ಹೊಸದಿಗಂತ ಡಿಜಿಟಲ್ ಡೆಸ್ಕ್:
ಟೀಂ ಇಂಡಿಯಾ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಮತ್ತೆ ತಂದೆಯಾಗುತ್ತಿದ್ದಾರಾ ಅನ್ನೋ ಅನುಮಾನ ಕಾಡುವಂಥ ಫೋಟೊವೊಂದು ಇದೀಗ ವೈರಲ್ ಆಗಿದೆ.
ಪತ್ನಿ ನತಾಶಾ ಸ್ಟಾಂಕೋವಿಕ್ ಜೊತೆ ಕ್ರಿಸ್ಮಸ್ ಸಂದರ್ಭದಲ್ಲಿ ತೆಗೆದ ಫೋಟೊ ಇದಾಗಿದ್ದು, ಇದರಲ್ಲಿ ನತಾಶಾ ಬೇಬಿ ಬಂಪ್ ಎದ್ದು ಕಾಣುತ್ತಿದೆ.
ನತಾಶಾ ಹಾಗೂ ಹಾರ್ದಿಕ್ ಈಗಿನ್ನೂ ಅಗಸ್ತ್ಯನ ಪಾಲನೆಯಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರಾ ಅನ್ನೋ ಅನುಮಾನ ಅಭಿಮಾನಿಗಳಿಗೆ ಕಾಡ್ತಾ ಇದೆ. ಆದರೆ ಈ ಪ್ರಶ್ನೆಗೆ ಇವರಿಬ್ಬರಿಂದ ಉತ್ತರ ಬಂದಿಲ್ಲ.
ಈ ಫೋಟೊ ಎಲ್ಲೆಡೆ ವೈರಲ್ ಆಗಿದ್ದು, ಅಭಿಮಾನಿಗಳು ಡೈರೆಕ್ಟ್ ಆಗಿಯೇ ಅಗಸ್ತ್ಯನಿಗೆ ತಮ್ಮ ಅಥವಾ ತಂಗಿ ಬರ್ತಿದ್ದಾಳಾ? ಹಾರ್ದಿಕ್ ಪಾಂಡ್ಯ ಮತ್ತೆ ತಂದೆಯಾಗ್ತಿದ್ದಾರಾ ಎಂದು ಪ್ರಶ್ನೆ ಮಾಡಿದ್ದಾರೆ.