Wednesday, August 10, 2022

Latest Posts

ಹಾವೇರಿ ಪೊಲೀಸರ ಕಠಿಣ ಕ್ರಮ : ಅನಗತ್ಯ ಓಡಾಡುವವರ ಬೈಕ್‌ ಸೀಜ್

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………

ಹೊಸ ದಿಗಂತ ವರದಿ, ಹಾವೇರಿ:

ಲಾಕ್‌ಡೌನ್ ಲಾಗೂ ಆಗುವುದಕ್ಕೂ ಒಂದು ದಿನ ಮುಂಚಿತವಾಗಿನೇ ಹಾವೇರಿ ನಗರದಲ್ಲಿ ಜನರ ಓಡಾಟ ಸೇರಿದಂತೆ ಇತರ ವಿನಾ ಕಾರಣ ಕಾರ್ಯಗಳಿಗೆ ಬ್ರೆಕ್ ಹಾಕುವದಕ್ಕೆ ಪೊಲೀಸರು ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ.
ನಗರದಲ್ಲಿ ವಿನಾಕಾರಣ ಓಡಾಡುವವರಿಗೆ ಬೆತ್ತದ ರುಚಿ ತೋರಿಸುತ್ತಿದ್ದಾರೆ. ಹಾವೇರಿ ತಾಲೂಕಿನ ಗುತ್ತಲ ಠಾಣೆ ಸೇರಿದಂತೆ ಕೆಲ ಠಾಣೆಗಳಲ್ಲಿ ವಿನಾಕಾರಣ ಬೈಕ್‌ನಲ್ಲಿ ಓಡಾಡುವವರ ಬೈಕ್‌ಗಳ್ನು ಸೀಜ್ ಮಾಡಿ ದಾಖಲಾತಿಗಳನ್ನು ಪರಿಶೀಲನೆ ಮಾಡಿ ಸಮರ್ಪಕವಾಗಿದ್ದರೆ ಮಾತ್ರ ಅವರಿಗೆ ಬೈಕ್ ನೀಡುತ್ತಿದ್ದಾರೆ. ಇನ್ನು ಕೆಲ ಪೊಲೀಸ್ ಸಿಬ್ಬಂಧಿ ವಿನಾಕಾರಣ ಓಡಾಡುವವರಿಗೆ ಬಸ್ಕಿ (ಊಟಾಬಸಿ) ತಗೆಸುತ್ತಿರುವುದು ಕಂಡುಬಂದಿತು.
ಗುತ್ತಲ ಠಾಣೆಯ ಪೊಲೀಸ್ ಸಿಬ್ಬಂದಿ ಹಾವೇರಿ ಜಿಲ್ಲೆಯವರನ್ನು ಹೊರತುಪಡಿಸಿ ಬಳ್ಳಾರಿ, ಕೊಪ್ಪಳ, ಗದಗ, ಡಾವಣಗೇರಿ ಸೇರಿದಂತೆ ಇತರ ಕೆಲ ಜಿಲ್ಲೆಗಳಿಂದ ಬೈಕ್, ಟ್ರ್ಯಾಕ್ಸ್, ಕಾರ್ ಸೇರಿದಂತೆ ಇತರೆ ವಾಹನಗಳಲ್ಲಿ ಜಿಲ್ಲೆಯನ್ನು ಪ್ರವೇಶಿಸುವವರ ದಾಖಲಾತಿಗಳನ್ನು ಪರಿಶೀಲನೆ ಮಾಡುವುದೇ ದೊಡ್ಡ ಕೆಲಸವಾಗುತ್ತಿದೆ.
ಮದುವೆ ಸೇರಿದಂತೆ ಇತರೆ ಶುಭ ಕಾರ್ಯಗಳಿಗೆ ಅತ್ಯಧಿಕ ಜನರನ್ನು ಕರೆ ತರುವ ವಾಹನಗಳಿಗೆ ದಂಡ ವಿಧಿಸಿದ್ದಾರೆ. ಅದೇ ರೀತಿ ವಿನಾಕಾರಣ ಓಡಾಡುವ ದ್ವಿಚಕ್ರ ವಾಹನಗಳಿಗೂ ದಂಡವನ್ನು ವಿಧಿಸಿದ್ದಾರೆ.
ಜಿಲ್ಲಾ ಕೇಂದ್ರ ಹಾವೇರಿ ನಗರದಲ್ಲಿ ಪೊಲೀಸ್ ಸಿಬ್ಬಂಧಿಗಳ ಕಠಿಣ ನಿಲುವಿನಿಂದ ಕೆಲ ಯುವಕರು ಕಂಗಾಲಾಗಿದ್ದಲ್ಲದೆ ಅವರ ಸ್ನೇಹಿತರಿಗೆ ಫೊನ್ ಮೂಲಕ ತಿಳಿಸಿ ನೀವು ಬೈಕ್ ತರಬೇಡಿರೆಂದು ಹೇಳುತ್ತಿದ್ದರು. ಪೊಲೀಸರ ಈ ಕ್ರಮದಿಂದ ಕೆಲವೇ ಕ್ಷಣಗಳಲ್ಲಿ ನಗರದಾದ್ಯಂತ ಯುವಕರು ಗುಂಪುಸೇರಿ ಚರ್ಚಿಸುತ್ತಿದ್ದುದು ಕಂಡುಬಂದಿತು. ಈ ಸಂದರ್ಭದಲ್ಲಿ ಪೊಲೀಸ್ ವಾಹನಗಳನ್ನು ನೋಡಿ ಮನೆಯೊಳಗೆ ಓಡುತ್ತಿದ್ದರು. ಅಂತೂ ಯುವಕರಿಗೆ ಪೊಲೀಸ್ ಕ್ರಮ ಸ್ವಲ್ಪಮಟ್ಟಿಗೆ ಬಿಸಿ ಮುಟ್ಟಿಸಸಿದೆ. ಜಿಲ್ಲೆಯ ಗಡಿ ಭಾಗವಾದ ಗುತ್ತಲ ಪೊಲೀಸರ ಕ್ರಮವಂತೂ ಯುವ ಜನತೆಯಲ್ಲದೆ ಸಾರ್ವಜನಿಕರಿಗೂ ಇನ್ನಿಲ್ಲದ ಬಿಸಿ ಮುಟ್ಟಿಸಿದೆ.
ಜಿಲ್ಲಾ ಕೇಂದ್ರ ಹಾವೇರಿ, ಗುತ್ತಲ ಸೇರಿದಂತೆ ಇತರೆಡೆಗಳಲ್ಲಿ ಪೊಲೀಸರು ಕೈಗೊಂಡಿರುವ ಕ್ರಮಗಳಂತೆ ಕಠಿಣ ಕ್ರಮಗಳನ್ನು ಕೈಗೊಂಡು ವಿನಾಕಾರಣ ಓಡಾಡುವವರ ವಿರುದ್ಧ ಕ್ರಮಗಳನನ್ನು ಕೈಗೊಂಡರೆ ಓಡಾಡುವವರ ಸಂಖ್ಯೆ ಕಡಿಮೆ ಆಗುವುದರಲ್ಲಿ ಯಾವದೇ ಸಂಶಯವಿಲ್ಲ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss