spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, October 17, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಮಹಿಳೆಗೆ ಕಿರುಕುಳ,ಅಸಭ್ಯ ವರ್ತಿಸಿದ ಪ್ರಕರಣ: ಆರೋಪಿಗೆ ಗ್ರಾಮದ ಎಲ್ಲ ಮಹಿಳೆಯರ ಬಟ್ಟೆ ತೊಳೆದು, ಇಸ್ತ್ರಿ ಮಾಡಿಕೊಡುವಂತೆ ಶಿಕ್ಷೆ ನೀಡಿದ ನ್ಯಾಯಾಲಯ!

- Advertisement -Nitte

ಹೊಸದಿಗಂತ ಆನ್ ಲೈನ್ ಡೆಸ್ಕ್:

ಮಹಿಳೆಗೆ ಕಿರುಕುಳ ಮತ್ತು ಅಸಭ್ಯವಾಗಿ ವರ್ತಿಸಿದ ಪ್ರಕರಣವೊಂದರ ಆರೋಪಿಗೆ ಬಿಹಾರದ ಮಧುಬನಿ ಜಿಲ್ಲೆಯ ಝಂಜರಪುರದ ಸ್ಥಳೀಯ ನ್ಯಾಯಾಲಯ ವಿಭಿನ್ನ ಶಿಕ್ಷೆ ವಿಧಿಸಿದೆ.ಇದರ ಪ್ರಕಾರ , ಗ್ರಾಮದಲ್ಲಿರುವ ಎಲ್ಲ ಮಹಿಳೆಯರ ಬಟ್ಟೆ ತೊಳೆಯುವಂತೆ ನ್ಯಾಯಾಲಯವು ಆರೋಪಿಗಳಿಗೆ ಆದೇಶಿಸಿದೆ.
ನ್ಯಾಯಾಲಯವು ಅದೇ ಷರತ್ತಿನ ಮೇಲೆ ಆರೋಪಿಗಳಿಗೆ ಜಾಮೀನು ನೀಡಿದೆ. ನ್ಯಾಯಾಲಯವು ಪ್ರಕರಣದ ವಿಚಾರಣೆ ನಡೆಸುವಾಗ, ಮುಂದಿನ ಆರು ತಿಂಗಳವರೆಗೆ ಆರೋಪಿ ತನ್ನ ಮನಸ್ಸಿನಲ್ಲಿ ಮಹಿಳೆಯರ ಬಗ್ಗೆ ಗೌರವವನ್ನು ಹೊಂದಲು ಹಳ್ಳಿಯ ಎಲ್ಲ ಮಹಿಳೆಯರ ಬಟ್ಟೆಗಳನ್ನು ತೊಳೆಯಬೇಕು ಎಂದು ಹೇಳಿದೆ. ಅಷ್ಟೇ ಅಲ್ಲ, ಆರೋಪಿ ಮಹಿಳೆಯರ ಬಟ್ಟೆಗಳನ್ನು ತೊಳೆದ ನಂತರ ಬಟ್ಟೆಗಳನ್ನು ಇಸ್ತ್ರಿ ಮಾಡಿ ಹಿಂದಿರುಗಿಸಬೇಕು ಎಂದು ನ್ಯಾಯಾಲಯ ಹೇಳಿದೆ.
ನ್ಯಾಯಮೂರ್ತಿ ಅವಿನಾಶ್ ಕುಮಾರ್, ಪ್ರಕರಣದ ವಿಚಾರಣೆ ವೇಳೆ 20 ವರ್ಷದ ಆರೋಪಿ ಲಾಲನ್ ಕುಮಾರ್ ಗೆ ಮಹಿಳೆಯರನ್ನು ಗೌರವಿಸುವಂತೆ ಹೇಳಿದರು.
ಪ್ರಕರಣದ ವಿಚಾರಣೆಯ ಸಮಯದಲ್ಲಿ ನ್ಯಾಯಾಲಯವು ಆರೋಪಿಗೆ ಯಾವ ಕೆಲಸ ಮಾಡುತ್ತಿದ್ದಿ? ಎಂದು ಕೇಳಿತು. ಈ ಪ್ರಶ್ನೆಗೆ ಆರೋಪಿ ಲಾಂಡ್ರಿ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿದ. ಆ ನಂತರ ಆತನಿಗೆ ಮಹಿಳೆಯರ ಬಟ್ಟೆ ಒಗೆಯುವಂತೆ ನ್ಯಾಯಾಲಯ ಆದೇಶಿಸಿತು. ಗ್ರಾಮದಲ್ಲಿ ಸುಮಾರು 2000 ಮಹಿಳೆಯರು ಇದ್ದಾರೆ. ಇದರರ್ಥ ಆರೋಪಿಯು ಮುಂದಿನ 6 ತಿಂಗಳುಗಳ ಕಾಲ 2000 ಮಹಿಳೆಯರ ಬಟ್ಟೆಗಳನ್ನು ಉಚಿತವಾಗಿ ತೊಳೆಯಬೇಕು. ನಂತರ ಆತ ಇಸ್ತ್ರಿ ಮಾಡಿ ಹಿಂದಿರುಗಿಸಬೇಕು. ಅಲ್ಲದೆ, ಆರೋಪಿ ಲಾಲನ್ ನ್ಯಾಯಾಲಯದ ಆದೇಶವನ್ನು ಸರಿಯಾಗಿ ಅನುಸರಿಸುತ್ತಿದ್ದಾನೆಯೇ ಎಂದು ನೋಡುವುದು ಗ್ರಾಮದ ಸರ್​​ಪಂಚ್ ಅಥವಾ ಗ್ರಾಮ ಸೇವಕರ ಜವಾಬ್ದಾರಿಯಾಗಿದೆ ಎಂದು ನ್ಯಾಯಾಧೀಶರು ಹೇಳಿದ್ದಾರೆ.
ಆರೋಪಿ ಲಾಲನ್ ತನ್ನ ಉಚಿತ ಕೆಲಸಕ್ಕಾಗಿ ಸರ್​​ಪಂಚ್ ಅಥವಾ ಗ್ರಾಮ ಸೇವಕರಿಂದ ಪ್ರಮಾಣಪತ್ರವನ್ನು ತಂದು ನ್ಯಾಯಾಲಯಕ್ಕೆ ಸಲ್ಲಿಸಬೇಕು. ನ್ಯಾಯಾಲಯವು ಜಾಮೀನು ಅರ್ಜಿಯ ಪ್ರತಿಯನ್ನು ನಿಯಮಗಳು ಮತ್ತು ಷರತ್ತುಗಳೊಂದಿಗೆ ಸರಪಂಚ ಮತ್ತು ಹಳ್ಳಿಯ ಮುಖ್ಯಸ್ಥರಿಗೆ ಕಳುಹಿಸಿದೆ. ಮಹಿಳೆಯ ಮೇಲೆ ಕಿರುಕುಳ ಮತ್ತು ದೌರ್ಜನ್ಯದ ಆರೋಪದ ಮೇಲೆ ಲಾಲನ್ ಕುಮಾರ್ ವಿರುದ್ಧ ಏಪ್ರಿಲ್ 19 ರಂದು ಲೋಖಾ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸಲಾಗಿತ್ತು.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss