spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, September 19, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಪೆಗಾಸಸ್ ಎಂಬ ಇಸ್ರೇಲಿ ತಂತ್ರಾಂಶದ ಮೂಲಕ ಸರ್ಕಾರ ಮಾಹಿತಿ ಕದಿಯಿತಾ? ಇಲ್ಲಿವೆ ನೀವು ತಿಳಿದಿರಬೇಕಾದ ಸಂಗತಿಗಳು…

- Advertisement -Nitte

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಸಂಸತ್ತಿನ ಅಧಿವೇಶನದಲ್ಲಿ ಪ್ರತಿಪಕ್ಷಗಳ ಗಲಾಟೆಗೆ ಒಂದು ಸರಕು ಸೃಷ್ಟಿಯಾದಂತಿದೆ. ಅದರ ಹೆಸರು ಪೆಗಾಸಸ್. ಒಂದಿಷ್ಟು ಮಾಧ್ಯಮ ಸಂಸ್ಥೆಗಳು ಹಾಗೂ ಅಂತಾರಾಷ್ಟ್ರೀಯ ವೇದಿಕೆಗಳು ಸೇರಿಕೊಂಡು ಭಾರತ ಸೇರಿದಂತೆ ಹಲವು ರಾಷ್ಟ್ರಗಳ ಪತ್ರಕರ್ತರು, ಪ್ರತಿಪಕ್ಷ ನೇತಾರರು, ಕೆಲ ಸಚಿವರ ಫೋನ್ ಮಾಹಿತಿ ಒಳಗೊಂಡ ದಾಖಲೆ ಬಿಡುಗಡೆ ಮಾಡಿವೆ. ಇವರ ಪ್ರತಿಪಾದನೆ ಪ್ರಕಾರ ಈ ಸಂಖ್ಯೆಗಳೆಲ್ಲ ಇಸ್ರೇಲ್ ಮೂಲದ ಕಳ್ಳ ತಂತ್ರಾಂಶವೊಂದನ್ನು ಉಪಯೋಗಿಸಿಕೊಂಡು ಗುರಿ ಮಾಡಿದ್ದು.

ಇಸ್ರೇಲಿ ಕಂಪನಿಯಾದ ಎನ್‌ಎಸ್‌ಒ ಗ್ರೂಪ್‌ನ ಪೆಗಾಸಸ್ ಸ್ಪೈವೇರ್ ಭಾರತದಲ್ಲಿನ 300 ಕ್ಕೂ ಹೆಚ್ಚು  ಮೊಬೈಲ್ ಫೋನ್ ಸಂಖ್ಯೆಗಳನ್ನು ಗುರಿಯಾಗಿಸಿಕೊಂಡಿದೆ ಎಂಬುದು ಈ ತನಿಖಾ ಗುಂಪುಗಳ ಪ್ರತಿಪಾದನೆ. ಈ ಇಸ್ರೇಲಿ ಗುಂಪು ತನ್ನ ತಂತ್ರಾಂಶವನ್ನು ಕೇವಲ ಸರ್ಕಾರಗಳಿಗೆ ಮಾತ್ರ ಮಾರುತ್ತಾದ್ದರಿಂದ ಇದರ ಹಿಂದೆ ಭಾರತ ಸರ್ಕಾರವೇ ಇದೆ ಎಂಬುದು ಈ ತನಿಖಾ ಗುಂಪುಗಳ ಪರೋಕ್ಷ ಪ್ರತಿಪಾದನೆ.

ಆದರೆ, ಇವತ್ತು ಈ ತನಿಖಾ ಸಂಸ್ಥೆಗಳು ಎಕ್ಸೆಲ್ ಶೀಟ್ ನಲ್ಲಿ ಹರವಿಟ್ಟಿರುವ ಮಾಹಿತಿಗಳನ್ನು ಪೆಗಾಸಸ್ ಸ್ಪೈವೇರ್ ಮೂಲಕವೇ ಪಡೆಯಲಾಗಿತ್ತು ಎಂಬುದಕ್ಕೆ ಆಧಾರವೇನು ಎಂಬ ಪ್ರಶ್ನೆಗೆ ಈ ತನಿಖಾ ವರದಿ ಪ್ರಸ್ತುತಪಡಿಸುತ್ತಿರುವ ಗುಂಪುಗಳ ಬಳಿ ಯಾವ ಉತ್ತರವೂ ಇಲ್ಲ. 

ಅಲ್ಲದೇ, ಭಾರತ ಮಾತ್ರವಲ್ಲದೇ ಹಲವು ರಾಷ್ಟ್ರಗಳು ಈ ಪ್ರಕರಣದಲ್ಲಿರುವುದರಿಂದ ನಿಜಕ್ಕೂ ಯಾರು ಯಾರನ್ನು ಗುರಿಯಾಗಿಸುವುದಕ್ಕೆ ಇದನ್ನು ಬಳಸಿಕೊಂಡಿದ್ದರೆಂಬ ಬಗ್ಗೆಯೂ ಈ ತನಿಖಾ ಗುಂಪು ಸ್ಪಷ್ಟ ಉತ್ತರ ಕೊಡುವ ಸ್ಥಿತಿಯಲ್ಲಿಲ್ಲ. 

2018 ಮತ್ತು 2019ರ ನಡುವೆ ಪ್ರಧಾನಿ ನರೇಂದ್ರ ಮೋದಿ  ಸರ್ಕಾರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಇಬ್ಬರು ಮಂತ್ರಿಗಳು, ಮೂವರು ವಿರೋಧ ಪಕ್ಷದ ನಾಯಕರು, ಹಲವಾರು ಪತ್ರಕರ್ತರು ಮತ್ತು ವ್ಯಾಪಾರಸ್ಥರು ಸೇರಿದಂತೆ ಹಲವರ ಮಾಹಿತಿಯನ್ನು ಈ ಸ್ಪೈವೇರ್ ಉಪಯೋಗಿಸಿ ನಿಗಾ ಇಡಲಾಗಿತ್ತು ಎಂಬುದು ತನಿಖಾ ವರದಿಯ ಒಟ್ಟಾರೆ ಹೂರಣ.

ಸರ್ಕಾರ ಅದಾಗಲೇ ಈ ಆರೋಪಗಳಿಗೆ ಪ್ರತಿಕ್ರಿಯಿಸಿದ್ದು, “ಇದು ಕೇವಲ ಕಲ್ಪನೆ ಮತ್ತು ಪೂರ್ವನಿರ್ಧರಿತ ಅಭಿಪ್ರಾಯಗಳನ್ನು ನಿರೂಪಿಸುವ ಪ್ರಯತ್ನವಾಗಿದೆ. ಈ ಆರೋಪಗಳಿಗೆ ಪೂರಕವಾಗಿ ಯಾವ ತಥ್ಯವನ್ನೂ ವರದಿ ನೀಡುತ್ತಿಲ್ಲ” ಎಂದು ಹೇಳಿದೆ.

ಇನ್ನು, ಇಸ್ರೇಲಿ ಕಂಪನಿ ಸಹ ಈ ಆರೋಪಗಳನ್ನು ನಿರಾಕರಿಸಿದ್ದು, “ಹೀಗೆ ಸೋರಿಕೆಯಾಗಿರುವ ಮಾಹಿತಿಗಳು ಪೆಗಾಸಸ್ ಸ್ಪೈವೇರ್ ಬಳಸಿಕೊಂಡು ಮಾಡಿದ್ದು ಅಂತ ಹೇಗೆ ಹೇಳುತ್ತೀರಿ? ಎಚ್ ಎಲ್ ಆರ್ ಲುಕ್ ಅಪ್ ಸರ್ವೀಸ್ ಇತ್ಯಾದಿಗಳ ಮೂಲಕ ಬೇಕಾದವರ ಫೋನ್ ನಂಬರ್ ಪಡೆಯಬಹುದಾಗಿದೆ. ಆ ಫೋನ್ ನಂಬರುಗಳನ್ನು ಇಟ್ಟುಕೊಂಡು ಇವೆಲ್ಲ ಪೆಗಾಸಸ್ ಸ್ಪೈವೇರ್ ಗುರಿಯಾಗಿದ್ದವು ಎಂದು ಹೇಳಿದರೆ ಅದಕ್ಕೆ ಆಧಾರವೇನಿದೆ” ಎಂದು ತನ್ನ ಪ್ರತಿವಾದವನ್ನಿಟ್ಟಿದೆ.

ಗಮನಿಸಬೇಕಾದ ಸಂಗತಿ ಎಂದರೆ ಜಾಗತಿಕವಾಗಿ ಸೋರಿಕೆಯಾಗಿರುವ 50,000 ಫೋನ್ ನಂಬರುಗಳನ್ನು ವಿವಿಧ ಮಾಧ್ಯಮಗಳಿಗೆ ಒದಗಿಸಿರುವುದು ಆಮ್ನೆಸ್ಟಿ ಇಂಟರ್ನ್ಯಾಷನಲ್. ಈ ತನಿಖಾ ವರದಿಗೆ ಭಾರತದಲ್ಲಿ ಪಾಲುದಾರನಾಗಿರುವುದು ದ ವೈರ್ ಸುದ್ದಿತಾಣ. ಮೋದಿ ಸರ್ಕಾರವನ್ನು ಏನಕೇನ ವಿರೋಧಿಸಿಕೊಂಡುಬಂದಿರುವ, ಮಾನವ ಹಕ್ಕುಗಳ ಹೆಸರಲ್ಲಿ ಪ್ರತ್ಯೇಕತಾವಾದವನ್ನು ಬೆಂಬಲಿಸಿಕೊಂಡಿರುವ ಇವುಗಳ ವಿಶ್ವಾಸಾರ್ಹತೆ ಮೊದಲಿನಿಂದಲೂ ಪ್ರಶ್ನಾರ್ಹ. 

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss