿಂದ ಕೊಡಗಿನ ಗಡಿ ಭಾಗವಾದ ಶಿರಂಗಾಲದವರೆಗೆ ಬೇಸಿಗೆ ಬೆಳೆಗೆ 15 ದಿನಗಳಿಗೊಮ್ಮೆ ನಾಲೆಯ ಮೂಲಕ ಹರಿಸುವಂತಾಗಬೇಕು ಎಂಬುದು ಈ ವ್ಯಾಪ್ತಿಯ ನೂರಾರು ರೈತರ ಒತ್ತಾಯವಾಗಿದೆ.
ಕೊಡಗಿನ ಗಡಿ ಭಾಗದವರೆಗೆ ಹಾರಂಗಿ ನಾಲೆ ಮೂಲಕ ನೀರು ಹರಿಸಲು ಅಣೆಕಟ್ಟೆ ನಿರ್ಮಾಣದ ಸಂದರ್ಭದಲ್ಲೇ ಗೇಟ್ ವ್ಯವಸ್ಥೆ ಮಾಡಲಾಗಿದೆ. ನೀರು ಹರಿಸಿದಲ್ಲಿ ಜಿಲ್ಲೆಯ ರೈತರು ಹಂಗಾಮಿ ಬೆಳೆಗಳಾದ ಕಾಳು, ದ್ವಿದಳ ಧಾನ್ಯಗಳನ್ನು ಬೆಳೆಯಲು ಅನುಕೂಲವಾಗಲಿದೆ. ಈಗಾಗಲೇ ಅಕಾಲಿಕ ಮಳೆಯಿಂದಾಗಿ ಭತ್ತದ ಬೆಳೆ, ಶುಂಠಿ, ಸಿಹಿ ಗೆಣಸು, ಕೆಸ, ಕೇನೆ ಸೇರಿದಂತೆ ಬಹುತೇಕ ಎಲ್ಲಾ ಬೆಳೆಗಳು ಹಾಳಾಗಿ ಈ ಭಾಗದ ರೈತರು ಸಂಕಷ್ಟದಲ್ಲಿದ್ದಾರೆ. ಬೇಸಿಗೆ ಕಾಲದಲ್ಲಿ ಭೂಮಿಯನ್ನು ಪಾಳು ಬಿಡುವುದರ ಬದಲು ಹಂಗಾಮಿ ಬೆಳೆಗಳನ್ನು ಬೆಳೆದುಕೊಳ್ಳಲು ನೀರಾವರಿ ಇಲಾಖೆಯವರು ಎರಡೂ ವಾರಕ್ಕೊಮ್ಮೆ ನಾಲೆಯ ಮೂಲಕ ನೀರು ಹರಿಸಿದರೆ ಅನುಕೂಲವಾಗುವುದು ಎಂದು ಶಿರಂಗಾಲ, ತೊರೆನೂರು, ಹೆಬ್ಬಾಲೆ, ಭುವನಗಿರಿ ಹುದುಗೂರು ಮದಲಾಪುರ, ಕಾಳಿದೇವನ ಹೊಸೂರು ಗ್ರಾಮದ ರೈತರು ಒತ್ತಾಯಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss