Tuesday, July 5, 2022

Latest Posts

ನಿಜವಾಗಿಯೂ ಟೆಕ್ನಾಲಜಿ ನಮ್ಮನ್ನು ಆಳುತ್ತಿದ್ಯಾ? ಇದಕ್ಕೆ ಅಡಿಕ್ಟ್ ಆದವರಲ್ಲಿ ಈ ಸಮಸ್ಯೆ ಕಾಡುತ್ತೆ…

ಮಾನವನೇ ಟೆಕ್ನಾಲಜಿ ಪತ್ತೆ ಮಾಡಿರೋದು ಎಷ್ಟು ನಿಜವೋ, ನಾವು ಅದರ ಗುಲಾಮನಾಗಿ ಬದುಕುತ್ತಿರೋದು ಕೂಡ ಅಷ್ಟೇ ಸತ್ಯ ಅಲ್ವಾ. ಹುಟ್ಟಿದ ಮಗುವಿನಿಂದ ಹಿರಿಯ ಅಜ್ಜ-ಅಜ್ಜಿಯವರೆಗೂ ಈಗ ಮೊಬೈಲ್, ಲ್ಯಾಪ್ ಟಾಪ್ ಯೇ ಪ್ರಪಂಚ. ಆದರೆ ಈ ಟೆಕ್ನಾಲಜಿ ನಮ್ಮ ಮನಸ್ಸಿನ ಮೇಲೆ ಹೇಗೆಲ್ಲಾ ಪ್ರಭಾವ ಬೀರಿ ನಕಾರಾತ್ಮಕ ಚಿಂತನೆಗಳನ್ನು ಹೆಚ್ಚಿಸುತ್ತದೆ? ಜೊತೆಗೆ ನಮ್ಮ ಜೀವನದ ಕ್ರಮವನ್ನೇ ಹಾಳು ಮಾಡುತ್ತದೆ ಆಂತ ಗೊತ್ತಾ? ಇಲ್ಲಿದೆ ನೋಡಿ ಮಾಹಿತಿ…

ನಿದ್ರಾಹೀನತೆ: ಎಲ್ಲರಿಗೂ ಗೊತ್ತು, ಮೊಬೈಲ್, ಟಿವಿ, ಲ್ಯಾಪ್ ಟಾಪ್ ನೋಡುತ್ತಿರುವವರು ನಿದ್ದೆ ಮಾಡೋದೆ ಕಡಿಮೆ. ಇದರಿಂದ ನಿದ್ರಾಹೀನತೆ ಸಮಸ್ಯೆ ಕಾಡಲಿದ್ದು, ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ.

ಒಬ್ಬಂಟಿತನ: ಟೆಕ್ನಾಲಜಿಯೊಂದಿಗೆ ನಮ್ಮ ಸಂಬಂಧ ಹೆಚ್ಚು ಗಾಢವಾಗಿದ್ದರೆ, ನಾವು ಹೆಚ್ಚು ಒಬ್ಬಂಟಿಯಾಗಿ ಇರೋಕೆ ಇಷ್ಟ ಪಡುತ್ತೇವೆ. ನಮ್ಮ ಜನರೊಂದಿಗಿನ ಬಾಂಧವ್ಯ ಹಾಳಾಗುತ್ತದೆ.

ಡಿಸ್ಟ್ರಾಕ್ಟ್: ಎಲ್ಲಾ ಉತ್ತರಗಳು ನಮ್ಮ ಬೆರಳಂಚಿನಲ್ಲೇ ಇದ್ದು, ನಾವು ಯಾವುದನ್ನೂ ಗಮನವಿಟ್ಟು ಅಭ್ಯಾಸ ಮಾಡುವುದಿಲ್ಲ. ಬದಲಿಗೆ ಎಲ್ಲಾ ವಿಚಾರದಲ್ಲೂ ಡಿಸ್ಟ್ರಾಕ್ಷನ್ ಇದ್ದೇ ಇರುತ್ತದೆ.

ಕುತ್ತಿಗೆ ನೋವು: ಯಾವುದೇ ಟೆಕ್ ವಸ್ತುಗಳನ್ನು ಬಳಸುವುದರಿಂದ ನಮ್ಮ ಕುತ್ತಿಗೆ ಮೇಲೆ ಹೆಚ್ಚು ಪರಿಣಾಮ ಬೀರಲಿದೆ. ಅವುಗಳನ್ನು ಬಳಸುವ ರೀತಿ, ನಾವು ಕುಳಿತುಕೊಳ್ಳುವ ಪೋಸ್ಚರ್ ನ ಮೇಲೆ ಕೂಡ ಕೆಟ್ಟ ಪರಿಣಾಮ ಬೀರುತ್ತದೆ.

ಮೋಸ ಹೋಗುತ್ತೀರಿ: ಈ ಅಂತರ್ಜಾಲ ಹಾಗೂ ಸಾಮಾಜಿಕ ಜಾಲತಾಣಗಳು, ವೆಬ್ ಗಳ ಮೇಲಿನ ಅಪಾರವಾದ ನಂಬಿಕೆ ನಿಮ್ಮನ್ನು ಮೋಸ ಹೋಗುವಂತ ಮಾಡಲಿದೆ.

ಕುಟುಂಬ: ಟೆಕ್ನಾಲಜಿಯಿಂದ ಎಷ್ಟೋ ಸಲ ನಾವು ಮನೆಯಲ್ಲಿ ಜಗಳವಾಡಿರುತ್ತೇವೆ. ಇದರಿಂದ ಹೆಚ್ಚು ನಕಾರಾತ್ಮಕ ಸಂಗತಿಗಳೇ ಹೆಚ್ಚು. ಇದು ನಮ್ಮನ್ನು ನಮ್ಮ ಕುಟುಂಬದಿಂದ ದೂರ ಮಾಡುತ್ತದೆ.

ಮಕ್ಕಳ ಮೇಲೆ ಪರಿಣಾಮ: ಆಡುವ ಮಕ್ಕಳಿಗೆ ಟೆಕ್ನಾಲಜಿ ಕೊಟ್ಟು ಅವರ ಬಾಲ್ಯವನ್ನು ಕಸಿದುಕೊಂಡಂತೆ ಆಗುತ್ತದೆ. ಅಷ್ಟೆ ಅಲ್ಲಾ ಮಕ್ಕಳು ಸಣ್ಣ ವಯಸ್ಸಿನಲ್ಲಿಯೇ ಎಲ್ಲಾ ಕೆಟ್ಟ ವಿಚಾರಗಳನ್ನು ಕಲಿಯಲು ನಾವೇ ದಾರಿ ಮಾಡಿಕೊಡುತ್ತಿದ್ದೇವೆ.

ಹೊಂದಾಣಿಕೆ: ಕಿರಿಯರಾಗಲಿ ಹಿರಿಯರಾಗಲಿ ಟೆಕ್ನಾಲಜಿಯ ಮೊರೆ ಹೋದರೆ ಮುಂದಿನ ದಿನಗಳಲ್ಲಿ ನಾವು ಸಾರ್ವಜನಿಕವಾಗಿ ಎಲ್ಲರ ಜೊತೆ ಹೊಂದಿಕೊಳ್ಳಲು ಕಷ್ಟವಾಗುತ್ತದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss