Monday, August 8, 2022

Latest Posts

ಒಬ್ಬ ಶಿಳ್ಳೆ ಹೊಡೆದಿದ್ದಕ್ಕೆ 40 ವಿದ್ಯಾರ್ಥಿಗಳಿಗೆ ದೊಣ್ಣೆಯಿಂದ ಹೊಡೆದ ಶಿಕ್ಷಕರು: 10 ಜನ ಆಸ್ಪತ್ರೆಗೆ ದಾಖಲು

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಹರಿಯಾಣದ ಫತೇಹಾಬಾದ್ ಜಿಲ್ಲೆಯ ತೋಹಾನಾ ಪ್ರದೇಶದ ಸರ್ಕಾರಿ ಶಾಲೆ ಶಿಕ್ಷಕರು 40 ವಿದ್ಯಾರ್ಥಿಗಳಿಗೆ ದೊಣ್ಣೆಯಿಂದ ಹೊಡೆದಿದ್ದು, 10 ಜನ ವಿದ್ಯಾರ್ಥಿಗಳು ಗಂಭೀರ ಗಾಯಗೊಂಡಿದ್ದಾರೆ.

ಶಿಕ್ಷಕರ ವಿರುದ್ಧ ದೂರು ದಾಖಲಿಸಲಾಗಿದ್ದು, ಗಂಭೀರ ಗಾಯಗೊಂಡ ಹತ್ತು ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆ ವಿವರ:

ಸೋಮವಾರ ಬೆಳಕ್ಕೆ 11 ಗಂಟೆಗೆ ಪ್ರಥಮ ಪಿಯುಸಿ ವಿದ್ಯಾರ್ಥಿಯೊಬ್ಬ ತರಗತಿಯೊಳಗ್ಗೆ ಶಿಳ್ಳೆ ಹೊಡೆದಿದ್ದಾನೆ. ಶಿಳ್ಳೆ ಹೊಡೆದವರು ಯಾರೆಂದು ಶಿಕ್ಷಕರು ಕೇಳಿದಾಗ ಎಲ್ಲ ವಿದ್ಯಾರ್ಥಿಗಳೂ ಮೌನವಾಗಿರುತ್ತಾರೆ. ಶಿಕ್ಷಕರು ಇದರಿಂದ ಕೋಪಗೊಂಡು ಎಲ್ಲ ವಿದ್ಯಾರ್ಥಿಗಳಿಗೂ ದೊಣ್ಣೆಯಿಂದ ಹೊಡೆದಿದ್ದಾರೆ.

ಕೆಲವು ವಿದ್ಯಾರ್ಥಿಗಳ ಪೋಷಕರು ಸಲ್ಲಿಸಿದ ಜಂಟಿ ದೂರಿನ ಪ್ರಕಾರ, ಮಂಗೇ ರಾಮ್, ರಜನಿ ಮತ್ತು ಚರಣಜಿತ್ ಸಿಂಗ್ ಎಂಬ ಮೂವರು ಶಿಕ್ಷಕರು ವಿದ್ಯಾರ್ಥಿಗಳಿಗೆ ದೊಣ್ಣೆಯಿಂದ ಥಳಿಸಿದ್ದಾರೆ.. ಚರಣಜಿತ್ ಸಿಂಗ್ ಇಬ್ಬರು ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳ ವಿರುದ್ಧ ಜಾತಿ ನಿಂದನೆ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

ಘಟನೆ ಬಗ್ಗೆ ಪೊಷಕರಿಗೆ ಮಾಹಿತಿ ನೀಡಿದರೆ ಶಾಲೆಯಿಂದ ಹೊರಹಾಕುವುದಾಗಿ ಚರಣಜಿತ್ ಸಿಂಗ್ ಬೆದರಿಕೆ ಒಡ್ಡಿದ್ದಾರೆ. ಮಹಿಳಾ ಶಿಕ್ಷಕಿಗೆ ಕಿರುಕುಳ ನೀಡಿರುವುದಾಗಿ ಆರೋಪಿಸಿ ಮಕ್ಕಳ ಭವಿಷ್ಯ ಹಾಳು ಮಾಡುವುದಾಗಿಯೂ ಬೆದರಿಸಿದ್ದಾರೆ ಎಂದು ದೂರಿನಲ್ಲಿ ಪೋಷಕರು ಉಲ್ಲೇಖಿಸಿದ್ದಾರೆ.

ಈ ಮೂವರು ಶಿಕ್ಷಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪೋಷಕರು ಪೊಲೀಸರಿಗೆ ಮನವಿ ಮಾಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss