10 ಎಸೆತಗಳಲ್ಲಿ 5 ರನ್ ಗಳಿಸಲಾಗದೆ ಸೋತ ಇಂಗ್ಲೆಂಡ್‌!‌ ಸೋಲುವ ಪಂದ್ಯದಲ್ಲಿ ಮ್ಯಾಜಿಕ್ ಮಾಡಿದ ಪಾಕ್‌ ಬೌಲರ್ಸ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಕ್ರಿಕೆಟ್ ಆಟ ಒಂದು ರೀತಿಯಲ್ಲಿ ಹಾವು ಏಣಿ ಆಟ ಇದ್ದಂತೆ. ಕೆಲವೊಮ್ಮೆ ಅಂತಿಮ ಓವರ್ ಗಳಲ್ಲಿ ಯಾರು ಗೆಲ್ಲುತ್ತಾರೆ ಹೇಳಲು ಬರುವುದಿಲ್ಲ. ಪಂದ್ಯ ಗೆಲ್ಲುವ ಫೆವರಿಟ್‌ ಅನ್ನಿಸಿಕೊಂಡ ತಂಡ ಅಂತಿಮ ಓವರ್‌ ಗಳಲ್ಲಿ ಮುಗ್ಗರಿಸಿ ಫಲಿತಾಂಶವೇ ಬದಲಾಗಿ ಬಿಡಬಹುದು. ಅದಕ್ಕಾಗಿಯೇ ಕ್ರಿಕೆಟ್‌ ಅನ್ನು ಅನಿಶ್ಚಿತತೆಯ ಕ್ರೀಡೆ ಎನ್ನುತ್ತಾರೆ. ನಿನ್ನೆ ನಡೆದ ಇಂಗ್ಲೆಂಡ್‌ – ಪಾಕ್‌ ನಡುವಿನ ಪಂದ್ಯವೂ ಹಾಗೆಯೇ ಆಗಿದೆ. ಕೊನೆಯ ಎಸೆತದವರೆಗೂ ಗೆಲ್ಲುವ ಫೆವರೇಟ್ ಎನಿಸಿಕೊಂಡಿದ್ದ ಇಂಗ್ಲೆಂಡ್ ಯಾರೂ ಊಹಿಸದ ರೀತಿಯಲ್ಲಿ ಸೋತು ಮುಖಭಂಗಕ್ಕೀಡಾಗಿದೆ. ಅಕ್ಷರಶಃ ಫಿನಿಕ್ಸ್‌ ನಂತೆ ಮೇಲೆದ್ದುಬಂದು ಪಂದ್ಯದಲ್ಲಿ ಕಮ್‌ ಬ್ಯಾಕ್‌ ಮಾಡಿದ ಪಾಕ್‌ ತಂಡ ಅಭಿಮಾನಿಗಳ ದೀರ್ಘಕಾಲ ನೆನಪಿಡುವಂತಹ ಅಮೋಘ ಗೆಲುವು ದಾಖಲಿಸಿದೆ. ಕರಾಚಿ ಮೈದಾನದಲ್ಲಿ ನಡೆದ ಇಂಗ್ಲೆಂಡ್ ಮತ್ತು ಪಾಕಿಸ್ತಾನ ನಡುವಿನ ಟಿ 20 ಪಂದ್ಯ ಕೊನೆಯವರೆಗೂ ಎರಡೂ ಪಕ್ಷಗಳ ನಡುವೆ ತೂಗುಯ್ಯಾಲೆಯಾಡಿದೆ. ಮೊದಲು ಬ್ಯಾಟ್‌ ಮಾಡಿದ್ದ ಪಾಕಿಸ್ತಾನ ನೀಡಿದ 164 ರನ್​ಗಳ ಗುರಿಯನ್ನು ಬೆನ್ನತ್ತಿದ್ದ ಇಂಗ್ಲೆಂಡ್‌ ಗೆಲುವಿನತ್ತ ದಾಪುಗಾಲಿಟ್ಟಿತ್ತು.
ಈ ಹಂತದಲ್ಲಿ ಕೊನೆಯ 10 ಎಸೆತಗಳಲ್ಲಿ ಇಂಗ್ಲೆಂಡ್‌ಗೆ 5 ರನ್‌ಗಳ ಅಗತ್ಯವಿತ್ತು. ಕೈಯ್ಯಲ್ಲಿದ್ದುದು 3 ವಿಕೆಟ್‌.. ಇಂಗ್ಲಿಷ್ ಟೇಲೆಂಡರ್‌ ಗಳ ಬ್ಯಾಟಿಂಗ್‌ ಸಾಮರ್ಥ್ಯ ಪರಿಗಣಿಸಿದರೆ ಅದೇನು ಕಷ್ಟದ ಕೆಲಸವಲ್ಲ.. ಇಂಗ್ಲೆಂಡ್ ಗೆಲ್ಲುತ್ತದೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಪಾಕ್‌ ಬೌಲರ್‌ ಗಳು ಆ ಹಂತದಲ್ಲಿ ಮ್ಯಾಜಿಕ್‌ ಮಾಡಿದರು.  ಇಡೀ ಪಂದ್ಯದ ಸಮೀಕರಣವನ್ನೇ ಬದಲಿಸಿದರು.

19‌ ನೇ ಓವರ್, 12 ಎಸೆತಗಳಲ್ಲಿ 9 ರನ್‌ ಅವಶ್ಯಕತೆ, ಇಂಗ್ಲೆಂಡ್‌ ಕೈಯ್ಯಲ್ಲಿ 3 ವಿಕೆಟ್…

ಪಾಕ್‌ ಬೌಲರ್ ಹ್ಯಾರಿಸ್ ರೂಫ್ ಎಸೆದ 19ನೇ ಓವರ್‌ನ ಎರಡನೇ ಎಸೆತದಲ್ಲಿ ಬೌಂಡರಿ ಬಾರಿಸಿದ ಡಾಸನ್ ಇಂಗ್ಲೆಂಡ್ ತಂಡವನ್ನು ಗೆಲುವಿನತ್ತ ಒಂದು ಹೆಜ್ಜೆ ಮುನ್ನಡೆಸಿದರು.. ಆದರೆ ಮೂರನೇ ಎಸೆತದಲ್ಲಿ ಡಾಸನ್ (34) ಕ್ಯಾಚಿತ್ತು ಔಟಾದರು. ನಾಲ್ಕನೇ ಎಸೆತದಲ್ಲಿ ಸ್ಟೋನ್ (0) ಗೋಲ್ಡನ್ ಡಕ್ ಆದರು. ಇದಾದ ಬಳಿಕ ಆ ಓವರ್‌ನ ಕೊನೆಯ ಎರಡು ಎಸೆತಗಳಲ್ಲಿ ಕೇವಲ 1 ರನ್ ಗಳಿಸಲಾಯಿತು. ಇದರೊಂದಿಗೆ ರೌಫ್ 19‌ ನೇ ಓವರ್‌ ನಲ್ಲಿ ಕೇವಲ 5 ರನ್ ನೀಡಿದ್ದಲ್ಲದೆ, 2 ನಿರ್ಣಾಯಕ ವಿಕೆಟ್‌ಗಳನ್ನು ಪಡೆದರು.

ಕೊನೆಯ ಓವರ್..  4 ರನ್.. ಡೈರೆಕ್ಟ್ ಹಿಟ್..!
ಅಲ್ಲಿಗೆ ಆಟ ಕೊನೆಯ ಓವರ್ ತಲುಪಿತು. ಇಂಗ್ಲೆಂಡ್ ಗೆಲುವಿಗೆ 4 ರನ್ ಅಗತ್ಯವಿತ್ತು. ಕೈಯಲ್ಲಿ ಒಂದು ವಿಕೆಟ್ ಮಾತ್ರ ಉಳಿದಿತ್ತು. ಮೊಹಮ್ಮದ್ ವಾಸಿಂ ಎಸೆದ ಈ ಓವರ್ ನ ಮೊದಲ ಎಸೆತದಲ್ಲಿ ರನ್ ಸಿಗಲಿಲ್ಲ. ಎರಡನೇ ಎಸೆತದಲ್ಲಿ ಸ್ಟ್ರೈಕ್ ನಲ್ಲಿದ್ದ ಟೋಪ್ಲಿ  ಓವರ್‌ನ ಮೊದಲ ಎಸೆತವನ್ನು ಡಾಟ್ ಮಾಡಿದರು. ಎರಡನೆಯ ಎಸೆತದಲ್ಲಿ ಸ್ಟ್ರೈಕ್​ನಲ್ಲಿದ ಟೋಪ್ಲಿ ಶಾರ್ಟ್​ ಮಿಡ್ ವಿಕೆಕೆಟ್‌ ನತ್ತ ಹೊಡೆದು ಸಿಂಗಲ್ ತೆಗೆದುಕೊಳ್ಳಲು ಪ್ರಯತ್ನಿಸಿದರು. ಆದರೆ ​ಅಲ್ಲಿ ನಿಂತಿದ್ದ ನಿಂತಿದ್ದ ಶಾನ್ ಮಸೂದ್ ಅದ್ಭುತ ಫೀಲ್ಡಿಂಗ್ ಮಾಡಿ ವಿಕೆಟ್​ಗೆ ಬಾಲನ್ನು ಎಸೆಯುವ ಮೂಲಕ ಟೋಪ್ಲಿಯನ್ನು ರನ್ ಔಟ್ ಮಾಡಿದರು.

ಪಾಕ್‌ ರೋಚಕ ಪಂದ್ಯ ಗೆಲ್ಲುತ್ತಿದ್ದಂತೆ ಪಾಕಿಸ್ತಾನದ ಡಗೌಟ್‌ನಲ್ಲಿ ಹಾಗೂ ಮೈದಾನದಲ್ಲಿದ್ದ ಅಭಿಮಾನಿಗಳು ಭರ್ಜರಿಯಾಗಿ ಸಂಭ್ರಮಿಸಿದರು. ಇದರೊಂದಿಗೆ 7 ಪಂದ್ಯಗಳ ಟಿ20 ಸರಣಿಯಲ್ಲಿ ಪಾಕ್ 2-2 ಸಮಬಲ ಸಾಧಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!