ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, July 31, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಊಟದ ಜೊತೆಗೆ ಅಡ್ವೆಂಚರ್, 160 ಅಡಿ ಮೇಲೆ ಕುಳಿತು ತಿನ್ನೋ ಸೌಭಾಗ್ಯ ಯಾರಿಗುಂಟು ಯಾರಿಗಿಲ್ಲ?

ಮೇಘನಾ ಶೆಟ್ಟಿ, ಶಿವಮೊಗ್ಗ

ಆಕಾಶದಲ್ಲಿ ಹಾರಾಡ್ತಾ ಊಟ ಮಾಡೋ ಹಾಗಿದ್ದಿದ್ರೆ?
‘ಭೂಮಿ ಮೇಲೆ ಒಳ್ಳೆ ಆಹಾರ ತಿಂದು ಬದುಕಿದ್ರೆ ಸಾಕಾಗಿದೆ ಇನ್ನು ಆಕಾಶದಲ್ಲಿ ತಿನ್ಬೇಕಂತೆ’ ಅಂತ ನಮ್ಮನ್ನು ಬೈಕೊಂಡ್ರಾ?
ಇನ್ನು ಸ್ವಲ್ಪ ಜನಕ್ಕೆ ಏರೋಪ್ಲೇನ್‌ನಲ್ಲಿ ಸಿಗೋ ಆಹಾರದ ಬಗ್ಗೆ ಹೇಳೋಕೆ ಈ ರೀತಿ ಇಂಟ್ರೋ ಕೊಡ್ತಿದ್ದಾರಾ ಅನಿಸಿರುತ್ತದೆ. ಆದರೆ ಅದು ಕೂಡ ತಪ್ಪು..
ನಾವು ಹೇಳೋಕೆ ಹೊರಟಿರೋದು ಸ್ಕೈ ಹೋಟೆಲ್ ಬಗ್ಗೆ… ಹೋಟೆಲ್ ಹೆಸರು ಸ್ಕೈ ಅಲ್ಲ, ಅದಿರೋ ಜಾಗ ಸ್ಕೈ!
ಈ ಹೋಟೆಲ್ ಹೆಸರು ‘ಫ್ಲೈ ಡೈನಿಂಗ್’, ಈ ಹೋಟೆಲ್ ಇರೋದು ಬೇರೆ ಯಾವುದೋ ದೇಶದಲ್ಲಲ್ಲ, ನಮ್ಮ ಹೆಮ್ಮೆಯ ರಾಜಧಾನಿ ಬೆಂಗಳೂರಿನಲ್ಲಿ. ವಂಡರ್‌ಲಾದಲ್ಲಿ ಕಾಣುವ ಗೇಮ್ಸ್ ರೀತಿ ಕ್ಯಾಬಿನ್‌ನಲ್ಲಿ ನಮ್ಮನ್ನು ಕೂರಿಸಿ ಆಕಾಶ ಮುಟ್ಟಿಸುತ್ತಾರೆ. ಚಂದಾಮಾಮನನ್ನು ತೋರಿಸಿ ಊಟ ಮಾಡಿಸೋದಿಲ್ಲ, ಚಂದಾಮಾಮನ ಜೊತೆಯೇ ಊಟ ಮಾಡಬಹುದು!

Fly Dining, Nagawara, Bangalore | Zomatoಯಪ್ಪಾ, ಭಯ ಆಗುತ್ತೆ!
160 ಮೀಟರ್ ಎತ್ತರದಲ್ಲಿ ಊಟ ಮಾಡಬೇಕು ಅಂದ್ರೆ ಭಯ ಖಂಡಿತ ಆಗುತ್ತದೆ. ಆದರೆ ಅಡ್ವೆಂಚರ್ ಮಾಡೋ ಮನಸ್ಸಿದ್ರೆ ಇದಕ್ಕೆಲ್ಲಾ ಹೆದರಬೇಕಿಲ್ಲ. ಸೇಫ್ಟಿ ಮೆಶರ್‌ಗಳು ಖಂಡಿತಾ ಇವೆ.

Fly Dining Is Now In Bangalore, Restaurants In Bangalore - Tripotoಮೇಲೆ ಹೋಗೋದು ಹೇಗೆ?
ಇದು ತುಂಬಾನೇ ಸೇಫ್. ಚೇರ್‌ಗಳಲ್ಲಿ ನಿಮ್ಮನ್ನು ಕೂರಿಸಿ ತೋಳು ಹಾಗೂ ಸೊಂಟಕ್ಕೆ ಬೆಲ್ಟ್ ಹಾಕಲಾಗುತ್ತದೆ. 160 ಅಡಿ ಮೇಲೆ ಹೋದ ನಂತರ ನೀವು ಚೇರ್‌ನಲ್ಲೇ ಸ್ವಲ್ಪ ಬಗ್ಗೆ ಆಕಾಶ ನೋಡಿ ಖುಷಿಪಡಬಹುದು. ಬೆಳಗ್ಗೆಗಿಂತ ರಾತ್ರಿ ‘ಫ್ಲೈ ಡೈನಿಂಗ್’ ಮಾಡೋದು ಚೆನ್ನಾಗಿರುತ್ತದೆ.

Fly Dining, Bangalore | Cost, Attractions, Menu | Holidifyಮೇಲಿಂದ ಊಟ ಬಿದ್ಬಿಟ್ರೆ?
ಅಷ್ಟು ಮೇಲೆ ಊಟ ಮಾಡ್ತೀವಿ ಅಂದ್ರೆ ಇಂಥಾ ಸಣ್ಣ ಪುಟ್ಟ ಡೌಟ್ ಬಂದೇ ಬರುತ್ತದೆ. ಇನ್ನು ತಟ್ಟೆ ಲೋಟ ಜಾರಿ ಬೀಳೋದಿಲ್ವಾ ಎಂದೂ ಅನಿಸುತ್ತದೆ. ಆದರೆ ಮ್ಯಾಗ್ನೆಟಿಕ್ ಮ್ಯಾಟ್ ಅಳವಿಡಿಸಿರುವುದರಿಂದ ಊಟ ತಿಂಡಿ ಜಾರೋದಿಲ್ಲ. ಕೆಳಗೆ ಅಕಸ್ಮಾತ್ ಆಗಿ ಬಿದ್ದರೂ ಯಾರ ತಲೆ ಮೇಲೂ ಬೀಳೋದಿಲ್ಲ. ಕೆಳಗೂ ಕಾರ್ಪೆಟ್ ಹಾಕಲಾಗಿದೆ.

The Weekend Leader - Story of Fly Dining, Bengaluru, Interview with  Jumpking India Founder Pankaj Dhingra andಇದು ಹೋಟೆಲ್ ಅಡ್ವೆಂಚರ್
‘ನೀವು ಕೇವಲ ಡೈನ್‌ಇನ್ ಇಷ್ಟಪಡೋದಾದರೆ ನೂರಾರು ರೆಸ್ಟೋರೆಂಟ್‌ಗಳಿವೆ. ಆದರೆ ಡೈನಿಂಗ್ ಹಾಗೂ ಅಡ್ವೆಂಚರ್ ಎರಡನ್ನೂ ಮಾಡುವ ಇಷ್ಟ ಇದ್ದರೆ ಇಲ್ಲಿಗೆ ಬನ್ನಿ’ ಎಂದು ಫ್ಲೈ ಡೈನಿಂಗ್‌ನ ಸಿಇಒ ನಿವೇದಿತಾ ಗುಪ್ತಾ ಹೇಳುತ್ತಾರೆ.

Flying Dining Restaurant in Noida at Garden Galleria Mall | WhatsHot Delhi  NCRಬರ್ಡ್ ಐ ವ್ಯೂ
’22 ಜನ ಕೂರಬಹುದಾದ ಟೇಬಲ್‌ನಲ್ಲಿ ಕುಳಿತಿದ್ದೀರಾ? ರಾತ್ರಿ ಸಿಟಿಯ ಅಷ್ಟೂ ಲೈಟ್‌ಗಳು ನಿಮಗೆ ಕಾಣುತ್ತವೆ. ಪಕ್ಕದಲ್ಲಿಯೇ ಲೇಕ್ ವ್ಯೂ ಇದೆ. ಬರ್ಡ್ ಐ ವ್ಯೂನಲ್ಲಿ ಜಗತ್ತನ್ನು ನೋಡುತ್ತೀರಿ. ಜೊತೆಗೆ ಟೇಸ್ಟಿ ಆಹಾರ ಕೂಡ ಸಿಗಲಿದೆ’ ಎಂದು ಫ್ಲೈ ಡೈನ್ ಇನ್‌ನ ಎಂ.ಡಿ ಪಂಕಜ್ ಧಿಂಗ್ರಾ ಹೇಳುತ್ತಾರೆ.

Fly Dining (Closed Down), Nagawara, Bangalore - North Indian, Continental  Cuisine Restaurant - Justdialಆರ್ಡರ್ ಮಾಡಿದ ಊಟ ಎಲ್ಲಿಂದ ಬರತ್ತೆ?
ಮೆನು ಕಾರ್ಡ್ ನೀಡುವ ಮುನ್ನವೇ ಟೇಬಲ್‌ನಲ್ಲಿ ಎಲ್ಲವನ್ನೂ ಇಟ್ಟುಕೊಂಡಿರುತ್ತಾರೆ. ಬೇಸಿಕ್ ಬಿಸಿ ಮಾಡುವುದು, ಗಾರ್ನಿಶ್ ಮಾಡುವ ಕೆಲಸ ಅಷ್ಟೇ ಬಾಕಿ ಇರುತ್ತದೆ. ಕೇಳಿದ ಆಹಾರವನ್ನು ಅಲ್ಲೇ ಇನ್ನಷ್ಟು ಬಿಸಿ ಮಾಡಿ ನೀಡುತ್ತಾರೆ.

Fly Dining In Bengaluru Will Now Let You Eat Up In The Air In 2021!ಮೇಲೆ ಹೋದಷ್ಟು ಆಹಾರ ತಣ್ಣಗಾಗತ್ತೆ!
‘ಸಿಕ್ಕಾಪಟ್ಟೆ ಹೈಜಿನ್ ಮೇಂಟೇನ್ ಮಾಡುತ್ತೇವೆ. ಜೊತೆಗೆ ಎತ್ತರಕ್ಕೆ ಹೋದಷ್ಟು ಆಹಾರ ಬೇಗ ತಣ್ಣಗಾಗುತ್ತದೆ. ಈ ಕ್ಯಾಬಿನ್‌ನಲ್ಲಿ ಬೆಂಕಿಗೆ ಅವಕಾಶ ಇಲ್ಲ. ಕರೆಂಟ್ ಸ್ಟೋವ್ ಬಳಸುತ್ತೇವೆ. ಅಷ್ಟು ಇಷ್ಟಪಟ್ಟು ಫ್ಲೈ ಡೈನಿಂಗ್‌ಗೆ ಜನ ಬಂದಾಗ ಅವರಿಗೆ ಒಳ್ಳೆ ಆಹಾರ ನೀಡೋದು ನಮ್ಮ ಜವಾಬ್ದಾರಿ’ ಎಂದು ಹೆಡ್‌ಶೆಫ್ ಅಮನ್‌ದೀಪ್ ಹೇಳುತ್ತಾರೆ.

You Can Now Dine 120 Feet Up In The Air! | WhatsHot Bangaloreಪ್ರಪೋಸ್ ಮಾಡಬಹುದು
ಇಲ್ಲಿಗೆ ಭೇಟಿ ಕೊಟ್ಟ ಎಲ್ಲರೂ ನಮ್ಮ ಬಕೆಟ್ ಲಿಸ್ಟ್‌ನಲ್ಲಿ ಇಲ್ಲಿಗೆ ಒಮ್ಮೆಯಾದರೂ ಬರಬೇಕು ಅನ್ನೋ ಆಸೆ ಇತ್ತು ಎಂದು ಹೇಳಿದ್ದಾರೆ. ತಮ್ಮ ಎಕ್ಸಪೀರಿಯನ್ಸ್ ಬಗ್ಗೆ ಖುಷಿ ಹಂಚಿಕೊಂಡಿದ್ದಾರೆ. ಎಷ್ಟೋ ಮಂದಿ ಪ್ರಪೋಸ್ ಮಾಡೋದಕ್ಕೆ ಈ ಜಾಗ ಬೆಸ್ಟ್ ಎಂದಿದ್ದಾರೆ.

The Weekend Leader - Story of Fly Dining, Bengaluru, Interview with  Jumpking India Founder Pankaj Dhingra and CEO Neha Gupta
ಜೀವನದಲ್ಲಿ ಎಲ್ಲಾ ರೀತಿ ಅಡ್ವೆಂಚರ್‌ಗಳನ್ನು ಒಮ್ಮೆ ಟ್ರೈ ಮಾಡಬೇಕು. ಆಕಾಶದಲ್ಲೇ ತಿನ್ನೋದಾಗ್ಲಿ, ಪಾತಾಳದಲ್ಲೇ ತಿನ್ನೋದಾಗ್ಲಿ ಒಮ್ಮೆ ಟ್ರೈ ಮಾಡೋಕೆ ಏನು? ಒಂದು ಬಾರಿಗೆ ಬರೀ 22  ಜನ ಅಷ್ಟೇ ಕೂರೋ ಟೇಬಲ್ ಇದಾಗಿದ್ರೂ ದಿನಕ್ಕೆ ಒಂದು ಬಾರಿಯೂ ಒಂದು ಸೀಟ್ ಖಾಲಿ ಇದ್ದು ಕ್ಯಾಬಿನ್ ಮೇಲಕ್ಕೇ ಹೋಗಿಲ್ಲ. ಈ ರೀತಿ ಡಿಫ್ರೆಂಟ್ ಐಡಿಯಾ ಟ್ರೈ ಮಾಡೋದಕ್ಕೂ ತಲೆ ಬೇಕು.. ಏನಂತೀರಾ?

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss