Thursday, July 7, 2022

Latest Posts

ಫೋನ್ ಪೇ ನಲ್ಲಿ ಒಂದೇ ಖಾತೆಯಿಂದ Transaction ಮಾಡಬೇಕಾ? ಹಾಗಿದ್ದರೆ ಈ ಕ್ರಮ ಅನುಸರಿಸಿ

ಇತ್ತೀಚಿಗೆ ನಾವು ಎಲ್ಲಾ ವ್ಯವಹಾರಗಳನ್ನು ಆನ್ ಲೈನ್ ನಲ್ಲೇ ಮಾಡುತ್ತೇವೆ. ಆದರೆ ಕೆಲವೊಮ್ಮೆ ನಮ್ಮ ಮೊಬೈಲ್ ನಂಬರ್ ಗೆ ಲಿಂಕ್ ಆಗಿರುವ ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆಗಳಿದ್ದರೆ ಟ್ರ್ಯಾನ್ಸ್ಯಾಕ್ಷನ್ ಸಮಸ್ಯೆ ಕಾಡುತ್ತದೆ.

ಅಂದರೆ ಬೇರೆಯವರಿಗೆ ನಾವು ವ್ಯವಹರಿಸುವ ಬ್ಯಾಂಕ್ ಖಾತೆ ಲಿಂಕ್ ಆಗಿಲ್ಲ ಎಂದು ತೋರಿಸುತ್ತದೆ. ಇದರಿಂದ ನಮ್ಮ ಖಾತೆಗೆ ಯಾರಿಂದಲೂ ಹಣ ಬರೋದಿಲ್ಲ ಅಲ್ವಾ? ಹಾಗಿದ್ದರೆ ಈ ಸಮಸ್ಯೆಯನ್ನು ಈಸಿಯಾಗಿ ಸರಿಮಾಡಿ

  • ಮೊದಲಿಗೆ ಫೋನ್ ಪೇ ಓಪನ್ ಮಾಡಿಕೊಳ್ಳಿ.
  • ಅಲ್ಲಿ ಕಾಣುವ My Money ಆಪ್ಷನ್ ಆಯ್ಕೆ ಮಾಡಿಕೊಳ್ಳಬೇಕು.
  • ನಂತರ ಒಳಗೆ Payments ಕಾಲಮ್ ಅಡಿಯಲ್ಲಿರುವ Bank Accounts ಅನ್ನು ಸೆಲೆಕ್ಟ್ ಮಾಡಿ.
  • ಇಲ್ಲಿ ನಿಮ್ಮ ಮೊಬೈಲ್ ನಂಬರ್ ನೊಂದಿಗೆ ಲಿಂಕ್ ಆಗಿರುವ ಎಲ್ಲಾ ಬ್ಯಾಂಕ್ ಖಾತೆಗಳು ಸಿಗುತ್ತದೆ.
  • ಇದರಲ್ಲಿ ನಿಮ್ಮ ವ್ಯವಹಾರಕ್ಕೆ ಬೇಕಿರುವ ಬ್ಯಾಂಕ್ ಖಾತೆಯ ಅಡಿಯಲ್ಲಿ ಸಿಗುವ Set As Primary ಆಪ್ಷನ್ ಅನ್ನು ಆಯ್ಕೆ ಮಾಡಿದರೆ ಆಯ್ತು.

ಇದರಿಂದ ನಿಮ್ಮ ಎಲ್ಲಾ ವ್ಯವಹಾರಗಳು ಇದೇ ಖಾತೆಯಿಂದ ಆಗುತ್ತದೆ. ಬೇಕಿದ್ದಾರೆ ಖಾತೆಗಳ ಆಯ್ಕೆಯನ್ನು ಬದಲಾಯಿಸಿಕೊಳ್ಳಿ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss