ಹರ್ಷಲ್‌ ಪಟೇಲ್‌ ಸಹೋದರಿ ನಿಧನ: ಮನೆಗೆ ತೆರಳಿದ ಆರ್‌ಸಿಬಿ ಆಟಗಾರ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಐಪಿಎಲ್​ನಲ್ಲಿ ಆರ್​ಸಿಬಿಯ ಪ್ರಮುಖ ಬೌಲಿಂಗ್ ಅಸ್ತ್ರವಾಗಿರುವ ಹರ್ಷಲ್‌ ಪಟೇಲ್‌ ಅವರ ಸಹೋದರಿ ಅನಾರೋಗ್ಯದಿಂದ ನಿಧನರಾಗಿದ್ದು, ಹೀಗಾಗಿ ಅವರು ಮನೆಗೆ ತೆರಳಿದ್ದಾರೆ ಎಂದು ತಿಳಿದುಬಂದಿದೆ.
ಶನಿವಾರ ಮುಂಬೈ ಇಂಡಿಯನ್ಸ್‌ ಎದುರು 7 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿದ ನಂತರ ಹರ್ಷಲ್ ಬಯೋಬಬಲ್​ನಿಂದ ಹೊರಬಂದಿದ್ದಾರೆ.
ಹರ್ಷಲ್‌ ಅವರ ಸಹೋದರಿ ಮೃತಪಟ್ಟಿದ್ದಾರೆ. ಮುಂಬೈ ವಿರುದ್ಧದ ಪಂದ್ಯದ ಬಳಿಕ ಅವರು ತಂಡಕ್ಕೆ ಮರಳಲಿದ್ದಾರೆ. ಇದೀಗ ಪುಣೆಯಿಂದ ನೇರವಾಗಿ ತಮ್ಮ ಮನೆಗೆ ತೆರಳಿದ್ದಾರೆ ಎಂದು ಐಪಿಎಲ್‌ ಮೂಲಗಳು ಮಾಹಿತಿ ನೀಡಿವೆ.
ವರದಿಗಳ ಪ್ರಕಾರ, ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಏಪ್ರಿಲ್ 12ರಂದು ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ ಪೈಪೋಟಿ ನಡೆಸಲಿದ್ದು, ಈ ಪಂದ್ಯಕ್ಕೂ ಮುನ್ನ ಹರ್ಷಲ್‌ ತಂಡಕ್ಕೆ ಮರಳಲಿದ್ದಾರೆ ಎಂದು ತಿಳಿದುಬಂದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!