spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Monday, September 20, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಕರಡಿಗಳು ಫುಟ್ಬಾಲ್ ಆಡುವುದನ್ನು ನೋಡಿದ್ದೀರಾ? ಇಲ್ಲಿದೆ ನೋಡಿ ನಗುವರಳಿಸುವ ದೃಶ್ಯ

- Advertisement -Nitte

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ಹೊಸದಿಗಂತ ಆನ್‌ಲೈನ್ ಡೆಸ್ಕ್:

ನೀವು ದೊಡ್ಡ ಸ್ಟೇಡಿಯಂ ಅಥವಾ ಗಲ್ಲಿಗಳಲ್ಲಿ ಫುಟ್ಬಾಲ್ ಆಡಿರುವುದನ್ನು ನೋಡಿರಬಹುದು. ಎಂದಾದರೂ ಕರಡಿಗಳು ಫುಟ್ಬಾಲ್ ಆಡುವುದನ್ನು ನೋಡಿದ್ದೀರಾ?

ಮೊಗದಲ್ಲೊಂದು ದೊಡ್ಡ ನಗುವರಳಿಸುವ ದೃಶ್ಯವೊಂದು ಇಲ್ಲಿದೆ ನೋಡಿ.  ತಾಯಿ ಮತ್ತು ಮರಿ ಕರಡಿ ಫುಟ್ಬಾಲ್ ಆಡುತ್ತ ಆನಂದದಿಂದ ಕಳೆಯುತ್ತಿರುವ ಅಪೂರ್ವ ದೃಶ್ಯ ಇದು.

ಈ ದೃಶ್ಯ ಒಡಿಶಾದ ನಬರಂಗ್‌ಪುರ ಜಿಲ್ಲೆಯ ಉಮರ್ಕೋಟ್ ಪ್ರದೇಶದ ಸುಕಿಗಾಂವ್‌ನಲ್ಲಿ ಸೆರೆಯಾಗಿದೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ನೆಟ್ಟಿಗರ ಗಮನ ಸೆಲೆದಿದೆ.

ವಿಡಿಯೋದಲ್ಲಿ ಏನಿದೆ?

ಸುಖಿಗಾಂವ್ ಗ್ರಾಮದ ಕೆಲವು ಹುಡುಗರು ಮೈದಾನದಲ್ಲಿ ಫುಟ್ಬಾಲ್ ಆಡುತ್ತಿದ್ದಾಗ ಈ ದೃಶ್ಯ ಸೆರೆಯಾಗಿದೆ. ಕರಡಿಗಳು ಮೈದಾನಕ್ಕೆ ಎಂಟ್ರಿ ಕೊಡುತ್ತಿದ್ದಂತೆಯೇ ಆಟಗಾರರು ಚೆಂಡನ್ನು ಬಿಟ್ಟು ಓಡಿ ಹೋಗುತ್ತಾರೆ. ಕರಡಿಗಳು ಅಲ್ಲೆ ಇರುವ ಚೆಂಡನ್ನು ತಮ್ಮ ಕಾಲುಗಳು ಮತ್ತು ಬಾಯಿಯಿಂದ ಎಸೆಯುತ್ತ ಕೆಲವು ಕ್ಷಣ ಆನಂದದಿಂದ ಕಳೆದಿವೆ.

ಎಎನ್ ಐ ಸುದ್ದಿ ಸಂಸ್ಥೆ  ಈ ದೃಶ್ಯವನ್ನು ತನ್ನ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದೆ. 1 ನಿಮಿಷದ ಈ ವಿಡಿಯೋ ಸಹಜವಾಗಿದೆ ಎಲ್ಲರ ಮನ ಗೆದ್ದಿದೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss