ʼಬ್ರಿಟಿಷರು ಕೊಲೆಗಾರರುʼ ಎಂದು ಕವಿತೆ ವಾಚಿಸಿ ಜೈಲು ಸೇರಿದ್ದರು ಹರಿ ಹರ ಪ್ರಸಾದ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಡಿಸೆಂಬರ್ 7, 1930 ರಂದು ಉತ್ತರ ಪ್ರದೇಶದ ಮಿರ್ಜಾಪುರ್ ಟೌನ್ ಹಾಲ್‌ನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ದೇಶಭಕ್ತಿ ಕವಿತೆಗಳನ್ನು ವಾಚಿಸಿದ ಕಾರಣಕ್ಕಾಗಿ ಹರಿ ಹರ ಪ್ರಸಾದ್ ಅಲಿಯಾಸ್ ಅಖೋರಿ ಜ್ಞಾನ್ ಸರೂಪ್ ಸಿಂಗ್ ಅವರ ವಿರುದ್ಧ ಬ್ರಿಟೀಷ್‌ ಸರ್ಕಾರ ಕಾನೂನು ಕ್ರಮ ಜರುಗಿಸಿತ್ತು.
ಈ ಕವನಗಳಲ್ಲಿ ಸರ್ಕಾರವನ್ನು ಕೊಲೆಗಾರರ ಸಂಸ್ಥೆ ಎಂದು ಉಲ್ಲೇಖಿಸಲಾಗಿತ್ತು. ಮತ್ತು ಭಾರತದ ಜನರು ಈ ಕೊಲೆಗಾರರನ್ನು ಎದುರಿಸಲು ಸಮರ್ಥರಿದ್ಧಾರೆ ಎಂದು ಹೇಳಲಾಗಿತ್ತು. ಅವರು ತಮ್ಮ ದೇಶಕ್ಕಾಗಿ ತಮ್ಮನ್ನು ತಾವು ತ್ಯಾಗಮಾಡುತ್ತಾರೆ ಎಂದು ಕವಿತೆಯಲ್ಲಿ ಹೇಳಲಾಗಿತ್ತು. ನಿರ್ಭೀತಿಯಿಂದ ಎದ್ದುನಿಂತು ದೇಶಕ್ಕಾಗಿ ಮಡಿದ ಜಿತೇಂದ್ರ ನಾಥ್ ದಾಸ್ ಮತ್ತು ಇತರ ಹುತಾತ್ಮರ ನಾಯಕತ್ವವನ್ನು ಅನುಸರಿಸುವಂತೆ ಅವರು ಸಭೆಯಲ್ಲಿ ಉತ್ತೇಜಿಸಿದರು. ಈ ವಿಚಾರ ಸರ್ಕಾರದ ಗಮನಕ್ಕೆ ಬರುತ್ತಿದ್ದಾಮತೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 124-A ಅಡಿಯಲ್ಲಿ ಅಪರಾಧಕ್ಕೆ ಶಿಕ್ಷೆಗೊಳಗಾದರು. 4 ಫೆಬ್ರವರಿ 1931 ರಂದು ಅವರಿಗೆ ಒಂಬತ್ತು ತಿಂಗಳ ಕಠಿಣ ಜೈಲು ಶಿಕ್ಷೆ ವಿಧಿಸಲಾಯಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!