ಪ್ರತಿದಿನ ಮನೆಯಲ್ಲಿ ನಾವೆಲ್ಲರೂ ಈರುಳ್ಳಿ ಬಳಸುತ್ತೇವೆ ಆದರೆ ಭಾರತದಲ್ಲಿ ಬಿಳಿ ಈರುಳ್ಳಿ ಸಿಗೋದು ತುಂಬಾ ವಿರಳ. ಆದರೆ ಈ ಬಿಳಿ ಈರುಳ್ಳಿ ಸೇವಿಸುವುದರಿಂದ ಆರೋಗ್ಯಕ್ಕೆ ಏನೆಲ್ಲಾ ಲಾಭವಿದೆ ಗೊತ್ತಾ?
ಮಧುಮೇಹ: ಬಿಳಿ ಈರುಳ್ಳಿಯಲ್ಲಿರುವ ಕ್ರೋಮಿಯಂ ಮತ್ತು ಸಲ್ಫರ್ ಅಂಶವು ರಕ್ತದಲ್ಲಿನ ಸಕ್ಕರೆಯನ್ನು ಸಮತೋಲನಕ್ಕೆ ತರುವಲ್ಲಿ ಸಹಕಾರಿಯಾಗಲಿದೆ.
ಕ್ಯಾನ್ಸರ್: ರೋಗಗಳ ವಿರುದ್ಧ ಹೋರಾಡಲು ಈರುಳ್ಳಿಯಲ್ಲಿರುವ ಆಂಟಿ ಆಕ್ಸಿಡೆಂಟ್ ಗಳು ಸಹಾಯ ಮಾಡಲಿದ್ದು, ಕ್ಯಾನ್ಸರ್ ನಂತ ಕಾಯಿಲೆಗಳ ವಿರುದ್ಧ ಹೋರಾಡಲಿದೆ.
ಜೀರ್ಣಕ್ರಿಯೆ: ಈರುಳ್ಳಿಯಲ್ಲಿನ ನಾರಿನಾಂಶವು ಜೀರ್ಣಕ್ರಿಯೆಗೆ ಸಹಕಾರಿಯಾಗಲಿದೆ. ಇದನ್ನು ಪ್ರತಿದಿನ ಸೇವಿಸುವುದರಿಂದ ದೇಹದಲ್ಲಿನ ಕೆಟ್ಟ ಬ್ಯಾಕ್ಟೀರಿಯಾ ದೂರಾಗುತ್ತದೆ.
ಮೂಳೆಗಳಿಗೆ ಶಕ್ತಿ: ಹಿರಿಯ ಮಹಿಳೆಯರಿಗೆ ಅಗತ್ಯವಿರುವ ಪೋಷಕಾಂಶಗಳನ್ನು ಈರುಳ್ಳಿ ಒದಗಿಸುತ್ತದೆ, ಇದು ಮೂಳೆಗಳಿಗೆ ಬಲ ನೀಡುತ್ತದೆ.
ಹೃದಯ: ಬಿಳಿ ಈರುಳ್ಳಿ ಸೇವಿಸುವುದರಿಂದ ದೇಹದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ಇಳಿಸಿ, ಹೃದಯ ಸಂಬಂಧಿ ಕಾಯಿಲೆಗಳಿಂದ ಪಾರು ಮಾಡುತ್ತದೆ.
ನಿದ್ದೆ: ಬಿಳಿ ಈರುಳ್ಳಿಯಲ್ಲಿರುವ ಅಮಿಯೋ ಆಸಿಡ್ ಗಳು ಉತ್ತಮ ನಿದ್ರೆಯನ್ನು ಒದಗಿಸುವಲ್ಲಿ ಸಹಕಾರಿಯಾಗಲಿದೆ.