ಆರ್​ಆರ್​ಆರ್​’ಸೂಪರ್​ ಹಿಟ್ ಆದ ಬಳಿಕ ನಟ ರಾಮ್ ಚರಣ್​ ವರ್ತನೆಯಲ್ಲಿ ಬದಲಾವಣೆ ಆಗಿದೆಯಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

‘ಆರ್​ಆರ್​ಆರ್​’ ಸಿನಿಮಾ ಸೂಪರ್​ ಹಿಟ್​ ಆದ ಬಳಿಕ ಟಾಲಿವುಡ್ ನಟ ರಾಮ್​ ಚರಣ್​ (Ram Charan) ಅವರ ಜನಪ್ರಿಯತೆ ಹೆಚ್ಚಿದ್ದು, ಈಗ ಅವರು ಅಮೆರಿಕದಲ್ಲಿದ್ದಾರೆ. ಲಾಸ್​ ಏಂಜಲಿಸ್​ನ ಡಾಲ್ಬಿ ಥಿಯೇಟರ್​ನಲ್ಲಿ ನಡೆಯಲಿರುವ ಆಸ್ಕರ್​ ಪ್ರಶಸ್ತಿ (Oscar Awards) ಪ್ರದಾನ ಸಮಾರಂಭದಲ್ಲಿ ಭಾಗವಹಿಸಲು ಅವರು ಅಲ್ಲಿಗೆ ತೆರಳಿದ್ದಾರೆ.

ಇದರ ನಡುವೆ ರಾಮ್ ಚರಣ್​ ಅವರ ವರ್ತನೆಯಲ್ಲಿ ಬದಲಾವಣೆ ಆಗಿದೆಯಾ? ಎಂಬ ಪ್ರಶ್ನೆ ಎಲ್ಲರಲ್ಲೂ ಕಾಡಿದೆ . ಈ ಬಗ್ಗೆ ಬಾಲಿವುಡ್​ ನಟಿ ಕಿಯಾರಾ ಅಡ್ವಾಣಿ (Kiara Advani) ಅವರು ಮಾತನಾಡಿದ್ದಾರೆ.

2019ರಲ್ಲಿ ತೆರೆಕಂಡ ತೆಲುಗಿನ ‘ವಿದೇಯ ವಿನಯ ರಾಮ’ ಸಿನಿಮಾದಲ್ಲಿ ರಾಮ್​ ಚರಣ್​ ಮತ್ತು ಕಿಯಾರಾ ಅಡ್ವಾಣಿ ಅವರು ಜೊತೆಯಾಗಿ ನಟಿಸಿದ್ದರು. ಹಾಗಾಗಿ ಇಬ್ಬರ ನಡುವೆ ಫ್ರೆಂಡ್​ಶಿಪ್​ ಇದೆ. ಈಗ ಅವರಿಬ್ಬರು ಮತ್ತೊಂದು ಹೊಸ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾಗೆ ತಾತ್ಕಾಲಿಕವಾಗಿ ‘ಆರ್​ಸಿ 15’ ಎಂದು ಹೆಸರು ಇಡಲಾಗಿದೆ.

ಇತ್ತ ‘ಆರ್​ಆರ್​ಆರ್​’ ಸಿನಿಮಾ ಜಾಗತಿಕ ಮಟ್ಟದಲ್ಲಿ ಸದ್ದು ಮಾಡಿದ ಬಳಿಕ ‘ಆರ್​ಸಿ 15’ ಸಿನಿಮಾದ ಕೆಲಸಗಳಲ್ಲಿ ರಾಮ್​ ಚರಣ್​ ತೊಡಗಿಕೊಂಡರು. ಈ ವೇಳೆ ಶೂಟಿಂಗ್​ಗೆ ಬಂದ ಅವರ ವರ್ತನೆಯಲ್ಲಿ ಯಾವುದೇ ಬದಲಾವಣೆ ಕಾಣಲಿಲ್ಲ ಎಂದು ಕಿಯಾರಾ ಅಡ್ವಾಣಿ ಹೇಳಿದ್ದಾರೆ.

‘ರಾಮ್​ ಚರಣ್​ ಜೊತೆ ಕೆಲಸ ಮಾಡುವುದು ಯಾವಾಗಲೂ ಖುಷಿ ನೀಡುತ್ತದೆ. ಅವರು ತುಂಬ ಒಳ್ಳೆಯ ನಟ ಮತ್ತು ಡ್ಯಾನ್ಸರ್​. ಆರ್​ಆರ್​ಆರ್​ ಚಿತ್ರ ಸೂಪರ್​ ಹಿಟ್​ ಆದ ನಂತರ ನಾನು ಅವರನ್ನು ಭೇಟಿ ಆದೆ. ಈಗಲೂ ಅವರ ವರ್ತನೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ತುಂಬ ವಿನಯವಂತಿಕೆ ಇರುವಂತಹ ವ್ಯಕ್ತಿ ಅವರು. ಆ ಕಾರಣದಿಂದಲೇ ಅವರು ಸ್ಟಾರ್​ ಆಗಿದ್ದಾರೆ’ ಎಂದು ಕಿಯಾರಾ ಅಡ್ವಾಣಿ ಹೇಳಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!