Wednesday, July 6, 2022

Latest Posts

ಕ್ರಿಕೆಟ್‌ ಜೀವನಕ್ಕೆ ವಿದಾಯ ಹೇಳಿದ ಟರ್ಬನೇಟರ್ ಹರ್ಭಜನ್‌ ಸಿಂಗ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಭಾರತ ಕ್ರಿಕೆಟ್‌ ಕ್ಷೇತ್ರದ ದಿಗ್ಗಜ, ಸ್ಪಿನ್‌ ಬೌಲರ್‌ ಹರ್ಭಜನ್‌ ಸಿಂಗ್‌ ಇಂದು ತಮ್ಮ ಎಲ್ಲಾ ಪ್ರಕಾರದ ಕ್ರಿಕೆಟ್‌ ಗೆ ನಿವೃತ್ತಿ ಘೋಷಿಸಿದ್ದಾರೆ.
ಹರ್ಭಜನ್‌ ಸಿಂಗ್‌ ತಮ್ಮ 17ನೇ ವಯಸ್ಸಿನಲ್ಲಿ (1998) ಕ್ರಿಕೆಟ್‌ ಗೆ ಪಾದಾರ್ಪಣೆ ಮಾಡಿದ್ದರು. 1998-2015ರವರೆಗೆ ಹರ್ಭಜನ್‌ 103 ಟೆಸ್ಟ್‌ ಪಂದ್ಯಗಳು, 417 ವಿಕೆಟ್‌ ಗಳು ಹಾಗೂ 2235 ರನ್‌ ಗಳನ್ನು ಪಡೆದಿದ್ದಾರೆ. 28 ಪಂದ್ಯಗಳಲ್ಲಿ 25 ವಿಕೆಟ್‌ ಪಡೆಯುವ ಮೂಲಕ ಟಿ20ಯಲ್ಲಿ ತಮ್ಮದೇಯಾದ ಛಾಪು ಮೂಡಿದ್ದರು ಹರ್ಭಜನ್.
ಅನಿಲ್ ಕುಂಬ್ಳೆ ಮತ್ತು ಆರ್.ಅಶ್ವಿನ್ ನಂತರ ಹರ್ಭಜನ್ ಸಿಂಗ್ ಭಾರತದ ಪರ ಅತಿ ಹೆಚ್ಚು ಟೆಸ್ಟ್ ವಿಕೆಟ್ ಪಡೆದ ಮೂರನೇ ಬೌಲರ್ ಆಗಿದ್ದಾರೆ.  ಈಗ ಇವರು ತಮ್ಮ 23 ವರ್ಷಗಳ ಕ್ರಿಕೆಟ್‌ ಜೀವನಕ್ಕೆ ಶಾಶ್ವತ ವಿದಾಯ ಹೇಳಿದ್ದಾರೆ.
ಕ್ರಿಕೆಟ್‌ ಬದುಕಿಗೆ ವಿದಾಯ ನೀಡಿರುವ ಬಗ್ಗೆ ಟ್ವಿಟರ್‌ ನಲ್ಲಿ ಬರೆದುಕೊಂಡಿರುವ ಅವರು, ಎಲ್ಲಾ ಒಳ್ಳೆಯ ವಿಷಯಗಳು ಕೊನೆಗೊಂಡಿವೆ ಮತ್ತು ಇಂದು ನಾನು ಜೀವನದಲ್ಲಿ ಎಲ್ಲವನ್ನೂ ನೀಡಿದ ಕ್ರೀಡೆಗೆ ವಿದಾಯ ಹೇಳುತ್ತಿದ್ದೇನೆ. ಈ 23 ವರ್ಷಗಳ ಸುದೀರ್ಘ ಪ್ರಯಾಣವನ್ನು ಸುಂದರ ಮತ್ತು ಸ್ಮರಣೀಯವಾಗಿ ಮಾಡಿದ ಪ್ರತಿಯೊಬ್ಬರಿಗೂ ನಾನು ಧನ್ಯವಾದ ಹೇಳಲು ಬಯಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss