ಏರ್ ಇಂಡಿಯಾ ಆಯಿತು ಗೋ ಫಸ್ಟ್ ವಿಮಾನದಲ್ಲೂ ಮಹಿಳಾ ಗಗನಸಖಿಗೆ ಕಿರುಕುಳ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಏರ್ ಇಂಡಿಯಾ ವಿಮಾನದಲ್ಲಿ ಮಹಿಳೆ ಮೇಲೆ ಮೂತ್ರ ವಿಸರ್ಜನೆ ಮಾಡಿರುವ ಘಟನೆ ಬೆಳಕಿಗೆ ಬಂದ ಬಳಿಕ ಇದೀಗ ಗೋ ಫಸ್ಟ್ ವಿಮಾನದಲ್ಲಿ ಕಿರುಕುಳದ ಆರೋಪಗಳು ಕೇಳಿಬರುತ್ತಿದೆ .

ಜನವರಿ 5 ರಂದು ದೆಹಲಿಯಿಂದ ಗೋವಾಗೆ ಹೋಗುತ್ತಿದ್ದ ಗೋ ಫಸ್ಟ್ ವಿಮಾನದಲ್ಲಿ ಮಹಿಳಾ ಗಗನಸಖಿಗೆ ವಿದೇಶಿ ಪ್ರಯಾಣಿಕನೊಬ್ಬ ಕಿರುಕುಳ ನೀಡಿರುವುದಾಗಿ ವರದಿಯಾಗಿದೆ.

ಪ್ರಯಾಣಿಕ ಆಕೆಗೆ ತನ್ನೊಂದಿಗೆ ಕುಳಿತುಕೊಳ್ಳುವಂತೆ ಹೇಳಿ ಕಿರುಕುಳ ನೀಡಿರುವುದಾಗಿ ಆರೋಪಿಸಲಾಗಿದೆ.ಆತ ಈ ವೇಳೆ ಮದ್ಯಪಾನ ಮಾಡಿದ್ದನೋ ಇಲ್ಲವೋ ಎಂಬುದು ತಿಳಿದುಬಂದಿಲ್ಲ. ವಿಮಾನ ಗೋವಾದ ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿದ್ದಂತೆ ಆತನನ್ನು ವಿಮಾನ ಭದ್ರತಾ ಸಂಸ್ಥೆ ಸಿಐಎಸ್‌ಎಫ್‌ಗೆ ಹಸ್ತಾಂತರಿಸಲಾಗಿದೆ. ಈ ಬಗ್ಗೆ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯಕ್ಕೆ (ಡಿಜಿಸಿಎ) ಮಾಹಿತಿ ನೀಡಲಾಗಿದೆ.

ಏರ್ ಇಂಡಿಯಾ ವಿಮಾನದಲ್ಲಿ ಮೂತ್ರ ವಿಸರ್ಜನೆ ಮಾಡಿರುವ ಘಟನೆ ಬೆಳಕಿಗೆ ಬಂದಿರುವ ಬೆನ್ನಲ್ಲೇ ಈ ಘಟನೆಯೂ ನಡೆದಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!