Saturday, July 2, 2022

Latest Posts

ಮುದ್ದಿಗೆ ನಾಯಿ ಸಾಕೋದು ನೋಡಿರ್ತೀರ, ಆದರೆ ಜೀವನವನ್ನೇ ನಾಯಿಗಾಗಿ ಮೀಸಲಿಟ್ಟವರನ್ನ ನೋಡಿದ್ದೀರಾ?

  • ಹಿತೈಷಿ

ಮನೆಯಲ್ಲಿ ಜನರಿಲ್ಲದಿದ್ದರೂ ಪರವಾಗಿಲ್ಲ ಒಂದು ಮುದ್ದಿನ ನಾಯಿಮರಿ ಇರಲೇಬೇಕು. ಯಾರು ನಿಮ್ಮ ಮಾತನ್ನು ಕೇಳದೇ ಇದ್ರೂ ಈ ನಾಯಿಮರಿಗಳು ನೀವು ಹೇಳಿದ್ದನ್ನು ಕೇಳುತ್ತವೆ. ನಿಮ್ಮ ನೋವಿಗೆ ಹೂಗುಟ್ಟುತ್ತವೆ. ನಾಯಿಗಳನ್ನು ನಾಯಿ ಎಂದು ಕರೆದರೂ ಸಿಟ್ಟು ಬರುತ್ತದೆ. ಅದಕ್ಕಿರುವ ಪ್ರೀತಿಯ ಹೆಸರನ್ನೇ ಕರೆಯಬೇಕು. ಮನೆಯವರಂತೆ ಅದಕ್ಕೊಂದು ಸಪರೇಟ್ ಹಾಸಿಗೆ, ಹೊದಿಕೆ, ಊಟ, ಶಾಂಪೂ ಹೀಗೆ.. ಒಂದು ನಾಯಿಯನ್ನು ಮುದ್ದಾಗಿ ಸಾಕುತ್ತೀರಿ. ಆದರೆ ಇದೇ ರೀತಿ ಮೂರ‍್ನಾಲ್ಕು ನಾಯಿ ಆದರೆ? ಹತ್ತು ನಾಯಿ ಇದ್ದರೆ? ನೂರಾರು ನಾಯಿ ಆದರೆ?

ಒಬ್ಬ ವ್ಯಕ್ತಿ ತನ್ನ ಇಡೀ ಜೀವನವನ್ನು ನಾಯಿಗಳಿಗೆ ಮೀಸಲಿಡುತ್ತಾರೆ ಅಂದ್ರೆ ನಂಬ್ತೀರಾ? ನಂಬಲೇಬೇಕು..

ಇವರ ಹೆಸರು ದಿವ್ಯಾ ಪಾರ್ಥಸಾರಥಿ. ಇವರು ಹರಿಯಾಣದ ಗುರುಗ್ರಾಮದವರು. ಈಕೆ ಶ್ವಾನಗಳ ಆರೈಕೆಗಾಗಿ ಒಂದು ಮನೆಯನ್ನೇ ಪ್ರಾರಂಭಿಸಿದ್ದಾರೆ. ಇಲ್ಲಿ ವಯಸ್ಸಾದ ಶ್ವಾನಗಳು, ಅಂಗವಿಕಲ ಶ್ವಾನಗಳು ಸೇರಿದಂತೆ ಕರುಗಳು, ಮೇಕೆಗಳನ್ನೂ ಆರೈಕೆ ಮಾಡುತ್ತಾರೆ.

Tails Of Compassion Trust - Helping Paws By Tendering Love And Care

ಪ್ರಾರಂಭವಾದದ್ದು ಹೇಗೆ? ಚಿಕ್ಕ ವಯಸ್ಸಿನಿಂದಲೂ ಶ್ವಾನಗಳ ಮೇಲೆ ಹೆಚ್ಚು ಒಲವಿದ್ದ ದಿವ್ಯಾ ಅವರಿಗೆ ಅವುಗಳಿಗಾಗಿ ಒಂದು ನೆಲೆ ರೂಪಿಸಬೇಕು ಎನ್ನುವ ಕನಸು ಕಂಡಿದ್ದರು. ಅಂತೆಯೇ 2017ರಲ್ಲಿ ಟೇಲ್ಸ್ ಆಫ್ ಕಂಪಾಷನ್(ಟಿಒಸಿ) ಅನ್ನುವ ಶೀರ್ಷಿಕೆ ಅಡಿಯಲ್ಲಿ ಹತ್ತಾರು ಶ್ವಾನಗಳಿಗೆ ಆಶ್ರಯ ನೀಡುತ್ತಿದ್ದಾರೆ.

Join our journey to help the senior, special-needs & injured dogs at Tails of Compassion

ಮೂಕ ಪ್ರಾಣಿಗಳಿಗೆ ಪ್ರೀತಿ: ಯಾವುದೇ ಜೀವಿಗಾದರೂ ಕಷ್ಟದ ಸಮಯದಲ್ಲಿ ಪ್ರೀತಿ ತೋರುವ ಒಬ್ಬ ವ್ಯಕ್ತಿ ಜೊತೆಗಿರಲು ಬಯಸುತ್ತಾರೆ. ಹಾಗೆಯೇ ಶ್ವಾನಗಳಿಗೂ ವಯಸ್ಸಾದಂತೆ ಅನೇಕ ಕಾಯಿಲೆಗಳು ಬೆನ್ನಟ್ಟಿ ಬರುತ್ತವೆ. ಅಂತಹ ಜೀವಿಗಳನ್ನು ಆರೈಕೆ ಮಾಡುವುದು ಈ ಸಂಸ್ಥೆಯ ಉದ್ದೇಶ.

ಯಾವ ರೀತಿ ಶ್ವಾನಗಳಿವೆ? ‘Tails of Compassion’ ನಲ್ಲಿ ಅಂಗವಿಕಲ ಶ್ವಾನಗಳು, ಕುರುಡು ಶ್ವಾನಗಳು, ಪ್ಯರಾಲಿಸಸ್ ಆಗಿರುವ ಶ್ವಾನಗಳಿಗೆ ಆಶ್ರಯ ನೀಡಲಾಗುತ್ತಿದೆ. ಇವುಗಳಿಗೆ ಸೂಕ್ತ ವೈದ್ಯರಿಂದ ಚಿಕಿತ್ಸೆ ಹಾಗೂ ಇವುಗಳ ಬೆಳವಣಿಗೆಗೆ ಅಗತ್ಯ ವ್ಯವಸ್ಥೆಗಳನ್ನು ಮಾಡಲಾಗಿದೆ.

Tails Of Compassion: Providing Love And Shelter To Animals In Need

ಟಪ್ಪಿ, ಕೇವಲ 2 ತಿಂಗಳ ಮರಿಯಾಗಿದ್ದಾಗ ರಸ್ತೆಯಲ್ಲಿ ಅಪಘಾತಕ್ಕೊಳಗಾಗಿತ್ತು. ಆಗ ಅವನ ಸ್ಪೈನ್ ಮುರಿದು ಹೋಗಿತ್ತು ಜೊತೆಗೆ ಪ್ಯರಾಲಿಸ್ ಅಂಟಿಕೊಂಡಿತ್ತು. ಅವನನ್ನು ನಮ್ಮ ಟಿಒಸಿಗೆ ಕರೆತಂದು ಆರೈಕೆ ಮಾಡಲಾಗುತ್ತಿದೆ. ಹೀಗೆ ಅನೇಕ ಶ್ವಾನಗಳಿಗೆ ನೆರವಾಗುವ ದೃಷ್ಟಿ ಹೊಂದಿದ್ದೇವೆ ಎನ್ನುತ್ತಾರೆ ದಿವ್ಯಾ.

ಜೀವನ ಹೇಗೆ? ಶ್ವಾನಗಳ ಆರೈಕೆಗಾಗಿ ದಿವ್ಯಾ ತಮ್ಮ ಇಡೀ ಜೀವನವನ್ನೇ ಮುಡಿಪಾಗಿಟ್ಟಿದ್ದಾರಂತೆ. ಹೌದು… ಎಲ್ಲರೂ ದುಡ್ಡು ಸಂಪಾದಿಸುವ ಬರದಲ್ಲಿ ಮಾನವೀಯತೆ ಕಳೆದುಕೊಂಡಿದ್ದಾರೆ. ಆದರೆ ಈಕೆಗೆ ಟಿಒಸಿ ಪ್ರಾರಂಭಿಸುವುದೇ ತಮ್ಮ ಜೀವನದ ಕನಸ್ಸಾಗಿತ್ತು. ಇದನ್ನೇ ಅವರು ತಮ್ಮ ದುಡಿಮೆಯನ್ನಾಗಿಯೂ ಮಾಡಿಕೊಂಡಿದ್ದಾರೆ.

ಮುಂದಿನ ಜೀವನ ಹೇಗೆ? ಶ್ವಾನಗಳಿಗೆ ಸುರಕ್ಷಿತ ವಾತಾವರಣವನ್ನು ಒದಗಿಸುವ ಕನಸು ಹೊತ್ತಿದ್ದಾರೆ ದಿವ್ಯಾ. ಶ್ವಾನಗಳಿಗೆ ಉತ್ತಮ ಜೀವನ ಕೊಡುವ ನಿಟ್ಟಿನಲ್ಲಿ ಟಿಒಸಿ ತನ್ನ ಸೌಲಭ್ಯಗಳನ್ನು ಹೆಚ್ಚಿಸುವ ಕಡೆ ಗಮನ ಹರಿಸುತ್ತಿದೆ. ವಯಸ್ಸಾದ ನಾಯಿಗಳಿಗೆ ಮತ್ತಷ್ಟು ಉತ್ತಮ ವೈದ್ಯಕೀಯ ಚಿಕಿತ್ಸೆ, ಮನೆಯಂತಹ ವಾತಾವರಣ ನೀಡಲು ಶ್ರಮಿಸಲಾಗುತ್ತಿದೆ.

No One Wanted This Disabled Dog Until Animal Rescuer Welcomes Him Home! – InspireMore

ದುಡ್ಡು ಹೇಗೆ? 3 ವರ್ಷಗಳ ಪ್ರಯತ್ನದ ಬಳಿಕ ಇದೀಗ ಟಿಸಿಒ ನಡೆಸಲು ಆರ್ಥಿಕ ಸಮಸ್ಯೆ ಎದುರಾಗಿದೆ. ದಾನಿಗಳು, ಸರ್ಕಾರ ನೀಡುವ ದೇಣಿಗೆಯನ್ನೇ ನಂಬಿಕೊಳ್ಳಲಾಗಿದೆ. ಇಲ್ಲವಾದರೇ ಈ ಕನಸು ಕನಸಾಗಿಯೇ ಉಳಿದು ಹೋಗುತ್ತದೆ. ದೊಡ್ಡ ಕನಸ್ಸಿನ ಗುರಿ ಮುಟ್ಟಲು ಹಣ ಬೇಕಾಗಿದೆ ಎನ್ನುತ್ತಾರೆ ದಿವ್ಯಾ.

ಈಗಿನ ಕಾಲದಲ್ಲಿ ಹೆತ್ತ ಮಕ್ಕಳು ಇರುವ ಮನುಷ್ಯರಿಗೆ ನೂರಾರು ವೃದ್ಧಾಶ್ರಮಗಳನ್ನು ಕಟ್ಟುವ ಮೂಲಕ ದುಡ್ಡು ಮಾಡಿಕೊಳ್ಳುತ್ತಾರೆ. ಇಂತವರ ನಡುವೆ ನಿಸ್ವಾರ್ಥವಾಗಿ ಮೂಕ ಪ್ರಾಣಿಗಳ ಪೋಷಣೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿರುವವರಿಗೆ ನಮ್ಮದೊಂದು ಸಲಾಂ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss