ಬ್ರಿಟೀಷ್‌ ಸರ್ಕಾರದ ICS ಹುದ್ದೆ ತೊರೆದು ಸ್ವಾತಂತ್ರ್ಯ ಸಂಗ್ರಾಮಕ್ಕೆ ಧುಮುಕಿದ್ದ ಈ ಕೆಚ್ಚೆದೆಯ ಕನ್ನಡಿಗ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 
ಹರಿವಿಷ್ಣು ಕಾಮತ್‌ ಅವರು 13 ಜುಲೈ 1907 ರಂದು ಕರ್ನಾಟಕದ ಮಂಗಳೂರಿನಲ್ಲಿ ಜನಿಸಿದರು. ಮದ್ರಾಸ್ ವಿಶ್ವವಿದ್ಯಾನಿಲಯದಲ್ಲಿ ಅಧ್ಯಯನ ಮಾಡಿದ್ದ ಹರಿವಿಷ್ಣು 1930 ರಲ್ಲಿ ಭಾರತೀಯ ನಾಗರಿಕ ಸೇವೆಗೆ (ICS) ಆಯ್ಕೆಯಾದರು ಮತ್ತು ಕೇಂದ್ರ ಪ್ರಾವಿನ್ಸ್ (MP) ಕೇಡರ್‌ನಲ್ಲಿ ಅಧಿಕಾರಿಯಾಗಿ ನಿಯೋಜಿಸಲ್ಪಟ್ಟರು.
1938 ರಲ್ಲಿ, ನರಸಿಂಗ್‌ಪುರದಲ್ಲಿ ಡೆಪ್ಯೂಟಿ ಕಮಿಷನರ್ ಆಗಿ ಪೋಸ್ಟಿಂಗ್ ಆದ ಸಮಯದಲ್ಲೇ ಅವರು ಐಸಿಎಸ್‌ ಹುದ್ದೆಗೆ ರಾಜೀನಾಮೆ ನೀಡಿದರು ಮತ್ತು ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ತೊಡಗಿದರು. ಅವರು 1940 ರಿಂದ 1945 ರವರೆಗೆ ರಾಜಕೀಯ ಖೈದಿಯಾಗಿ ವಿವಿಧ ಜೈಲುಗಳಲ್ಲಿ ಬಂಧಿಸಲ್ಪಟ್ಟರು.
ಅವರು ಭಾರತದ ಸಂವಿಧಾನ ಸಭೆಯ ಸದಸ್ಯರಾಗಿ ಗಮನಾರ್ಹ ಪಾತ್ರವನ್ನು ನಿರ್ವಹಿಸಿದರು. ಸರಳ ಜೀವನ ಮತ್ತು ಉನ್ನತ ಚಿಂತನೆಯ ಸಾಕಾರ ಮೂರ್ತಿಯಾಗಿದ್ದ ಹರಿವಿಷ್ಣ ಕಾಮತ್‌ ಅವರನ್ನು  ಭಾರತದ ಅತ್ಯುತ್ತಮ ಸಂಸದೀಯ ಪಟು, ಚಿಂತಕ ಮತ್ತು ಬರಹಗಾರ ಎಂದು ಪರಿಗಣಿಸಲಾಗಿದೆ. ಸ್ವಾತಂತ್ರ್ಯದ 75 ನೇ ವರ್ಷದ ಸಂಭ್ರಮಾಚರಣೆಯ ಸಂದರ್ಭದಲ್ಲಿ ಹರಿವಿಷ್ಣು ಕಾಮತ್‌ ಅವರು ಅವರ ದೇಶಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸಲು ವಿಶೇಷ ಅಂಚೆ ಚೀಟಿಯನ್ನು  ಬಿಡುಗಡೆ ಮಾಡಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!