ನ್ಯಾಷನಲ್‌ ಹೆರಾಲ್ಡ್‌ ಹಗರಣದಲ್ಲಿ ಹವಾಲಾ ನಂಟು ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ನ್ಯಾಷನಲ್‌ ಹೆರಾಲ್ಡ್‌ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಗರಣದಲ್ಲಿ ಮೂರನೇ ವ್ಯಕ್ತಿ ಮತ್ತು ಘಟಕಗಳ ನಡುವೆ ಹವಾಲಾ ವಹಿವಾಟು ನಡೆದಿದೆ ಎನ್ನಲಾಗುತ್ತಿದ್ದು ಹವಾಲಾ ವಹಿವಾಟಿನ ಕುರಿತು ಪುರಾವೆಗಳನ್ನು ಜಾರಿ ನಿರ್ದೇಶನಾಲಯ (ಇಡಿ) ಕಂಡುಹಿಡಿದಿದೆ ಎಂದು ಮೂಲಗಳು ವರದಿ ಮಾಡಿವೆ. ಯಂಗ್‌ ಇಂಡಿಯಾ ಆವರಣದಲ್ಲಿ ಶೋಧ ಕಾರ್ಯಗಳನ್ನು ಪೂರ್ಣಗೊಳಿಸಿದ ಇಡಿ ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಪ್ರಮುಖ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎನ್ನಲಾಗುತ್ತಿದೆ.

ಹುಡುಕಾಟದ ಸಮಯದಲ್ಲಿ, ಜಾರಿ ನಿರ್ದೇಶನಾಲಯವು ಮುಂಬೈ ಮತ್ತು ಕೋಲ್ಕತ್ತಾದ ಹವಾಲಾ ಆಪರೇಟರ್‌ಗಳಿಂದ ಹವಾಲಾ ವಹಿವಾಟುಗಳನ್ನು ಪ್ರತಿಬಿಂಬಿಸುವ ಸಾಕ್ಷ್ಯ ಹಾಗೂ ಪುರಾವೆಗಳನ್ನು ವಶಪಡಿಸಿಕೊಂಡಿದೆ. ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಹೇಳಿಕೆಗಳನ್ನು ಜಾರಿ ನಿರ್ದೇಶನಾಲಯ ಮರು ಪರಿಶೀಲಿಸುತ್ತಿದೆ.

ಎಜೆಎಲ್ ಮತ್ತು ಯಂಗ್ ಇಂಡಿಯನ್‌ಗೆ ಸಂಬಂಧಿಸಿದ ಎಲ್ಲಾ ಹಣಕಾಸು ನಿರ್ಧಾರಗಳು ಮೋತಿ ಲಾಲ್ ವೋರಾ ಅವರೇ ತೆಗೆದುಕೊಳ್ಳುತ್ತಿದ್ದರು ಎಂಬ ಸೋನಿಯಾ ಗಾಂಧಿ ಮತ್ತು ರಾಹುಲ್ ಅವರ ಹೇಳಿಕೆ ಇಡಿಗೆ ಮನವರಿಕೆಯಾಗಿಲ್ಲ ಎನ್ನಲಾಗುತ್ತಿದೆ. ಅಲ್ಲದೆ, ಕಂಪನಿಯ ಕಾಯಿದೆ ಸೆಕ್ಷನ್ 25ರ ಅಡಿಯಲ್ಲಿ ಯಂಗ್ ಇಂಡಿಯಯಾ ವಿತ್ತೀಯ ಪ್ರಯೋಜನಗಳನ್ನು ಪಡೆದಿಲ್ಲ ಎಂದು ಸೋನಿಯಾ ಮತ್ತು ರಾಹುಲ್ ಗಾಂಧಿಯವರ ವಿವರಣೆಯನ್ನು ಇಡಿ ಮನ್ನಿಸಿಲ್ಲ ಎನ್ನಲಾಗುತ್ತಿದೆ ಎಂದು ಮೂಲಗಳ ವರದಿಗಳು ಹೇಳಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!